ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 03, 2017
ಸಂಸ್ಕೃತ ನಾಟಕ ಶಿಬಿರ ಆರಂಭ
ಮುಳ್ಳೇರಿಯ: ವರ್ತಮಾನದ ವಿದ್ಯಮಾನಗಳನ್ನು ಕೇಂದ್ರವಾಗಿರಿಸಿ ಭೂತಕಾಲದ ಅನುಭವಗಳನ್ನು ಕ್ರಮೀಕರಿಸಿ, ಭವಿಷ್ಯತ್ತಿನ ನೋಟಗಳ ಕಲ್ಪನೆಯೊಂದಿಗೆ ಬೆಸೆದು ಅಂತರಂಗವನ್ನು ಎಚ್ಚರಿಸುವ, ಗಮಿಸುವ ಹಾದಿಗಳನ್ನು ತೋರಿಸುವ ಯತ್ನಗಳನ್ನು ರಂಗಭೂಮಿ ನಾಟಕಗಳ ಮೂಲಕ ತೋರಿಸಿಕೊಡಲಾಗುತ್ತದೆ. ಇದು ಸವರ್ಾಂಗೀಣ ಅಭಿವೃದ್ದಿಗೆ ಪೂರಕ ಜೊತೆಗೆ ಮನೋರಂಜನೆಯೂ ಸಾಧ್ಯ ಎಂದು ಖ್ಯಾತ ರಂಗ ಕಲಾವಿದ ಕಿರಣ್ ಕಲಾಂಜಲಿ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ನಾಟೆಕಲ್ಲಿನ ಬೆಳ್ಳೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಇತ್ತೀಚೆಗೆ ವಿದ್ಯಾಥರ್ಿಗಳಿಗಾಗಿ ಆಯೋಜಿಸಲಾಗಿದ್ದ ಸಂಸ್ಕೃತ ನಾಟಕ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಕಲೆ ನಾಟಕಗಳ ಮೂಲಕ ಸಾಮಾಜಿಕ ಪರಿವರ್ತನೆಗೆ ಸಾಧ್ಯವಿದೆ. ಸಂಸ್ಕೃತ ಸಹಿತ ಇತರ ಭಾಷೆಗಳಿಂದೊಡಗೂಡಿದ ಭಾರತೀಯ ರಂಗಭೂಮಿ ವಿದೇಶಿ ರಂಗಭೂಮಿಗಿಂತ ಭಿನ್ನವಾಗಿ ನೆಲದ ಸಾಂಸ್ಕೃತಿಕತೆಯೊಂದಿಗೆ ಬೆಳೆದು ಜನಸಾಮಾನ್ಯರಿಗೆ ನಿಕಟವಾಗಿ ವಿಸ್ಕೃತವಾಗಿ ಬೆಳೆದಿದೆ ಎಂದು ಅವರು ತಿಳಿಸಿದರು. ಮಹಾಕವಿಗಳಾದ ಭಾಸ, ಭವಭೂತಿ, ಕಾಳಿದಾಸರಂತವರಿಂದ ಅತ್ಯದ್ಬುತವಾದ ನಾಟಕಗಳನ್ನು ಪಡೆದಿರುವ ಭಾರತೀಯ ರಂಗಭೂಮಿಯ ಬಗೆಗೆ ವಿದ್ಯಾಥರ್ಿಗಳು ಹೆಚ್ಚು ತಿಳಿಯುವ ನಿಟ್ಟಿನ ಪ್ರಯತ್ನಗಳು ಆಗಬೇಕು. ಇದರಿಂದ ಜ್ಞಾನದೊಡನೆ, ನಮ್ಮೊಳಗೆ ಅಡಕಗೊಂಡಿರುವ ಕಲಾವಂತಿಕೆ ಹೊರ ಪ್ರಪಂಚಕ್ಕೆ ಪರಿಚಯಗೊಂಡು ಯಶಸ್ಸಿನ ಭವಿಷ್ಯಕ್ಕೆ ದಾರಿಯಾಗುವುದು ಎಂದು ಅವರು ತಿಳಿಸಿದರು.
ಮುಖ್ಯೋಪಾಧ್ಯಾಯಿನಿ ವಾರಿಜಾ ನೇರೋಳು ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಕವಿ, ಸಾಹಿತಿ ಕೃಷ್ಣ ಜೆ.ರಾವ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿ, ಎಳೆಯ ಹರೆಯದಲ್ಲಿ ಲಭಿಸುವ ರಂಗಭೂಮಿ ಶಿಕ್ಷಣದಂತಹ ವ್ಯವಸ್ಥೆಗಳು ಭಾವೀ ಬದುಕಿನಲ್ಲಿ ಉತ್ತಮ ಕಲಾವಿದನಾಗಿ ರೂಪುಗೊಳ್ಳುವಲ್ಲಿ ನೆರವಾಗುವುದು. ಪ್ರತಿಯೊಂದು ಕಲಿಕೆಯ ಹಂತದಲ್ಲೂ ಅಪರಿಮಿತ ಶ್ರಮ ಇರಲಿ ಎಂದು ತಿಳಿಸಿದರು.
ಹಿರಿಯ ಶಿಕ್ಷಕ ಕುಂಞಿರಾಮ ಮಾಸ್ತರ್ ಉಪಸ್ಥಿತರಿದ್ದು ಶುಭಹಾರೈಸಿದರು. ಶಾಲಾ ಸಂಸ್ಕೃತ ಶಿಕ್ಷಕಿ ಅಕ್ಷತಾ ಪಿ.ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.ದಾಸಪ್ಪ ಮಾಸ್ತರ್ ವಂದಿಸಿದರು.ಬಳಿಕ ಕಿರಣ್ ಕಲಾಂಜಲಿಯವರಿಂದ ವಿದ್ಯಾಥರ್ಿಗಳಿಗೆ ಸಂಸ್ಕೃತ ನಾಟಕಾಭಿನಯ, ರಂಗನಡೆ ಮೊದಲಾದವುಗಳ ಬಗ್ಗೆ ವಿಸ್ಕೃತ ತರಬೇತಿ ನಡೆಯಿತು.