ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 29, 2017
ಪೈವಳಿಕೆನಗರ ಶಾಲಾ ಕಲೋತ್ಸವ
ಉಪ್ಪಳ : ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ಕಲೋತ್ಸವ ಇತ್ತೀಚೆಗೆ ನಡೆಯಿತು. ಶಾಲಾ ಹಳೆ ವಿದ್ಯಾಥರ್ಿ ಸಂಘದ ಅಧ್ಯಕ್ಷ ಹನೀಫ್ ಹಾಜಿ ಉದ್ಘಾಟಿಸಿದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಇಬ್ರಾಹೀಂ ಪಾವಲುಕೋಡಿ ಅಧ್ಯಕ್ಷತೆ ವಹಿಸಿದ್ದರು. ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ರಮೇಶ್ ಪೈವಳಿಕೆ, ಪ್ರಾಂಶುಪಾಲೆ ವಿಶಾಲಾಕ್ಷಿ, ಮುಖ್ಯೋಪಾಧ್ಯಾಯಿನಿ ಶ್ಯಾಮಲ ಪಿ ಶುಭಾಶಂಸನೆಗೈದರು. ರಕ್ಷಕ ಶಿಕ್ಷಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಪದ್ಮನಾಭ ಬಾಯಿಕಟ್ಟೆ, ಇಬ್ರಾಹಿಂ ಪೈವಳಿಕೆ, ಹಿರಿಯ ಶಿಕ್ಷಕ ವಿಶ್ವನಾಥ ಕುಂಬಳೆ, ರವೀಂದ್ರನಾಥ್ ಕೆ ಆರ್, ಆಚರಣಾ ಸಮಿತಿ ಸಂಚಾಲಕಿ ಶಶಿಕಲ, ವಿನೋದ್ ಉಪಸ್ಥಿತರಿದ್ದರು. ಶಾಲಾ ನೌಕರರ ಸಂಘದ ಕಾರ್ಯದಶರ್ಿ ಕೃಷ್ಣಮೂತರ್ಿ ಎಂ ಎಸ್, ಸ್ವಾಗತಿಸಿ ಶಶಿಕಲ ವಂದಿಸಿದರು. 4 ವೇದಿಕೆಗಳಲ್ಲಾಗಿ ಸುಮಾರು 500 ಕ್ಕಿಂತಲೂ ಹೆಚ್ಚು ಕಲಾಪ್ರತಿಭೆಗಳು ಭಾಗವಹಿಸಿದರು.