ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 14, 2017
ಸುಪ್ರೀಂಕೋಟರ್್ ಅವಕಾಶ ನೀಡಿದರೂ ಸಭ್ಯಸ್ಥ ಮಹಿಳೆಯರು ದೇಗುಲ ಪ್ರವೇಶಿಸುವುದಿಲ್ಲ'
ಪತ್ತನಂತಿಟ್ಟು: ಸುಪ್ರೀಂಕೋಟರ್್ ಅಯ್ಯಪ್ಪ ಸ್ವಾಮಿ ದೇಗುಲ ಪ್ರವೇಶಕ್ಕೆ ಮಹಿಳೆಯರಿಗೆ ಅವಕಾಶ ಕಲ್ಪಿಸಿದರೂ, ಸ್ವಾಭಿಮಾನವುಳ್ಳ ಸಭ್ಯಸ್ಥ ಮಹಿಳೆಯರು, ಒಳ್ಳೆಯ ಮನೆತನದಲ್ಲಿ ಹುಟ್ಟಿದ ಮಹಿಳೆಯರು ದೇಗುಲ ಪ್ರವೇಶಿಸುವುದಿಲ್ಲ ಎಂದು ಅಯ್ಯಪ್ಪ ಸ್ವಾಮಿ ದೇಗುಲದ ಟಿಡಿಬಿ ಅಧ್ಯಕ್ಷ ಪ್ರಯರ್ ಗೋಪಾಲಕೃಷ್ಣನ್ ವಿವಾದಿತ ಹೇಳಿಕೆ ನೀಡಿದ್ದಾರೆ.
ಶುಕ್ರವಾರ ಶಬರಿಮಲೆ ಅಯ್ಯಪ್ಪಸ್ವಾಮಿ ದೇಗುಲಕ್ಕೆ ಮಹಿಳೆಯರಿಗೆ ಪ್ರವೇಶ ನೀಡುವ ವಿಷಯಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋಟರ್್ನಲ್ಲಿ ವಿಚಾರಣೆ ನಡೆದಿದೆ. ಐವರು ನ್ಯಾಯಮೂತರ್ಿಗಳ ಪೀಠ ತೀಪರ್ು ನೀಡಲಿದೆ ಎಂದು ಸುಪ್ರೀಂ ಹೇಳಿತ್ತು. ಈ ಕುರಿತು ಪ್ರತಿಕ್ರಿಯಿಸಿರುವ ಗೋಪಾಲಕೃಷ್ಣನ್, ಋತುಸ್ರಾವವಾಗುವ ಮಹಿಳೆಯರಿಗೆ ದೇಗುಲ ಪ್ರವೇಶಕ್ಕೆ ಅವಕಾಶ ನೀಡಬಾರದು ಎಂಬ ನಿಲುವಿಗೆ ತಾವು ಬದ್ಧವಿರುವುದಾಗಿ ಹೇಳಿದ್ದಾರೆ.
ಮಹಿಳೆಯರಿಗೆ ದೇಗುಲ ಪ್ರವೇಶಕ್ಕೆ ಅವಕಾಶ ನೀಡಿದರೆ ಶಬರಿಮಲೆ ಪ್ರವಾಸಿ ಸ್ಥಳವಾಗಲಿದೆ. ನಾವು ಶಬರಿಮಲೆಯನ್ನು ಥೈಲಾಂಡ್ ಆಗಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.