ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 14, 2017
ಬದಿಯಡ್ಕ : ಮೂಲ್ಕಿಯ ಎಂ. ವಾಸುದೇವ ಸಾಮಗರ ನಿದರ್ೇಶನದ ಸಂಯಮಂ ಕೋಟೇಶ್ವರ ತಂಡದವರಿಂದ ಪೆರಡಾಲ ಶ್ರೀ ಉದನೇಶ್ವರ ಸಭಾಭವನದಲ್ಲಿ ಅಕ್ಟೋಬರ್ 15ರಂದು(ಇಂದು) ರಾವಣವಧೆ ಯಕ್ಷಗಾನ ತಾಳಮದ್ದಳೆ ಅಪರಾಹ್ನ 3ರಿಂದ ನಡೆಯಲಿರುವುದು. ಹಿಮ್ಮೇಳದಲ್ಲಿ ಭಾಗವತರಾಗಿ ಕರುಣಾಕರ ಶೆಟ್ಟಿ ಬಾಕರ್ೂರು, ಮದ್ದಳೆಯಲ್ಲಿ ಈಶ್ವರ ಭಂಡಾರಿ ಗುಣವಂತೆ, ಚೆಂಡೆಯಲ್ಲಿ ಶಂಕರಾಚಾರ್ಯ ಗುಡ್ರಿ, ಅರ್ಥದಾರಿಗಳಾಗಿ ಎಂ.ವಾಸುದೇವ ಸಾಮಗ, ಎಂ.ಕೆ.ರಮೇಶ್ ಆಚಾರ್ಯ, ಪೂಕಳ ಲಕ್ಷ್ಮೀನಾರಾಯಣ ಭಟ್, ಈಶ್ವರ ಪ್ರಸಾದ ಧರ್ಮಸ್ಥಳ ಭಾಗವಹಿಸಲಿರುವರು. ಭಗವದ್ಭಕ್ತರು ಹಾಗೂ ಯಕ್ಷಗಾನ ಅಭಿಮಾನಿಗಳು ಪಾಲ್ಗೊಂಡು ಸಹಕರಿಸಬೇಕೆಂದು ಸಂಬಂಧಪಟ್ಟವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.