ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 16, 2017
ಉಪ್ಪಳ: ಸಾಂಸ್ಕೃತಿಕ , ಕ್ರೀಡಾ ಚಟುವಟಿಕೆಗಳು ಸಾಮಾಜಿಕ ಏಕತೆ, ವೈಯುಕ್ತಿಕ ವರ್ಚಸ್ಸುಗಳನ್ನು ಕಾಯ್ದುಕೊಳ್ಳುವಲ್ಲಿ ನಿಣರ್ಾಯಕ ಪಾತ್ರ ವಹಿಸುತ್ತವೆ. ಯುವಜನರು ಕ್ರೀಡಾ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದಶರ್ಿಸುವ ಮೂಲಕ ಯಶಸ್ಸಿನ ಮೆಟ್ಟಲುಗಳನ್ನೇರಲು ಪ್ರಯತ್ನಿಸಬೇಕು ಎಂದು ಮಂಜೇಶ್ವರ ಬ್ಲಾಕ್ ಪಂಚಾಯತು ಅಧ್ಯಕ್ಷ ಎಕೆಎಂ ಅಶ್ರಫ್ ಅಭಿಪ್ರಾಯ ವ್ಯಕ್ತಪಡಿಸಿದರು.
ಮಂಗಲ್ಪಾಡಿ ಗ್ರಾಮ ಪಂಚಾಯತು ಮತ್ತು ವಿವಿಧ ಸಂಘಸಂಸ್ಥೆಗಳ ಸಹಕಾರದೊಂದಿಗೆ ಇತ್ತೀಚೆಗೆ ಮಂಗಲ್ಪಾಡಿ ಗ್ರಾ.ಪಂ. ಸಭಾಂಗಣದಲ್ಲಿ ಆಯೋಜಿಸಿದ ಕೇರಳೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಶಾಲಾ-ಕಾಲೇಜುಗಳ ಬಳಿಕ ಗ್ರಾಮೀಣ ಪ್ರದೇಶಗಳ ಯುವಜನರ ಸರ್ವತೋಮುಖ ಅಭಿವೃದ್ದಿಯ ಭಾಗವಾಗಿ ಕೇರಳೋತ್ಸವ ಆಚರಿಸಲ್ಪಡುತ್ತದೆ. ಗುಣಮಟ್ಟದ ಸ್ಪಧರ್ೆಗಳ ಮೂಲಕ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೇರಳೋತ್ಸವದಂತಹ ಪ್ರಕ್ರಿಯೆಗಳಲ್ಲಿ ಜನಸಾಮಾನ್ಯರ ಪಾಲ್ಗೊಳ್ಳುವಿಕೆ ಉತ್ತಮ ರೀತಿಯಲ್ಲಿರಲಿ ಎಂದು ಅವರು ತಿಳಿಸಿದರು.
ಮಂಗಲ್ಪಾಡಿ ಗ್ರಾಮ ಪಂಚಾಯತು ಅಧ್ಯಕ್ಷ ಶಾಹುಲ್ ಹಮೀದ್ ಬಂದ್ಯೋಡು ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮೀನ,ಜನಪದ ಕಲೆ, ಕ್ರೀಡೆಗಳ ಯುವ ಪ್ರತಿಭೆಗಳಿಗೆ ಪ್ರೇರಕವಾಗಿ ಮೂಡಿಬಂದಿರುವ ಕೇರಳೋತ್ಸವ ಶ್ರಮವಹಿಸಿ ಅಭ್ಯಸಿಸಿರುವ ಯುವಜನರ ಕ್ರಿಯಾತ್ಮಕತೆಯನ್ನು ಪ್ರೋತ್ಸಾಹಿಸಲಿ ಎಂದು ತಿಳಿಸಿದರು.
ಮುಖಂಡರಾದ ಟಿ.ಎ.ಮೂಸಾ, ಸತ್ಯನ್ ಸಿ.ಉಪ್ಪಳ, ಶುಕೂರ್ ಹಾಜಿ,ಬ್ಲಾಕ್ ಪಂಚಾಯತು ಸದಸ್ಯೆ ಮಿಸ್ಬಾನಾ,ಜಮೀಲಾ ಸಿದ್ದೀಕ್ ಮೊದಲಾದವರು ಉಪಸ್ಥಿತರಿದ್ದು ಶುಭಹಾರೈಸಿದರು.ಕೇರಳೋತ್ಸವ ಮಂಗಲ್ಪಡಿ ಗ್ರಾ.ಪಂ. ಸಂಯೋಜಕ ವಸಂತ ಮಾಸ್ತರ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಬಳಿಕ ಪ್ರಥಮ ಹಂತದಲ್ಲಿ ನಡೆದ 1500 ಮೀಟರ್ ಓಟ ಸ್ರ್ಪಧರ್ೆಯಲ್ಲಿ ಮೊಹಮ್ಮದ್ ಸಫರ್ ಮಣಿಮುಂಡ ಪ್ರಥಮ ಸ್ಥಾನ ಪಡೆದರು.100 ಮೀಟರ್ ಓಟದಲ್ಲಿ ಮೊಹಮ್ಮದ್ ಸಾದಿಕ್ ಪ್ರಥಮ ಬಹುಮಾನ ಪಡೆದರು. ಬಳಿಕ ವಿವಿಧ ಸ್ಪಧರ್ೆಗಳು ನಡೆಯಿತು.