ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 17, 2017
ಶೋಷಣೆಯ ವಿರುದ್ಧ ದ್ವನಿಯೆತ್ತಬೇಕು-ಅಪ್ಪಕುಂಞಿ ಮಣಿಯಾಣಿ
ಮುಳ್ಳೇರಿಯ: ಬೇರೆ ಬೇರೆ ಮೂಲಗಳಿಂದ ಮತ್ತು ಸರಕಾರದ ಅನುದಾನಗಳನ್ನು ಉಪಯೋಗಿಸಿ ಕಲಾವಿದರನ್ನು ಶೋಷಣೆ ಮಾಡುವುದನ್ನು ತಡೆಯಬೇಕು ಹಾಗೂ ದೇಶ ವಿದೇಶಗಳಿಗೆ ಕಲಾವಿದರನ್ನು ಕರೆದು ಪ್ರದರ್ಶನ ನೀಡಿಸಿ ಕಲಾವಿದನಿಗೆ ಅತ್ಯಲ್ಪ ಮೊತ್ತನೀಡಿ ಸಾಗಹಾಕುವ ನಿರ್ಲಕ್ಷ್ಯ ಕ್ರಮ ಮತ್ತು ಜಾನಪದ ಕಲಾವಿದರ ಮೂಲಕ ಪಿ.ಎಚ್.ಡಿ. ಹಾಗೂ ಪದವಿಗಳನ್ನು ಪಡೆದು ಕಲಾವಿದರಿಗೆ ಏನನ್ನು ನೀಡದೆ ಅವರ ಹೆಸರುನ್ನು ಉಲ್ಲೇಖಿಸದೆ ಶೋಷಣೆ ಮಾಡುವುದನ್ನು ತಡೆಯಬೇಕೆಂದು ಅಪ್ಪಕುಂಞಿ ಮಣಿಯಾಣಿ ಮಿಂಚಿಪದವು ಹೇಳಿದರು.
ಅವರು ಸ್ಟೇಜ್ ಆಟರ್ಿಸ್ಟ್ ಆ್ಯಂಡ್ ವರ್ಕಸರ್್ ಆಸೋಸಿಯೇಶನ್ನ ಕಾರಡ್ಕ ಬ್ಲಾಕ್ ಸಮಿತಿ ರೂಪೀಕರಣ ಸಭೆಯಲ್ಲಿ ಸದಸ್ಯತ್ವ ಅಭಿಯಾನ ಉದ್ಘಾಟಿಸಿ ಮಾತನಾಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ ಸವಕ್ ಜಿಲ್ಲಾಧ್ಯಕ್ಷ ಉಮೇಶ್ ಸಾಲ್ಯಾನ್ ಮಾತನಾಡಿ ಸವಕ್ ಕಲಾವಿದರ ಮತ್ತು ಕಲಾವಿದ ಪರಿವಾರದ ಯೋಗ ಕ್ಷೇಮಕ್ಕಾಗಿ ರೂಪುಗೊಂಡ ಸಂಸ್ಥೆ. ಅಶಕ್ತ ಕಲಾವಿದರಿಗೆ ಸಹಾಯಮಾಡುವ ಉದ್ದೇಶವಿಟ್ಟು ಕಲಾವಿದರ ಒಕ್ಕೂಟದಿಂದ ವಿವಿಧ ಕಾರ್ಯಕ್ರಮಗಳನ್ನು ಮತ್ತು ಕುಟುಂಬ ಸಂಗಮದಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕಾರ್ಯಕ್ರಮಗಳಿಂದ ಸಂಗ್ರಹವಾದ ಮೊತ್ತದಿಂದ ಅಸಕ್ತ ಸವಕ್ ಕಲಾವಿದರಿಗೆ ನೆರವು ನೀಡಲಾಗುವುದೆಂದರು.
ಜಿಲ್ಲಾ ಪ್ರಧಾನ ಕಾರ್ಯದಶರ್ಿ ಡಾ.ರಾಜೇಶ ಆಳ್ವ ಕಲಾವಿದರಿಗೆ ಸವಾಕ್ ಮುಖೇನ ಕೇರಳ ಸರಕಾರ ಕ್ಷೇಮನಿಧಿ ಬೋಡರ್್ನಿಂದ ಸಿಗುವ ವಿವಾಹ, ಅನಾರೋಗ್ಯ, ಚಿಕಿತ್ಸಾ ಭತ್ತೆಗಳ ಮತ್ತು ಪಿಂಚಣಿಗಳ ಬಗ್ಗೆ ವಿವರ ನೀಡಿದರು. ಕಾರ್ಯದಶರ್ಿ ತುಳಸಿಧರನ್ ಜನವರಿ 20ರಂದು ನಡೆಯವ ಕುಟುಂಬ ಸಂಗಮ ಯಶಸ್ವಿನ ಬಗ್ಗೆ ರೂಪುರೇಷೆ ನೀಡಿದರು. ಕೆ ರಾಮಯ್ಯ ರೈ, ಸುಂದರ ರೈ, ಸುಬ್ರಮಣ್ಯ ಜೆ, ಎಂ.ಲಕ್ಷ್ಮಣ ರಾವ್, ಸುಜಾತ ಕಾರಡ್ಕ, ವಿನು ಬೋವಿಕ್ಕಾನ ಮೊದಲಾದವರು ಉಪಸ್ಥಿತರಿದ್ಧರು.
ಕಾರಡ್ಕ ಬ್ಲಾಕ್ ಸಮಿತಿ ಅಧ್ಯಕ್ಷ ಎ.ಬಿ.ಮದುಸೂದನ ಬಲ್ಲಾಳ್ ಸ್ವಾಗತಿಸಿ, ಕಾರ್ಯದಶರ್ಿ ಸುಂದರ ಮವ್ವಾರ್ ಕಾರ್ಯಕ್ರಮ ನಿರ್ವಹಿಸಿದರು. ಕೋಶಾಧಿಕಾರಿ ಚಂದ್ರಶೇಖರ ಆಚಾರ್ಯ ವಂದಿಸಿದರು.