ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 13, 2017
ಕೊರಿಯಾ ಮೇಲೆ ಹಾರಿದ ಅಮೆರಿಕದ ಬಾಂಬರ್ ವಿಮಾನಗಳು
ವಾಷಿಂಗ್ಟನ್: ಕೊರಿಯಾ ಪಯರ್ಾಯ ದ್ವೀಪದ ಮೇಲೆ ಅಮೆರಿಕದ ಎರಡು ಪ್ರಬಲ ಬಾಂಬರ್ ಯುದ್ಧವಿಮಾನಗಳು ಹಾರಾಟ ನಡೆಸಿ, ಸಾಮಥ್ರ್ಯ ಪ್ರದಶರ್ಿಸಿವೆ. ರಾತ್ರಿ ವೇಳೆ ನಡೆದ ಮೊದಲ ಜಂಟಿ ಕಾಯರ್ಾಚರಣೆ ಇದು ಎಂದು ಅಮೆರಿಕ ಹೇಳಿದೆ. ಜಂಟಿ ಕಾಯರ್ಾಚರಣೆಯಲ್ಲಿ ದಕ್ಷಿಣ ಕೊರಿಯಾ ಹಾಗೂ ಜಪಾನ್ ಭಾಗಿಯಾಗಿದ್ದವು. ಗುವಾಮ್ನಲ್ಲಿ ಬೀಡುಬಿಟ್ಟಿರುವ ಅಮೆರಿಕದ ಬಿ?1ಬಿ ಲ್ಯಾನ್ಸರ್ ಬಾಂಬರ್ ವಿಮಾನಗಳು ಹಾರಾಟ ನಡೆಸಿದವು. ಇದು ದೈನಂದಿನ ಸೇನಾ ಕಸರತ್ತು ಎಂದು ಅಮೆರಿಕ ಹೇಳಿಕೊಂಡಿದೆ.
ಉತ್ತರ ಕೊರಿಯಾದ ಪ್ರಚೋದನೆಗೆ ತಕ್ಕ ಪ್ರತ್ಯುತ್ತರ ನೀಡಲು ಇರುವ ಇತರ ಆಯ್ಕೆಗಳ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಂಗಳವಾರ ತಮ್ಮ ಸೇನಾ ಸಲಹೆಗಾರರ ಜೊತೆ ಮಾತುಕತೆ ನಡೆಸಿದರು.
ಉತ್ತರ ಕೊರಿಯಾ ಜತೆ ಯಾವುದೇ ರಾಜತಾಂತ್ರಿಕ ಯತ್ನಗಳು ಕೆಲಸ ಮಾಡುತ್ತಿಲ್ಲ ಎಂದು ಟ್ರಂಪ್ ಅವರು ಸಭೆಯಲ್ಲಿ ಹೇಳಿದರು ಎಂದು ಮೂಲಗಳು ತಿಳಿಸಿವೆ.
ಫೆಬ್ರುವರಿಯಿಂದೀಚೆಗೆ ಉತ್ತರ ಕೊರಿಯಾವು 15 ಬಾರಿ ಕ್ಷಿಪಣಿ ಪರೀಕ್ಷೆ ನಡೆಸಿದ್ದು, ಅಮೆರಿಕ ಹಾಗೂ ಅದರ ಮಿತ್ರದೇಶಗಳ ಕೆಂಗಣ್ಣಿಗೆ ಗುರಿಯಾಗಿದೆ. ಜಪಾನ್ ಮೇಲೆ ಕ್ಷಿಪಣಿ ಹಾರಿಸಿದ್ದ ಉತ್ತರ ಕೊರಿಯಾ, 6ನೇ ಬಾರಿ ಪರಮಾಣು ಪರೀಕ್ಷೆ ನಡೆಸಿತ್ತು.