ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 29, 2017
ಶಾಲಾ ಪಠ್ಯಪುಸ್ತಕಗಳ ಮೂರನೇ ಹಂತದ ವಿತರಣೆ ಆರಂಭ
ಕಾಸರಗೋಡು: ಮೂರು ಹಂತಗಳಲ್ಲಿ ಪರಿಷ್ಕರಿಸಿದ ಕೇರಳದ ಶಾಲಾ ಪಠ್ಯಪುಸ್ತಕಗಳ ಮೂರನೇ ಹಂತದ ವಿತರಣೆ ಕಾರ್ಯವು ಆರಂಭಗೊಂಡಿದೆ. ಒಂದರಿಂದ ಎಂಟನೇ ತರಗತಿ ವರೆಗಿನ 79 ಲಕ್ಷ ಪಠ್ಯಪುಸ್ತಕಗಳನ್ನು ರಾಜ್ಯದ ಶಾಲಾ ಸೊಸೈಟಿಗಳಿಗೆ ವಿತರಣೆಗಾಗಿ ಕಳುಹಿಸಲಾಗಿದೆ.
ಮಕ್ಕಳ ಹಕ್ಕು ಆಯೋಗದ ನಿದರ್ೇಶನದ ಪ್ರಕಾರ ಮಕ್ಕಳ ಪುಸ್ತಕದ ಹೊರೆ ಕಡಿಮೆ ಮಾಡುವ ಉದ್ದೇಶದಿಂದ ಈ ಶೈಕ್ಷಣಿಕ ವರ್ಷದಿಂದಲೇ ಪಠ್ಯಪುಸ್ತಕಗಳನ್ನು ಮೂರು ಭಾಗಗಳಾಗಿ ಮುದ್ರಿಸಲು ತೀಮರ್ಾನಿಸಲಾಗಿತ್ತು. ಕಳೆದ ವರ್ಷದ ವರೆಗೆ ಅಧಿಕ ಪುಟಗಳಿರುವ ಪಠ್ಯಪುಸ್ತಕಗಳನ್ನು ಎರಡು ಭಾಗಗಳಾಗಿ ಪ್ರಕಟಿಸಲಾಗುತ್ತಿತ್ತು. ಆದರೆ ಇದು ಮಕ್ಕಳಿಗೆ ಹೆಚ್ಚು ಹೊರೆಗೆ ಕಾರಣವಾಗುತ್ತಿತ್ತು.
ಈ ಬಾರಿ ಒಂದನೇ ಭಾಗದ ಪಠ್ಯಪುಸ್ತಕಗಳ ವಿತರಣೆಯನ್ನು ಜೂನ್ ಮೊದಲ ವಾರ ಅಂದರೆ ಶಾಲಾರಂಭದ ಸಂದರ್ಭದಲ್ಲೇ ಪೂರ್ಣಗೊಳಿಸಲಾಗಿತ್ತು. ಕೆಲವು ಶಾಲೆಗಳಲ್ಲಿ ಮಾತ್ರ ಸ್ವಲ್ಪ ವಿಳಂಬವಾಗಿತ್ತು. ಎರಡನೇ ಭಾಗದ ವಿತರಣೆಯು ಓಣಂ ಪರೀಕ್ಷೆಗಿಂತ ಮುಂಚಿತವಾಗಿ ನಡೆದಿತ್ತು. ಇದೇ ವೇಳೆ ಎರಡನೇ ಭಾಗದ ವಿತರಣೆ ಸಮಯೋಚಿತವಾಗಿ ನಡೆಯದಿರುವುದು ಭಾರೀ ವಿವಾದಕ್ಕೂ ದಾರಿಮಾಡಿಕೊಟ್ಟಿತ್ತು. ಅಲ್ಲದೆ ಕಾಸರಗೋಡು ಜಿಲ್ಲೆಯಲ್ಲೂ ಈ ಬಗ್ಗೆ ಪ್ರತಿಭಟನೆಯ ಕೂಗು ಕೇಳಿಬಂದಿದ್ದವು.
ಕಾಲು ವಾಷರ್ಿಕ ಪರೀಕ್ಷೆಯ ಬಳಿಕ ಅಧ್ಯಾಪನ ನಡೆಸಬೇಕಾದ ವಿವಿಧ ವಿಷಯಗಳ ಪುಸ್ತಕಗಳ ವಿತರಣೆಯು ಹೆಚ್ಚಿನ ಜಿಲ್ಲೆಗಳಲ್ಲಿ ಸಮರ್ಪಕವಾಗಿ ನಡೆದಿಲ್ಲ. ಈ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಮುಂಜಾಗ್ರತೆಯೊಂದಿಗೆ ಮೂರನೇ ಭಾಗದ ಪುಸ್ತಕಗಳನ್ನು ವಿತರಿಸಲಾಗುತ್ತಿದೆ. ಕ್ರಿಸ್ಮಸ್ ಪರೀಕ್ಷೆಯ ಬಳಿಕ ಈ ಶೈಕ್ಷಣಿಕ ವರ್ಷ ಮುಗಿಯುವ ತನಕ ಕಲಿಸಬೇಕಾದ ಪಾಠ ಭಾಗಗಳನ್ನು ಅಂತಿಮ ಹಂತದಲ್ಲಿ ಅಥವಾ ಮೂರನೇ ಹಂತದಲ್ಲಿ ಕೊಡಲಾಗಿದೆ.
ಒಂಭತ್ತು ಮತ್ತು ಹತ್ತನೇ ತರಗತಿಗಳ ಪಠ್ಯಪುಸ್ತಕಗಳು ಈ ಬಾರಿಯೂ ಎರಡು ಭಾಗಗಳಾಗಿ ಮಾತ್ರ ಮುದ್ರಣಗೊಂಡಿವೆ. ಈ ಕುರಿತು ಚಚರ್ೆಗಳು ನಡೆದಿದ್ದರೂ, ಮೂರು ಹಂತದ ಪಠ್ಯ ಯೋಜನೆಗೆ ಅಂತಿಮ ರೂಪು ಸಿಕ್ಕಿಲ್ಲ. ಈ ನಡುವೆ ಪುಸ್ತಕ ವಿತರಣೆಯನ್ನು ಕಾರ್ಯದಕ್ಷಗೊಳಿಸಲು ಎಚ್ಚರಿಕೆ ವಹಿಸುವಂತೆ ಮುದ್ರಣ ಮತ್ತು ವಿತರಣೆಯ ಹೊಣೆಗಾರಿಕೆ ಹೊಂದಿರುವ ಕೆಬಿಪಿಎಸ್ (ಕೇರಳ ಬುಕ್ಸ್ ಪ್ರಿಂಟಿಂಗ್ ಸೊಸೈಟಿ)ಗೆ ರಾಜ್ಯ ಶಿಕ್ಷಣ ಇಲಾಖೆಯು ಸ್ಪಷ್ಟ ನಿದರ್ೇಶನ ನೀಡಿದೆ.
ಕೇರಳದ 3304 ಶಾಲಾ ಸೊಸೈಟಿಗಳಿಗೆ ಕೆಬಿಪಿಎಸ್ ನೇರವಾಗಿ ಪುಸ್ತಕಗಳನ್ನು ತಲುಪಿಸುತ್ತಿದೆ. ಕೈಗೊಳ್ಳುವಂತೆ ಸಂಬಂಧಪಟ್ಟ ಶಿಕ್ಷಣ ಉಪನಿದರ್ೇಶಕರು, ಜಿಲ್ಲಾ ಶಿಕ್ಷಣಾಧಿಕಾರಿಗಳು, ಉಪಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ ರಾಜ್ಯ ಪಠ್ಯಪುಸ್ತಕ ವಿಭಾಗದ ಅಧಿಕಾರಿ ನಿದರ್ೇಶನ ನೀಡಿದ್ದಾರೆ. ಈ ಮಧ್ಯೆ ನವೆಂಬರ್ 10ರ ಮೊದಲು ಪಠ್ಯಪುಸ್ತಕ ವಿತರಣೆಯನ್ನು ಪೂರ್ಣಗೊಳಿಸಲು ಕೆಬಿಪಿಎಸ್ ಯೋಜನೆ ಹಾಕಿಕೊಂಡಿದೆ.
ಸೂಕ್ತ ವ್ಯವಸ್ಥೆಗೆ ರೂಪುರೇಷೆ : ಕಾಸರಗೋಡು ಜಿಲ್ಲೆಯಲ್ಲೂ ಮೂರನೇ ಹಂತದ ಶಾಲಾ ಪಠ್ಯಪುಸ್ತಕ ವಿತರಣೆಯ ನಿಟ್ಟಿನಲ್ಲಿ ಆವಶ್ಯಕ ಕ್ರಮಗಳನ್ನು ಆರಂಭಿಸಲಾಗಿದೆ. ಇದಕ್ಕಾಗಿ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ಸೂಕ್ತ ವ್ಯವಸ್ಥೆಯ ಹಿನ್ನೆಲೆಯಲ್ಲಿ ರೂಪುರೇಷೆ ತಯಾರಿಸಲಾಗುತ್ತಿದೆ. ಜಿಲ್ಲೆಯ ಶಾಲಾ ಸೊಸೈಟಿಗಳಿಗೆ ಈಗಾಗಲೇ ಕೆಬಿಪಿಎಸ್ ನೇತೃತ್ವದಲ್ಲಿ ಪಾಠಪುಸ್ತಕಗಳ ಪೂರೈಕೆಯಾಗುತ್ತಿದ್ದು, ಉಪಜಿಲ್ಲಾ ಶಿಕ್ಷಣಾಧಿಕಾರಿ ಕಚೇರಿ ಮೂಲಕ ಅಗತ್ಯದ ಕಾರ್ಯಯೋಜನೆ ಹಮ್ಮಿಕೊಳ್ಳಲಾಗಿದೆ. ನಿಗದಿತ ದಿನಾಂಕಕ್ಕಿಂತ ಮೊದಲೇ ಕಾಸರಗೋಡು ಜಿಲ್ಲೆಯಲ್ಲಿ ಪಠ್ಯಪುಸ್ತಕಗಳ ವಿತರಣೆ ಪೂತರ್ಿಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ಹೇಳಿಕೆ:
ಕನ್ನಡ ಪುಸ್ತಕಗಳ ಹೊರತು ಇತರ ಪುಸ್ತಕಗಳನ್ನು ಆಯಾ ಶಾಲೆಗಳಿಗೆ ಅಗತ್ಯಕ್ಕೆ ತಕ್ಕಂತೆ ಪೂರೈಕೆ ಮಾಡಲು ಪೂರ್ಣ ಸಿದ್ದತೆಗಳು ನಡೆದಿವೆ. ಕನ್ನಡ ಪುಸ್ತಕಗಳು ಎರಡು ವಾರಗಳಲ್ಲಿ ಪೂರೈಕೆಯಾಗುವ ಭರವಸೆ ಇದೆ.
ಕೈಲಾಸಮೂತರ್ಿ
ಕುಂಬಳೆ ಉಪಜಿಲ್ಲಾ ಸಹಾಯಕ ವಿದ್ಯಾಧಿಕಾರಿ. ಬದಿಯಡ್ಕ.