ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 13, 2017
ಕುಂಬಳೆ: ಮೀನು ಕಾಮರ್ಿಕರ ಎಲ್ಲಾ ಸಾಲಗಳನ್ನು ಮನ್ನಾ ಮಾಡಲಾಗುವುದೆಂದು ರಾಜ್ಯ ಮೀನುಗಾರಿಕಾ ಸಚಿವೆ ಜೆ.ಮೆಲ್ಸಿಕುಟ್ಟಿಯಮ್ಮ ಭರವಸೆ ನೀಡಿದರು.
ಶುಕ್ರವಾರ ಬೆಳಿಗ್ಗೆ ಶಿರಿಯಾ ಅಳಿವೆ ಬಾಗಿಲಿಗೆ ಭೇಟಿ ನೀಡಿ ಅವರು ಮಾತನಾಡಿದರು.
ಪ್ರಕೃತಿ ವಿಕೋಪ ಸಹಿತ ವಿವಿಧ ಕಾರಣಗಳಿಂದ ನಷ್ಟ ಅನುಭವಿಸುತ್ತಿರುವ ಮೀನು ಕಾಮರ್ಿಕರ ಶ್ರೇಯೋಭಿವೃದ್ದಿಗೆ ಸರಕಾರ ಕಟಿಬದ್ದವಾಗಿದೆ ಎಮದು ತಿಳಿಸಿದ ಅವರು, ಸಾಲದ ಕೂಪದಲ್ಲಿ ನಲುಗುತ್ತಿರುವ ಮೀನುಕಾಮರ್ಿಕರ ಸಾಲಮನ್ನಾಗೊಳಿಸಲು ಸರಕಾರ ಕಾರ್ಯಯೋಜನೆ ಇರಿಸಿದೆ ಎಮದು ತಿಳಿಸಿದರು. ಜೊತೆಗೆ ಭವಿಷ್ಯದಲ್ಲಿ ಬಡ್ಡಿ ರಹಿತ ಸಾಲ ನೀಡಲಾಗುವುದೆಂದು ಸಚಿವೆ ತಿಳಿಸಿದರು.
ಮಾಜಿ ಶಾಸಕ ನ್ಯಾಯವಾದಿ. ಸಿ.ಎಚ್ ಕುಂಞಿಂಬು ಸಹಿತ ಗಣ್ಯರು ಉಪಸ್ಥಿತರಿದ್ದರು. ಬಳಿಕ ಕುಂಬಳೆ ಫಿಶರೀಸ್ ಕೊಲೋನಿಗೆ ಭೇಟಿ ನೀಡಿದರು. ಬಳಿಕ ನೆಕ್ರಾಜೆ ಸಹಕಾರಿ ಬ್ಯಾಂಕ್ ಉದ್ಘಾಟಿಸಿದರು.