ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 31, 2017
ಕೃಷಿ ವಿಚಾರ ಸಂಕಿರಣ
ಕುಂಬಳೆ: ಸಾವಯವ ಕೃಷಿ ಪದ್ದತಿಯ ಬಗ್ಗೆ ಗಂಭೀರ ಚಿಂತನೆಗಳ ಅಗತ್ಯವಿದೆ. ವಿಷಾಹಾರದಿಂದ ವ್ಯಾಪಕ ಆರೋಗ್ಯ ಸಮಸ್ಯೆಗಳ ಸಹಿತ ಜೀವಹಾನಿಗಳು ಸಂಭವಿಸುತ್ತಿರುವಾಗ ಪಾರಂಪರಿಕ ಕೃಷಿ ವ್ಯವಸ್ಥೆಯ ಬಗ್ಗೆ ಹೆಚ್ಚು ಅನುಭವಿಗಳು ಮತ್ತು ಆಸಕ್ತರಿಂದ ಮಾಹಿತಿ ನೀಡುವ ಕಾರ್ಯಕ್ರಮ ತುತರ್ು ಆಗಬೇಕು ಎಂದು ಹಿರಿಯ ಕೃಷಿಕ, ಸಾಮಾಜಿಕ ಮುಂದಾಳು, ಕ್ಯಾಂಪ್ಕೋದ ಮಾಜಿ ನಿದರ್ೇಶಕ ಅಶೋಕ್ ಕುಮಾರ್ ಹೊಳ್ಳ ಅಭಿಪ್ರಾಯ ವ್ಯಕ್ತಪಡಿಸಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕುಂಬಳೆ ವಲಯ ಸಮಿತಿಯ ನೇತೃತ್ವದಲ್ಲಿ ಇತ್ತೀಚೆಗೆ ಕುಬಣೂರು ಶ್ರೀರಾಮ ಹಿರಿಯ ಪ್ರಾಥಮಿಕ ಶಾಲಾ ಪರಿಸರದಲ್ಲಿ ಆಯೋಜಿಸಲಾಗಿದ್ದ ಸಾವಯವ ತರಕಾರಿ ಕೃಷಿಯ ಬಗೆಗಿನ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿ ಅವರು ಮಾತನಾಡಿದರು.
ಶ್ರೀಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ದಿ ಯೋಜನೆ ಸಮೃದ್ದ ಸಮಾಜ ನಿಮರ್ಾಣದಲ್ಲಿ ವಿಶಿಷ್ಟ ಪಾತ್ರ ನಿರ್ವಹಿಸುವ ಮೂಲಕ ಹೊಸ ಶಖೆಯನ್ನು ತಂದಿರಿಸಿದೆ. ಯೋಜನೆಯ ಮೂಲಕ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿ ನಡೆಯುತ್ತಿರುವ ಕಾರ್ಯಚಟುವಟಿಕೆಗಳಿಗೆ ಎಲ್ಲರ ಸಹಭಾಗಿತ್ವ, ಕ್ರಿಯಾತ್ಮಕ ಸ್ಪಂಧನ ಅಗತ್ಯ ಎಂದು ಅವರು ತಿಳಿಸಿದರು.
ಪ್ರಗತಿಪರ ಕೃಷಿಕ ದೂಮಣ್ಣ ಶೆಟ್ಟಿ ವಿಚಾರ ಸಂಕಿರಣ ಉದ್ಘಾಟಿಸಿದರು. ಹಿರಿಯ ಕೃಷಿಕ ಭಾಸ್ಕರ ಉಬರಳೆ, ಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ಬಾಲಕೃಷ್ಣ ಶೆಟ್ಟಿ, ಪ್ರಗತಿಪರ ಕೃಷಿಕ ನಾರಾಯಣ ಭಟ್ ಬಿಲ್ಲಂಪದವು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಶುಭಹಾರೈಸಿದರು.
ಸೇವಾ ಪ್ರತಿನಿಧಿ ಸುಜಾತಾ ಸ್ವಾಗತಿಸಿ, ರೇಖಾ ವಂದಿಸಿದರು. ವಲಯ ಮೇಲ್ವಿಚಾರಕಿ ಶೋಭಾ ಐ ಕಾರ್ಯಕ್ರಮ ನಿರೂಪಿಸಿದರು. ಸೇವಾ ಪ್ರತಿನಿಧಿ ಮಾಲಿನಿ ಪಿ, ಒಕ್ಕೂಟದ ಪದಾಧಿಕಾರಿಗಳು, ಸ್ಥಳೀಯ ಕೃಷಿಕರು, ಪ್ರಗತಿಬಂಧು ಸ್ವಸಹಾಯ ಸಂಘಗಳ ಸದಸ್ಯರು ಭಾಗವಹಿಸಿದ್ದರು. ಬಳಿಕ ಪ್ರಗತಿಪರ ಕೃಷಿಕ ಬಿಲ್ಲಂಪದವು ನಾರಾಯಣ ಭಟ್ ಸಾವಯವ ಕೃಷಿ ಕ್ರಮದ ಬಗ್ಗೆ ಸಮಗ್ರ ತರಬೇತಿ-ಮಾಹಿತಿ ನೀಡಿದರು.