HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಸೌಂದರ್ಯಲಹರೀ ಮಹಾಸಮರ್ಪಣೆ ಕಾರ್ಯಕ್ರಮದಲ್ಲಿ ಮೋದಿ ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸಿದ್ದಾರೆ. ಯಡತೊರೆಮಠದ ವೇದಾಂತ ಭಾರತಿ ಸಂಸ್ಥೆಯು ಆಯೋಜಿಸಿರುವ ಸೌಂದರ್ಯಲಹರೀ ಮಹಾಸಮರ್ಪಣೆ ಕಾರ್ಯಕ್ರಮದಲ್ಲಿ ಮೋದಿ ಪಾಲ್ಗೊಂಡರು. ಅರಮನೆ ಮೈದಾನಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಭಾನವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ದೂರದ ಊರುಗಳಿಂದ ಬಂದಿರುವ ಸಾವಿರಾರು ಮಹಿಳೆಯರು ಮತ್ತು ಕಾರ್ಯಕರ್ತರು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಶಂಕರಭಾರತೀ ಮಹಾಸ್ವಾಮೀಜಿ, ಕನರ್ಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಅನಂತ್ ಕುಮಾರ್, ಡಿ.ವಿ.ಸದಾನಂದ ಗೌಡ ಸೇರಿದಂತೆ ವಿವಿಧ ನಾಯಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದಾರೆ. ಮೋದಿ ಭಾಷಣದ ಮುಖ್ಯಾಂಶಗಳು * ಪಾರಾಯಣಕ್ಕೆ ಬಂದ ನಿಮಗೆಲ್ಲರಿಗೂ ಸ್ವಾಗತ ಎಂದು ಕನ್ನಡದಲ್ಲಿ ಭಾಷಣ ಆರಂಭ. ಸೌಂದರ್ಯ ಲಹರಿ ಪಾರಾಯಣಕ್ಕೆ ಬಂದ ಎಲ್ಲ ಸಹೋದರಿಯರಿಗೆ ಸ್ವಾಗತ ಎಂದ ಮೋದಿ * ಶಂಕರ ಭಾರತಿ ಸ್ವಾಮೀಜಿಗಳಿಗೆ ನನ್ನ ಪ್ರಣಾಮಗಳು * ಒಂದೇ ಜಾಗದಲ್ಲಿ ಒಂದೇ ಸ್ವರದಲ್ಲಿ ಸೌಂದರ್ಯ ಲಹರಿ ಪಠಣ ಒಳ್ಳೆಯ ಕಾರ್ಯ, ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ನನ್ನ ಸೌಭಾಗ್ಯ. ಮಹಾ ಸಮರ್ಪಣೆಗೆ ಬಂದ ನಿಮ್ಮೆಲ್ಲರನ್ನು ನೋಡಿ ಸಂತಸವಾಗಿದೆ * ಕೆಲವು ದಿನಗಳ ಹಿಂದೆ ನಾನು ಕೇದಾರನಾಥಕ್ಕೆ ಹೋಗಿದ್ದೆ. ಅಲ್ಲಿಗೆ ಹೋದಾಗಲೆಲ್ಲ ಶಂಕರರ ಬಗ್ಗೆ ಗೌರವ ಹೆಚ್ಚಾಗುತ್ತದೆ. ಇಷ್ಟೆಲ್ಲಾ ಆಧುನಿಕ ಸೌಕರ್ಯಗಳಿದ್ದರೂ ಅಲ್ಲಿಗೆ ಹೋಗುವುದು ಕಷ್ಟ. ಆದರೆ, ಅವರು ಸಾವಿರಾರು ವರ್ಷಗಳ ಹಿಂದೆಯೇ ದೇಶದ ಮೂಲೆಮೂಲೆ ಸಂಚರಿಸಿ ಅಧ್ಯಾತ್ಮ ಜಾಗೃತಿ ಮೂಡಿಸಿದ್ದರು * ನಾನು ಹಲವು ವರ್ಷಗಳಿಂದ ನವರಾತ್ರಿ ವ್ರತ ಆಚರಿಸುತ್ತಿದ್ದೇನೆ. ನಾನು ಹೇಳುವ ದೇವಿಸ್ತುತಿಗಳಲ್ಲಿ ಶಂಕರಾಚಾರ್ಯರ ಸೌಂದರ್ಯ ಲಹರಿಯೂ ಸೇರಿದೆ. ಇದರ ಪ್ರತಿ ಮಂತ್ರದಲ್ಲೂ ಮಹತ್ವದ ಭಾವವಿದೆ * ಸಾವಿರಾರು ಜನರು ಒಂದೇ ಕಡೆ ಒಕ್ಕೊರಲಿನಿಂದ ಮಂತ್ರ ಹೇಳುವುದರಿಂದ ದೊಡ್ಡ ಮಟ್ಟದ ಶಕ್ತಿ ಸಂಚಯವಾಗುತ್ತೆ. ಈಗ ಇಲ್ಲಿ ನೆರೆದಿರುವವರು ಪಾರಾಯಣ ಮಾಡಿರುವುದರಿಂದ ಉಂಟಾಗಿರುವ ಶಕ್ತಿಯ ಅಲೆಗಳ ಅನುಭವ ನನಗೆ ಆಗುತ್ತಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries