HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಸರಕಾರಿ ಕಾಲೇಜಿನಲ್ಲಿ ಯಕ್ಷಕವಿ ಕಾವ್ಯಯಾನ ಕುಮಾರವ್ಯಾಸನ ಬಳಿಕ ಎಲ್ಲರ ಮನಸ್ಸಿನಲ್ಲಿ ನೆಲೆನಿಂತ ಕವಿ ಪಾತರ್ಿಸುಬ್ಬ : ಡಾ.ಎಂ.ಪ್ರಭಾಕರ ಜೋಶಿ ಕಾಸರಗೋಡು: ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಯಕ್ಷಗಾನ ಕವಿಗಳನ್ನು ಅಲಕ್ಷಿಸಿದ್ದು ಬಹುದೊಡ್ಡ ದುರಂತ. ಯಕ್ಷಗಾನ ಕವಿಗಳನ್ನು ಪ್ರಾದೇಶಿಕಗೊಳಿಸಿ ಅವರನ್ನು ಒಂದು ವಲಯಕ್ಕೆ ಮಾತ್ರ ಸೀಮಿತಗೊಳಿಸುವುದು ಸರಿಯಲ್ಲ. ಪಾತರ್ಿಸುಬ್ಬನಂತಹ ಯಕ್ಷಗಾನ ಕವಿಗಳಿಗೆ ಕುಮಾರವ್ಯಾಸ, ರತ್ನಾಕರವಣರ್ಿಯವರಂತಹ ಕವಿಶ್ರೇಷ್ಠರ ಮನ್ನಣೆ ಸಿಗಲೇಬೇಕಾಗಿದೆ. ಯಾಕೆಂದರೆ ಕುಮಾರವ್ಯಾಸನ ಬಳಿಕ ಜನ ಮಾನಸದಲ್ಲಿ ಅಚ್ಚಳಿಯದೆ ನೆಲೆನಿಂತ ಮತ್ತೊಬ್ಬ ಕವಿ ಪಾತರ್ಿಸುಬ್ಬ ಎಂದು ಯಕ್ಷಗಾನದ ಹಿರಿಯ ಅರ್ಥಧಾರಿ, ಸಂಶೋಧಕ ವಿದ್ವಾಂಸ, ಡಾ.ಎಂ.ಪ್ರಭಾಕರ ಜೋಶಿ ಅಭಿಪ್ರಾಯ ಪಟ್ಟರು. ಡಾ.ಪಿ.ದಯಾನಂದ ಪೈ ಮತ್ತು ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ, ಮಂಗಳೂರು ವಿಶ್ವವಿದ್ಯಾನಿಲಯ ಇದರ ಪ್ರಾಯೋಜಕತ್ವದಲ್ಲಿ ಕಾಸರಗೋಡು ಸರಕಾರಿ ಕಾಲೇಜಿನ ಯಕ್ಷಗಾನ ಸಂಶೋಧನ ಕೇಂದ್ರದ ಸಹಕಾರದೊಂದಿಗೆ ನಡೆದ `ಯಕ್ಷ ಕವಿ ಕಾವ್ಯಯಾನ ವಿಶೇಷೋಪಾನ್ಯಾಸ ಕಾರ್ಯಕ್ರಮ'ದಲ್ಲಿ ಅವರು `ಯಕ್ಷಗಾನ ಮತ್ತು ಪಾತರ್ಿಸುಬ್ಬ' ಎಂಬ ವಿಷಯದಲ್ಲಿ ಮಾತನಾಡಿದರು. ತೆಂಕುತಿಟ್ಟು ಯಕ್ಷಗಾನಕ್ಕೆ ಸುಂದರ ಚೌಕಟ್ಟನ್ನು ಪಾತರ್ಿಸುಬ್ಬ ನಿಮರ್ಿಸಿದ್ದಾನೆ. ಹಾಗೆ ನಿಮರ್ಿಸುವಲ್ಲಿ ಅವನಿಗೆ ರಾಮನಾಟಂ, ಕಥಕ್ಕಳಿ ಈ ಮುಂತಾದ ಕಲೆಗಳ ಪ್ರಭಾವವಾಗಿದೆ. ಅದೇ ರೀತಿಯಲ್ಲಿ ಜೈಮಿನಿ ಭಾರತ, ತೊರವೆ ರಾಮಾಯಣ, ಕೃಷ್ಣ ಚರಿತೆ ಈ ಮುಂತಾದ ಕೃತಿಗಳಿಂದ ಪಾತರ್ಿಸುಬ್ಬ ಪ್ರಭಾವಿತನಾಗಿದ್ದಾನೆ. `ರಾಮನಾಟಂ'ನ ದಟ್ಟ ಪ್ರಭಾವ ಪಾತರ್ಿಸುಬ್ಬನ ಪ್ರಸಂಗಗಳಲ್ಲಿ ದಟ್ಟವಾಗಿದ್ದು ವೃತ್ತಗಳ ಬಳಕೆ, ಮಣಿಪ್ರವಾಳ ಶೈಲಿಗಳು ಅದನ್ನು ರುಜುಗೊಳಿಸುತ್ತವೆ. ಪಾತರ್ಿಸುಬ್ಬನ ಕಾಲ ಮತ್ತು ದೇಶದ ಕುರಿತು ಬಹುದೊಡ್ಡ ಚಚರ್ೆಯಾಗಿದ್ದು, ಇದರಿಂದ ಯಕ್ಷಗಾನಕ್ಕೆ ಲಾಭವೇ ಆಯಿತು. ಕವಿ ಪರಿಚಯ ನಾಡಿಗೆ ದೊರಕಿದೆ ಎಂದು ಡಾ.ಎ.ಪ್ರಭಾಕರ ಜೋಶಿ ತಿಳಿಸಿದರು. `ಯಕ್ಷಗಾನ ಮತ್ತು ಕೀರಿಕ್ಕಾಡು ವಿಷ್ಣುಮಾಸ್ತರ್' ಎಂಬ ವಿಷಯದಲ್ಲಿ ಯಕ್ಷಗಾನ ಅರ್ಥಧಾರಿ, ರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಗಣರಾಜ ಕುಂಬಳೆ ಮಾತನಾಡಿ ಕೀರಿಕ್ಕಾಡು ವಿಷ್ಣುಮಾಸ್ತರ್ ಅವರು ಕುಗ್ರಾಮದಿಂದ ಬೆಳೆದು ಬಂದ ಅನನ್ಯ ಪ್ರತಿಭೆ. ಕೇವಲ ಐದನೇ ತರಗತಿಯ ಔಪಚಾರಿಕ ಶಿಕ್ಷಣ ಪಡೆದ ಅವರು ಶಾಲಾ ಮಕ್ಕಳಿಗೆ ಮಾತ್ರವಲ್ಲದೆ, ಊರಿಗೆ, ಯಕ್ಷಗಾನ ಕ್ಷೇತ್ರಕ್ಕೆ ಮಾಸ್ತರ್ ಆದರು. ಸುಮಾರು ಎಂಬತ್ತೆಂಟರಷ್ಟು ಯಕ್ಷಗಾನ ಪ್ರಸಂಗಗಳನ್ನು, ಮೂರು ಕಾದಂಬರಿಗಳನ್ನು, ಕವನ ಸಂಕಲನಗಳನ್ನು ಸಾಹಿತ್ಯ ಲೋಕಕ್ಕೆ ನೀಡಿದ ಅವರು ಯಕ್ಷಗಾನ ಅರ್ಥಧಾರಿಯಾಗಿ, ವೇಷಧಾರಿಯಾಗಿ ಮಾಡಿದ ಸೇವೆ ಗಮನಾರ್ಹವಾದುದು ಎಂದು ಗಣರಾಜ ಕುಂಬಳೆ ಅಭಿಪ್ರಾಯಪಟ್ಟರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಸರಗೋಡು ಸರಕಾರಿ ಕಾಲೇಜಿನ ಪ್ರಾಂಶುಪಾಲ ಡಾ.ಅರವಿಂದ ಕೃಷ್ಣನ್ `ಕಥಕ್ಕಳಿ ಮತ್ತು ಯಕ್ಷಗಾನಕ್ಕೆ ಹಲವು ಸಾಮ್ಯತೆಗಳಿದ್ದರೂ ಕಥಕ್ಕಳಿಯು ವಿದ್ವಾಂಸರಿಗೆ ಮಾತ್ರ ಸೀಮಿತವಾದ ಕಲೆ. ಆದರೆ ಯಕ್ಷಗಾನವು ಸಂಭಾಷಣೆಯ ಮೂಲಕ ಜನಪದರನ್ನು ತಲುಪಿದ ಕಲೆ' ಎಂದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಹಿರಿಯ ಯಕ್ಷಗಾನ ಅರ್ಥಧಾರಿ ಡಾ.ರಮಾನಂದ ಬನಾರಿ ಮಾತನಾಡಿ, ಯಕ್ಷಗಾನ ಕವಿಗಳ ಮಹತ್ವವನ್ನು, ಯಕ್ಷಗಾನ ಸಾಹಿತ್ಯ ಮೌಲ್ಯವನ್ನು ಹೊಸ ತಲೆಮಾರಿಗೆ ತಿಳಿಸುವ ಯಕ್ಷ ಕವಿ ಕಾವ್ಯಯಾನ ಸರಣಿ ಕಾರ್ಯಕ್ರಮವು ಅರ್ಥಪೂರ್ಣವಾದುದು. ಪಾತರ್ಿಸುಬ್ಬನು ಹಾಕಿ ಕೊಟ್ಟ ಪಥದಲ್ಲಿ ಬೆಳೆದು ಬಂದ ಹಲವಾರು ಯಕ್ಷಗಾನ ಕವಿಗಳು ತಾವು ಬೆಳೆದು, ಯಕ್ಷಗಾನವನ್ನು ಬೆಳೆಸಿದರು. ಕೀರಿಕ್ಕಾಡು ವಿಷ್ಣು ಮಾಸ್ತರ್ ಕೂಡ ಅಂತಹ ಪ್ರಮುಖರಲ್ಲಿ ಒಬ್ಬರು ಎಂದರು. ಕನ್ನಡ ವಿಭಾಗ ಮುಖ್ಯಸ್ಥೆ ಸುಜಾತ ಎಸ್. ಶುಭಾಶಂಸನೆಗೈದರು. ದಿತಿ ಜಿ.ಬಿ, ಪವಿತ್ರ ಇ, ಸುನೀತ ಬಿ, ಅನುರಾಧ ಕೆ, ವೃಂದಾ ಬಿ.ಜಿ, ಕಾವ್ಯ ಪಿ, ಶ್ರದ್ಧಾ ಭಟ್ ನಾಯರ್ಪಳ್ಳ ಅವರಿಂದ ಯಕ್ಷಕಾವ್ಯಯಾನ ನಡೆಯಿತು. ಮಂಗಳೂರು ವಿಶ್ವವಿದ್ಯಾನಿಲಯದ ಯಕ್ಷಗಾನ ಅಧ್ಯಯನ ಕೇಂದ್ರದ ಸಂಯೊಜಕ ಡಾ.ಧನಂಜಯ ಕುಂಬಳೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾಸರಗೋಡು ಸರಕಾರಿ ಕಾಲೇಜಿನ ಯಕ್ಷಗಾನ ಸಂಶೋಧನ ಕೇಂದ್ರದ ಸಂಯೋಜಕ ಡಾ.ರತ್ನಾಕರ ಮಲ್ಲಮೂಲೆ ಸ್ವಾಗತಿಸಿ, ಡಾ.ರಾಧಾಕೃಷ್ಣ ಬೆಳ್ಳೂರು ವಂದಿಸಿದರು. ಉಪನ್ಯಾಸಕಿ ಬಬಿತಾ ಎ. ಕಾರ್ಯಕ್ರಮ ನಿರೂಪಿಸಿದರು. ಅಡೂರು ಉಮೇಶ್ ನಾಕ್, ತೆಕ್ಕೆಕರೆ ಶಂಕರನಾರಾಯಣ ಭಟ್, ಎಸ್.ವಿ.ಭಟ್, ರಾಧಾಕೃಷ್ಣ ಕೆ.ಉಳಿಯತಡ್ಕ, ದಿವ್ಯಶ್ರೀ ಡೆಂಬಳ, ಸತೀಶ್ ಕೋಣಾಜೆ, ಎ.ಎಲ್.ಅನಂತಪದ್ಮನಾಭ, ಗೋಪಾಲಕೃಷ್ಣ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries