ಕನ್ನಡ ಚಿಂತನ
ಕಾಸರಗೋಡು: ಸಾಮಾಜಿಕ, ಸಾಂಸ್ಕೃತಿಕ ಬೇರುಗಳು ಗಟ್ಟಿಯಾಗಿರುವ ಕಾಲನಿಗಳನ್ನು ಕೇಂದ್ರೀಕರಿಸಿ ವರ್ತಮಾನದ ಅಭಿವೃದ್ದಿ ಚಟುವಟಿಕೆಗಳನ್ನು ಜೋಡಿಸುವ ಅಗತ್ಯವಿದೆ. ಕಾಲನಿಗಳು ಮಾನವೀಯತೆ, ಪಾರಂಪರಿಕ ಜೀವನಕ್ರಮ ಸಹಿತ ಸಾಗಿಬಂದ ನಾಗರೀಕತೆಯ ದ್ಯೋತಕಗಳಾಗಿ ಮರೆತಿರುವುದನ್ನು ನೆನಪಿಸುವಲ್ಲಿ ಪ್ರೇರಣಾತ್ಮಕವಾಗಿ ಮಾರ್ಗದಶರ್ಿಯಾದೆ ಎಂದು ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ಕಾರ್ಯದಶರ್ಿ ಅಹಮ್ಮದ್ ಹುಸೈನ್ ಪಿ.ಕೆ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಸರಗೋಡಿನ ಅಪೂರ್ವ ಕಲಾವಿದರು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಸಹಯೋಗದೊಂದಿಗೆ ಹಮ್ಮಿಕೊಳ್ಳುತ್ತಿರುವ ತಿಂಗಳ ಕಾರ್ಯಕ್ರಮ ಕನ್ನಡ ಚಿಂತನೆಯ ಭಾಗವಾಗಿ ಭಾನುವಾರ ಸಂಜೆ ಕಾಸರಗೋಡು ಅಮೈ ಕಾಲನಿ ಸಮುದಾಯ ಭವನದಲ್ಲಿ ನಡೆಸಿದ ವಿಶೇಷ ಚಿಂತನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಕನರ್ಾಟಕ ನಾಟಕ ಅಕಾಡೆಮಿ ಸದಸ್ಯ, ರಂಗಕಮರ್ಿ ಬಾಸುಮ ಕೊಡಗು ಅವರು ಕನ್ನಡ ನಾಟಕಗಳಲ್ಲಿ ರಂಗಗೀತೆಗಳ ಮಹತ್ವದ ಬಗ್ಗೆ ವಿಶೇಷೋಪನ್ಯಾಸ ನೀಡಿ ಮಾತನಾಡಿ, ಸಾಂಸ್ಕೃತಿಕ ಸಂಬಂಧ, ಮಾನವೀಯತೆಗಳನ್ನು ಬೆಳೆಸುವಲ್ಲಿ ಕನ್ನಡ ಚಿಂತನೆಗಳಂತಹ ಕಾರ್ಯಕ್ರಮಗಳು ಉತ್ತಮ ಕಾರ್ಯಚಟುವಟಿಕೆಯಾಗಿದೆ. ಪರಸ್ಪರ ಸಾಂಸ್ಕೃತಿಕತೆಯನ್ನು ಹಂಚುವುದು ಇತರರ ಬಗ್ಗೆ ಹೆಚ್ಚು ಅರಿವು ಮೂಡಿಸುವಲ್ಲಿ ಯಶಸ್ವಿಯಾಗುವುದು ಎಮದು ತಿಳಿಸಿದರು.ಭೌಗೋಳಿಕವಾಗಿ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನತೆಗಳಿದ್ದು ಅವನ್ನು ಗುರುತಿಸಿ ಪ್ರೀತ್ಸಾಹಿಸುವ ನಿಟ್ಟಿನ ಚಟುವಟಿಕೆಗಳು ಇನ್ನಷ್ಟು ವಿಸ್ತರಿಸುವ ಅಗತ್ಯವಿದ್ದು, ಮಣ್ಣಿನ ಮೂಲ ಸತ್ವನ್ನು ಪ್ರೀತಿಸಲು ಇದು ಪ್ರೇರಣೆ ನೀಡುತ್ತದೆ ಎಂದು ತಿಳಿಸಿದರು.
ನಗರಸಭಾ ಮಾಜಿ ಅಧ್ಯಕ್ಷ ಎಸ್.ಜೆ.ಪ್ರಸಾದ್ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಅಪೂರ್ವ ಕಲಾವಿದರು ಸಂಸ್ಥೆಯ ಅಧ್ಯಕ್ಷ, ರಂಗಕಮರ್ಿ ಎಂ.ಉಮೇಶ್ ಸಾಲ್ಯಾನ್ ಕಾಸರಗೋಡು ಪ್ರಾಸ್ತಾವಿಕವಾಗಿ ಮಾತನಾಡಿ, ವರ್ತಮಾನದ ಬದುಕು ಮತ್ತು ಅಂತರಂಗದೊಳಗಿನ ಸಂಘರ್ಷಗಳ ಬೆಳಕುಚೆಲ್ಲುವಲ್ಲಿ ರಂಗಗೀತೆಗಳು ಜನರಿಗೆ ನಿಕಟವಾಗಿ ಹೆಚ್ಚು ಮಹತ್ವದ್ದಾಗಿ ಗುರುತಿಸಿಕೊಳ್ಳುತ್ತಿದೆ. ಆಧುನಿಕ ಜನಜೀವನ ಹೊಸತರತ್ತ ಹೊರಳುವ ಸಂಧಿಕಾಲದಲ್ಲಿ ಅಂತಮರ್ುಖಿಗಳಾಗಿ ಚಿಂತನೆಗೆ ಹಚ್ಚುವ ರಂಗಗೀತೆಗಳ ಬಗೆಗಿನ ಜಾಗೃತಿ ಅಪೂರ್ವ ಕಲಾವಿದರು ಸಂಸ್ಥೆಯ ಮೂಲಕ ಮಾಡಲಾಗುತ್ತಿದೆ ಎಮದು ತಿಳಿಸಿದರು. ಗಡಿನಾಡಿನಲ್ಲಿ ರಂಗಗೀತೆಗಳ ಬಗೆಗಿನ ಕಾರ್ಯಚಟುವಟಿಕೆಗಳ ಮಾಹಿತಿಯನ್ನು ವಿಸ್ಕೃತವಾಗಿ ನೀಡಿದರು.
ರಂಗಕಮರ್ಿ ಕೃಷ್ಣಪ್ಪ ಬಂಬಿಲ, ಸಾಮಾಜಿಕ ಕಾರ್ಯಕರ್ತ ಆನಂದ ಅಮೈ, ಸಂಗೀತ ಶಿಕ್ಷಕ ಉಮೇಶ್ ಮಾಸ್ತರ್ ಉಪಸ್ಥಿತರಿದ್ದು ಶುಭಹಾರೈಸಿದರು. ಜಗನ್ನಾಥ ಶೆಟ್ಟಿ ಸ್ವಾಗತಿಸಿ, ಸಾಯಿರತ್ನ ಬಾಲಕೃಷ್ಣ ವಂದಿಸಿದರು.ಸುಶ್ಮಿತಾ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಬಾಸುಮ ಕೊಡಗು ಮತ್ತು ತಂಡ ಹಾಗು ಸ್ಥಳೀಯ ಪ್ರತಿಭೆಗಳಿಂದ ರಮಗಗೀತೆಗಳ ಗಾಯನ ನಡೆಯಿತು.