HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಉದಯಗಿರಿಯಲ್ಲಿ ಸಂಭ್ರಮದ ಬಲೀಂದ್ರ ಹಬ್ಬ ಆಚರಣೆ ಬದಿಯಡ್ಕ: ಬೆಟ್ಟದ ಮೇಲೊಂದು ಶಾಲೆಯನ್ನು ಕಟ್ಟಿ ಸುತ್ತಮುತ್ತಲಿನ ಸಮಾಜದ ಅಜ್ಞಾನವನ್ನು ಜ್ಞಾನದ ಮೂಲಕ ದೂರೀಕರಿಸಿದ ಶಾಲೆಯಲ್ಲಿ ದೀಪಾವಳಿ-ಬಲೀಂದ್ರ ಹಬ್ಬವನ್ನು ಆಚರಿಸುವುದು ಹೆಚ್ಚು ಔಚಿತ್ಯಪೂರ್ಣವೆಂದು ನಿವೃತ್ತ ಮುಖ್ಯೋಪಾಧ್ಯಾಯ ಪಿಲಿಂಗಲ್ಲು ಕೃಷ್ಣಭಟ್ ಹೇಳಿದರು. ಅವರು ಶ್ರೀ ಶಂಕರ ನಾರಾಯಣ ಪಂಚಾಯತು ಕಿರಿಯ ಪ್ರಾಥಮಿಕ ಶಾಲೆ ಉದಯಗಿರಿಯಲ್ಲಿ ಬಲೀಂದ್ರ ಹಬ್ಬವನ್ನು ಆಚರಿಸಿದ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಆಚರಣೆಗಳು ಊರಿನ ಜನತೆಯಲ್ಲಿ ಪ್ರೀತಿ, ವಿಶ್ವಾಸ ಒಗ್ಗಟ್ಟು ತುಂಬುತ್ತದೆ. ಅಜ್ಞಾನ,ಅಂಧಕಾರ,ಅಪನಂಬಿಕೆಗಳು ಉರಿದು ಭಸ್ಮವಾಗಿ ಜ್ಞಾನಜ್ಯೋತಿಯನ್ನು ಬೆಳಗಿಸುತ್ತದೆ. ಕನ್ನಡ,ತುಳುನಾಡಿನ ಕಲೆ ಸಂಸ್ಕೃತಿಗಳನ್ನು ಮುಂದಿನ ತಲೆಮಾರಿಗೆ ದಾಟಿಸುವಂತಹ ಮಹಾತ್ಕಾರ್ಯಗಳನ್ನು ಶಾಲೆಗಳು ಮಾಡಬೇಕೆಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು. ಕಾರ್ಯಕ್ರಮದಲ್ಲಿ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಕುಸುಮ, ಮಾತೃಸಂಘದ ಅಧ್ಯಕ್ಷೆ ಬೇಬಿ ಶಾಲಿನಿ, ಶಿಕ್ಷಕರಾದ ವೆಂಕಟರಾಜ್ ವಾಶೆ, ವಿನೋದ್ ಕುಮಾರ್ ಚಾಲೆತ್ತಡ್ಕ, ಹಿರಿಯರಾದ ಸಂಕ್ರಾಂತಿ ಕೈಲಂಕಜೆ, ಬಟ್ಯ ಬಾಂಜತ್ತಡ್ಕ, ಸುಂದರ ಬಾಂಜತ್ತಡ್ಕ, ಪುರುಷೋತ್ತಮ ಭಟ್ ಮಿಂಚಿನಡ್ಕ. ಗೋವಿಂದ ಭಟ್ ಶಿಮಿಲಡ್ಕ, ರವಿ ಕೈಲಂಕಜೆ, ಗೀತಾಮಾಲಿನಿ, ಶಿವಪ್ಪ ಮೂಲ್ಯ ಕೊಲ್ಲಂಪಾರೆ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು. ಶಾಲೆಯಲ್ಲಿ ಸಂಜೆ ಗ್ರಾಮೀಣ ಆಟಗಳನ್ನು ಆಡಿ ರಾತ್ರಿ ಬಲೀಂದ್ರ ಸ್ಥಾಪಿಸಿ ಹೂವಿನಿಂದ ಅಲಂಕರಿಸಿ ಹಣತೆ ದೀಪಗಳಿಂದ ಶಾಲೆಯನ್ನು ಬೆಳಗಿಸಿ ಸಿಡಿಮದ್ದಿ ಸಿಡಿಸಿ ಮಕ್ಕಳು ಸಂಭ್ರಮಿಸಿದರು. ಅವಲಕ್ಕಿ ಪ್ರಸಾದ,ಪಾನಕ,ಸಿಹಿತಿಂಡಿಯ ವಿತರಣೆಯೂ ನಡೆಯಿತು. ಹೆತ್ತವರು,ಊರವರು,ಹಳೆ ವಿದ್ಯಾಥರ್ಿಗಳು,ಸ್ಥಳೀಯ ಸಂಘ ಸಂಸ್ಥೆಗಳ ಪದಾಧಿಕಾರಿಗಳು,ಮಕ್ಕಳು ಅಧ್ಯಾಪಕರು ಈ ಸಂದರ್ಭದಲ್ಲಿ ಪಾಲ್ಗೊಂಡರು. ಶಿಕ್ಷಕ ರಾಜೇಶ್.ಎಸ್ ಸ್ವಾಗತಿಸಿ, ಮುಖ್ಯೋಪಾಧ್ಯಾಯಿನಿ ಐ.ಅಂಬಿಕಾ ಸರಸ್ವತಿ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries