ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 16, 2017
ಕೇಳು ಮಾಸ್ತರ್ಗೆ ಕನ್ನಡ ಸಾಹಿತ್ಯ ಪರಿಷತ್ತು ದತ್ತಿ ಪ್ರಶಸ್ತಿ ಪ್ರದಾನ
ಬದಿಯಡ್ಕ: ಕನರ್ಾಟಕ ಸರಕಾರದ ಕನ್ನಡ ಸಾಹಿತ್ಯ ಪರಿಷತ್ತು ಜಾನಪದ ವಿಭಾಗದ ಕೃತಿಗೆ ನೀಡುವ ದತ್ತಿ ಪ್ರಶಸ್ತಿ ಪುರಸ್ಕಾರ ಸಾಹಿತಿ ಕೇಳು ಮಾಸ್ತರ್ ಅಗಲ್ಪಾಡಿ ಅವರಿಗೆ ಪ್ರದಾನ ಮಾಡಲಾಯಿತು.
ಭಾನುವಾರ ಬೆಂಗಳೂರಿನ ಸಾಹಿತ್ಯ ಪರಿಷತ್ನ ಶ್ರೀಕೃಷ್ಣರಾಜ ಪರಿಷತ್ತು ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಖ್ಯಾತ ವಿಮರ್ಶಕ ಡಾ. ಸಿ.ಎನ್. ರಾಮಚಂದ್ರನ್ ಕೇಳು ಮಾಸ್ತರ್ ಅವರಿಗೆ ದತ್ತಿ ಪ್ರಶಸ್ತಿ ಪ್ರಧಾನಗೈದರು. ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ. ಮನು ಬಳಿಗಾರ್ ಅಧ್ಯಕ್ಷತೆ ವಹಿಸಿದರು. ಹಿರಿಯ ವಿದ್ವಾಂಸ ಡಾ. ಗುರುಲಿಂಗ ಕಾಪ್ಸೆ, ಗೌರವ ಕಾರ್ಯದಶರ್ಿ ಡಾ. ರಾಜಶೇಖರ ಹತಗುಂದಿ, ವ.ಚ.ಚನ್ನೇಗೌಡ, ಗೌರವ ಕೋಶಾಧ್ಯಕ್ಷ ಪಿ.ಮಲ್ಲಿಕಾಜರ್ುನಪ್ಪ ಮತ್ತಿತರರು ಉಪಸ್ಥಿತರಿದ್ದರು. ಪ್ರಶಸ್ತಿಯೊಂದಿಗೆ ನಗದು ಪುರಸ್ಕಾರ, ಪ್ರಶಸ್ತಿ ಪತ್ರ ಒಳಗೊಂಡಿದೆ.
ಸುಬ್ಬಯ್ಯಕಟ್ಟೆಯ ಕೈರಳಿ ಪ್ರಕಾಶನವು ಹೊರತಂದಿರುವ ಮಾಸ್ತರ್ ಅವರ ಕಥಕ್ಕಳಿ ಕೃತಿಗೆ ದತ್ತಿ ಪ್ರಶಸ್ತಿ ಲಭಿಸಿದೆ. ಕಥಕಳಿ ಮೊದಲ ಆವೃತ್ತಿಯನ್ನು ಕನರ್ಾಟಕ ಸರಕಾರದ ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರ ಮೂತರ್ಿ ಮತ್ತು ದ್ವಿತೀಯಾವೃತ್ತಿಯನ್ನು ಕೇರಳ ಸರಕಾರದ ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತಲ ಬಿಡುಗಡೆಗೊಳಿಸಿದ್ದರು. ಕೇಳು ಮಾಸ್ತರ್ರ `ಕೇರಳದ ತೆಯ್ಯಂ' ಕೃತಿಯು ಕನರ್ಾಟಕ ಜಾನಪದ ಅಕಾಡೆಮಿ ಶ್ರೇಷ್ಠ ಜಾನಪದ ಕೃತಿ ಪ್ರಶಸ್ತಿ ಪಡೆದುಕೊಂಡಿತ್ತು.