ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 30, 2017
ಮಲ್ಲದಲ್ಲಿ ಯಕ್ಷಗಾನ ಬಯಲಾಟ
ಮುಳ್ಳೇರಿಯ: ಕಲಾಮಾತೆ ಮಲ್ಲಾಂಬಿಕೆಯ ಸನ್ನಿಧಿಯಲ್ಲಿ ಯಕ್ಷಗಾನ ಪ್ರದರ್ಶನ ಹೆಚ್ಚಾಗಿ ನಡೆಯುತ್ತಿದೆಯಾದರೂ ಇಂದು ಹೆಸರಾಂತ ಕಲಾವಿದರು ಸಂಗಮಿಸಿರುವುದು ಸಂತೋಷ ನೀಡಿದೆ. ಕಲಾಪ್ರೇಮಿಗಳಿಗೂ ಆನಂದವನ್ನುಂಟುಮಾಡಿದೆ. ಕಲೆಯನ್ನು ಮೈಗೂಡಿಸಿಕೊಂಡ ಕಲಾವಿದರಿಗೂ, ಕಲೆಯನ್ನು ಪ್ರೋತ್ಸಾಹಿಸುವ ಸನ್ಮನಸುಗಳಿಗೂ ಶ್ರೀ ಮಾತೆಯು ಸನ್ಮಂಗಳವನ್ನುಂಟುಮಾಡಲಿ ಎಂದು ಉದ್ಘಾಟಿಸಿದ ಧರ್ಮದಶರ್ಿ ಆನೆಮಜಲು ವಿಷ್ಣು ಭಟ್ ಹಾರೈಸಿದರು.
ಮಲ್ಲ ಶ್ರೀ ದುಗರ್ಾ ಆಟ್ಸರ್್ ಆ್ಯಂಡ್ ಸ್ಪೋಟ್ಸರ್್ ಕ್ಬಬ್ ಶುಕ್ರವಾರ ಮಲ್ಲ ಶ್ರೀಕ್ಷೇತ್ರ ಪರಿಸರದಲ್ಲಿ ಸಾದರಪಡಿಸಿದ ಅಮೋಘ ಯಕ್ಷಗಾನ ಬಯಲಾಟ ರಾಧಾವಿಲಾಸ, ಸೌದಾಸ ಚರಿತ್ರೆ, ವಿರೋಚನ ಕಾಳಗ ಹಾಗೂ ಅಗ್ರ ಪೂಜೆ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ಹಿರಿಯ ಕಿರಿಯ ಕಲಾವಿದರ ಸಂಗಮವು ಕಾರ್ಯಕ್ರಮವು ವೈವಿಧ್ಯಮಯವಾಗಿ ಜರಗುವಂತೆ ಮಾಡಿತು. ನೆರೆದ ಪ್ರೇಕ್ಷಕರ ಕರತಾಡನದ ಪ್ರೋತ್ಸಾಹ, ಕಲಾವಿದರ ಉತ್ಸಾಹದ ಪ್ರದರ್ಶನ ಯಕ್ಷಗಾನದ ಮೆರುಗನ್ನು ಹೆಚ್ಚಿಸಿತ್ತು. ಮಲ್ಲಾಂಬಿಕೆಯೆದುರಲ್ಲಿ ಸತೀಶ್ ಶೆಟ್ಟಿ ಪಟ್ಲ ಅವರ ಮನಸೆಳೆಯುವ ಗಾಯನಕ್ಕೆ ಯಕ್ಷಗಾನದ ಬಾಲಕಲಾವಿದರಾದ ಉಪಾಸನಾ ಪಂಜರಿಕೆ ಹಾಗೂ ನಂದಕಿಶೋರ ಮವ್ವಾರು ಹೆಜ್ಜೆಹಾಕಿದರು.
ಹಿಮ್ಮೇಳದಲ್ಲಿ ಭಾಗವತರಾಗಿ ಸತೀಶ್ ಶೆಟ್ಟಿ ಪಟ್ಲ, ಗಣೇಶ್ ಭಟ್ ಹೊಸಮೂಲೆ, ರವೀಂದ್ರ ಕನ್ನಡಿಕಟ್ಟೆ ಮತ್ತು ಗಿರೀಶ್ ರೈ ಕಕ್ಕೆಪದವು ಅವರ ಕಂಚಿನ ಕಂಠದಲ್ಲಿ ಹೊರಹೊಮ್ಮಿತು.