ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 22, 2017
ದೀಪಾವಳಿ ಪ್ರಯುಕ್ತ ಕಕ್ಕೆಪ್ಪಾಡಿಯವರಿಂದ ಸಾಹಿತ್ಯ ದೀಪ್ತಿ
ಬದಿಯಡ್ಕ: ಚುಟುಕು ಸಾಹಿತಿ ಕಕ್ಕೆಪ್ಪಾಡಿ ಶಂಕರನಾರಾಯಣ ಭಟ್ ಅವರು ದೀಪಾವಳಿ ಹಬ್ಬದ ಪ್ರಯುಕ್ತ `ಸಾಹಿತ್ಯ ದೀಪ್ತಿ' ಎಂಬ ಹೆಸರಿನಲ್ಲಿ ಮೂರು ದಿನ ಮೂರು ಶಾಲೆಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಕಾಸರಗೋಡು ಹಾಗೂ ದ.ಕ ದ ಶಾಲೆಗಳಿಗೆ ತೆರಳಿ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಹಾಸ್ಯ, ಚುಟುಕು, ಅಭಿನಯ ಗೀತೆ ಮೊದಲಾದ ಕಾರ್ಯಕ್ರಮಗಳನ್ನು ನೀಡಿ ಮಕ್ಕಳನ್ನು ರಂಜಿಸುವ ಭಟ್ಟರು ಕಳೆದ ವರ್ಷದಿಂದ ದಸರಾ ಪ್ರಯುಕ್ತ `ಸಾಹಿತ್ಯ ನವಾಹ' ಎಂಬ ಸರಣಿ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ. ಈ ವರ್ಷದಿಂದ ದೀಪಾವಳಿ ಪ್ರಯುಕ್ತ `ಸಾಹಿತ್ಯ ದೀಪ್ತಿ' ಎಂಬ ಸರಣಿ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದಾರೆ. ನಮ್ಮ ಪರಂಪರೆಯ ಹಬ್ಬಗಳಾದ ನವರಾತ್ರಿ, ದೀಪಾವಳಿ ಆಚರಣೆ ಬಗ್ಗೆ ವಿದ್ಯಾಥರ್ಿಗಳಲ್ಲಿ ಹಾಗೂ ಶಿಕ್ಷಕರಲ್ಲಿ ಜಾಗೃತಿ ಮೂಡಿಸುವುದು ಇದರ ಉದ್ದೇಶ. ಸಾಮಾನ್ಯವಾದ ಕಾರ್ಯಕ್ರಮಗಳೊಂದಿಗೆ ಆಯಾ ಹಬ್ಬಗಳ ಬಗ್ಗೆ ಮಾಹಿತಿ ನೀಡಿ ಹಬ್ಬಗಳನ್ನು ಆಚರಿಸುವಂತೆ ವಿದ್ಯಾಥರ್ಿಗಳನ್ನು ಪ್ರೇರೇಪಿಸುತ್ತಾರೆ. ಈ ಬಾರಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮಧೂರು, ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆ ಸ್ವರ್ಗ ಹಾಗೂ ಸತ್ಯನಾರಾಯಣ ಪ್ರೌಢಶಾಲೆ ಪೆರ್ಲ ಎಂಬೆಡೆಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಿದರು.