ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 29, 2017
ಬಾಲವಿಕಾಸ ತರಗತಿಗಳ ಮೂಲಕ ಸಂಪೂರ್ಣ ವ್ಯಕ್ತಿತ್ವ ವಿಕಸನ ಸಾಧ್ಯ
ಕುಂಟಗೇರಡ್ಕ ಜಿಡಬ್ಲ್ಯುಎಲ್ಪಿ ಶಾಲೆಯಲ್ಲಿ ಬಾಲವಿಕಾಸ ಗುರುಗಳ ತರಬೇತಿ ಶಿಬಿರ
ಕುಂಬಳೆ: ಯುವ ಜನತೆ ಅಂದರೆ ಶಕ್ತಿ, ಸ್ಪೂತರ್ಿ, ಉತ್ಸಾಹದ ಚಿಲುಮೆಗಳು ಎಂದರ್ಥ. ಅವರ ಸಾಮಥ್ರ್ಯವನ್ನು ಸದ್ಭಳಕೆ ಮಾಡುವಂತೆ ಮಾಡುವುದೇ ಶಿಬಿರಗಳ ಉದ್ದೇಶ. ಯುವ ಜನತೆ ಬಾಲವಿಕಾಸ ತರಗತಿಗಳನ್ನು ಮಾಡುವ ಮೂಲಕ ತಮ್ಮ ಸಾಮಥ್ರ್ಯದ ಅರಿವನ್ನು ಸಂಪಾದಿಸುವುದರೊಂದಿಗೆ ಮುಂದಿನ ಜನಾಂಗದ ಸಂಪೂರ್ಣ ವ್ಯಕ್ತಿತ್ವ ವಿಕಸನಕ್ಕೆ ಕಾರಣರಾಗುತ್ತಾರೆ ಎಂದು ಕಾಸರಗೋಡು ಶ್ರೀ ಸತ್ಯಸಾಯಿ ಸೇವಾ ಸಮಿತಿಗಳ ಜಿಲ್ಲಾಧ್ಯಕ್ಷ ಶಿವರಾಮ ಕಜೆ ಅವರು ಅಭಿಪ್ರಾಯಪಟ್ಟರು.
ಸತ್ಯಸಾಯಿ ಸೇವಾಸಂಸ್ಥೆಗಳು ಕನರ್ಾಟಕ ಕಾಸರಗೋಡು ಜಿಲ್ಲೆ ಇದರ ಆಶ್ರಯದಲ್ಲಿ ಶ್ರೀ ಸತ್ಯಸಾಯಿ ವಿದ್ಯಾಜ್ಯೋತಿ ಯೋಜನೆಯನ್ವಯ ಜಿಲ್ಲೆಯಲ್ಲಿ ದತ್ತು ತೆಗೆದುಕೊಂಂಡಿರುವ ಕುಂಬಳೆಯ ಜಿಡಬ್ಲ್ಯುಎಲ್ಪಿ ಕುಂಟಗೇರಡ್ಕ ಶಾಲೆಯಲ್ಲಿ ಭಾನುವಾರ ನಡೆದ ಬಾಲವಿಕಾಸ ಗುರುಗಳ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಶುದ್ಧ ಚಾರಿತ್ರ್ಯ ನಿಮರ್ಾಣದೊಂದಿಗೆ ಜೀವನದ ದಾರಿಯನ್ನು ತೋರಿಸುವ ಕೈಕಂರ್ಯವನ್ನು ಇಂತಹ ತರಗತಿಗಳಿಂದ ಸದುಪಯೋಗಪಡಿಸಿಕೊಳ್ಳ ಬೇಕು. ಶಾಂತಿಯುತ ಬದುಕಿಗೆ ಕಾಮ, ಕ್ರೋಧ, ಲೋಭ, ಮೋಹ, ಮದ ಮಾತ್ಸರ್ಯಗಳು ಅಡ್ಡಿಯಾಗುತ್ತದೆ. ಷಡ್ವೈರಿಗಳನ್ನು ಕೇವಲ ಪ್ರೇಮದಿಂದ ಮಾತ್ರ ಗೆಲ್ಲಲು ಸಾಧ್ಯ. ಆದ್ದರಿಂದ ಮನುಷ್ಯ ತನ್ನ ಅಂತರಾಳದಲ್ಲಿ ಪ್ರೇಮವನ್ನು ಬೆಳೆಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ದ.ಕ.ಜಿಲ್ಲಾ ಶೈಕ್ಷಣಿಕ ಸಂಯೋಜಕಿ ಅಂಬಾ ಹೊಳ್ಳ ಅವರು ಭಾಗವಹಿಸಿ, ಮನುಷ್ಯ ಹುಟ್ಟಿದಂದಿನಿಂದ ಸಾಯುವವರೆಗೂ ವಿದ್ಯಾಥರ್ಿಯಾಗಿರುತ್ತಾರೆ. ಜ್ಞಾನ ಸಂಪಾದನೆ ಪ್ರಕ್ರಿಯೆ ನಿರಂತರವಾಗಿರುತ್ತದೆಯೇ ವಿನಃ ಅದಕ್ಕೆ ಅಂತ್ಯವೆಂಬುವುದಿಲ್ಲ ಎಂದು ತಿಳಿಸಿದರು.
ಕುಂಟಗೇರಡ್ಕ ಜಿಡಬ್ಲ್ಯುಎಲ್ಪಿ ಶಾಲಾ ಮುಖ್ಯ ಶಿಕ್ಷಕ ರಾಮಚಂದ್ರ ಭಟ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಯುವ ಸಂಚಾಲಕ ಕೃಷ್ಣಪ್ರಸಾದ್ ಕಾಟುಕುಕ್ಕೆ ಉಪಸ್ಥಿತರಿದ್ದರು. ರಾಮಚಂದ್ರ ಐಲ ಕಾರ್ಯಕ್ರಮ ನಿರ್ವಹಿಸಿದರು.
ದ.ಕ.ಜಿಲ್ಲಾ ಸತ್ಯಸಾಯಿ ಸಮಿತಿಗಳ ವಸಂತಿ ಕಾಮತ್, ಮೂಕಾಂಬಿಕಾ.ಎನ್.ರಾವ್, ಸುರೇಖಾ ಪೈ, ವಿಜಯಲಕ್ಷ್ಮೀ ಕಾಮತ್, ಜಲಜಾ ಹೆಬ್ಬಾರ್, ಮಂಜುಳಾ ರಾವ್ ಮತ್ತು ಶಾಂತಿ ಭಟ್ ತರಬೇತಿ ಶಿಬಿರದ ಸಂಪನ್ಮೂಲಕ ವ್ಯಕ್ತಿಗಳಾಗಿ ಭಾಗವಹಿಸಿ ವಿವಿಧ ತರಗತಿಗಳನ್ನು ನಡೆಸಿಕೊಟ್ಟರು. ಕಾಸರಗೋಡು, ಮಧೂರು, ಶಿರಿಯಾ, ಕಾಟುಕುಕ್ಕೆ, ಉಪ್ಪಳ ಮತ್ತು ಬಾಯಾರು ಶ್ರೀಸತ್ಯಸಾಯಿ ಸಮಿತಿಗಳ 29 ಮಂದಿ ಸದಸ್ಯರು ಮತ್ತು ಕುಂಟಗೇರಡ್ಕ ಜಿಡಬ್ಲ್ಯುಎಲ್ಪಿ ಶಾಲೆಯ ಮೂವರು ಶಿಕ್ಷಕಿಯರು ಶಿಬಿರದಲ್ಲಿ ಭಾಗವಹಿಸಿ ಪ್ರಯೋಜನವನ್ನು ಪಡೆದರು.