ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 31, 2017
ವಿದ್ಯಾಥರ್ಿಗಳು ಶಿಕ್ಷಣದ ಜೊತೆಗೆ ಆಹಾರೋತ್ಪನ್ನಗಳ ಮಾಹಿತಿಯನ್ನೂ ಅರಿತಿರಬೇಕು-ಡಾ. ಮುರಲಿಕೃಷ್ಣ ಹಳೆಮನೆ
ಕುಂಬಳೆ: ವಿದ್ಯಾಥರ್ಿಗಳು ಪಾಠ ಕಲಿಕೆಯೊಂದಿಗೆ ನಮ್ಮ ವಿಶೇಷ ಬೆಳೆಯಾದ ತೆಂಗು ಹಾಗೂ ದವಸ ಧಾನ್ಯಗಳನ್ನು ಬೆಳೆಯುವ,ಅವುಗಳ ರಕ್ಷಣೆಮಾಡುವ ಬಗ್ಗೆ ಅರಿತಿರಬೇಕು. ಅಶನ,ವಸನ,ಅಕ್ಷರದ ಬಗ್ಗೆ ತಿಳಿಯುವ ಕುತೂಹಲ ಬೆಳೆಸಿಕೊಳ್ಳಬೇಕಾದ್ದು ಅನಿವಾರ್ಯ. ಶ್ರೀರಾಮಚಂದ್ರಾಪುರ ಮಠದ ಶಿಕ್ಷಣ ಸಂಸ್ಥೆಯ ಮಕ್ಕಳು ಎಳವೆಯಲ್ಲೇ ಸಂಸ್ಕೃತಿ, ಸಂಸ್ಕಾರದ ಬಗ್ಗೆ ತಿಳಿದುಕೊಂಡಿರುವುದು ಹೆಮ್ಮೆಯ ವಿಚಾರ ಎಂದು ಕಾಸರಗೋಡು ಸಿ.ಪಿ.ಸಿ.ಆರ್.ಐ ಯ ಹಿರಿಯ ತಾಂತ್ರಿಕ ಅಧಿಕಾರಿ ಡಾ.ಮುರಲಿಕೃಷ್ಣ ಹಳೆಮನೆ ಅಭಿಪ್ರಾಯ ವ್ಯಕ್ತಪಡಿಸಿದರು.
ಮುಜುಂಗಾವು ಶ್ರೀಭಾರತಿ ವಿದ್ಯಾಪೀಠದಲ್ಲಿ ಇತ್ತೀಚೆಗೆ ನಡೆದ ತಿಂಗಳ ಪ್ರತಿಭಾ ಭಾರತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಹತ್ತನೇ ತರಗತಿ ವಿದ್ಯಾಥರ್ಿನಿ ಪ್ರಜ್ಞಾ ಎಮ್ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪುರುಷೋತ್ತಮ ಆಚಾರ್ಯ, ಆಡಳಿಸಮಿತಿ ಕಾರ್ಯದಶರ್ಿ ಶ್ಯಾಮರಾಜ ದೊಡ್ಡಮಾಣಿ, ಆಡಳಿತಾಧಿಕಾರಿ ಶ್ಯಾಂಭಟ್ ,ಮುಖ್ಯಶಿಕ್ಷಕಿ ಚಿತ್ರಾಸರಸ್ವತಿ ಪೆರಡಾನ ಉಪಸ್ಥಿತರಿದ್ದರು. ಪ್ರಜ್ಞಾ ಬಿ. ಸ್ವಾಗತಿಸಿ, ವೈಶಾಲಿ ವಂದಿಸಿದರು. ನಾಲ್ಕನೇ ತರಗತಿ ಅನಿರುದ್ಧ ಹಾಗೂ ಎಂಟನೇ ತರಗತಿ ಶ್ರೀಲೇಖ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿದ್ಯಾಥರ್ಿಗಳಿಂದ ವಿವಿಧ ಸಾಂಸ್ಕೃತಿಕ ಪ್ರದರ್ಶನಗಳು ನಡೆದವು.