HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಪಿ.ಶೇಷಾದ್ರಿ, ಹೆಚ್.ಜಿ.ದತ್ತಾತ್ರೇಯ, ಜಗದೀಶ್ ಮಲ್ನಾಡ್ ಕಾಸರಗೋಡಿಗೆ ಕಾಸರಗೋಡು: ಕನ್ನಡ ಚಿತ್ರರಂಗಕ್ಕೆ ರಾಷ್ಟ್ರೀಯ ಮಟ್ಟದ ಗೌರವ ತಂದುಕೊಟ್ಟ ರಾಷ್ಟ್ರ ಪ್ರಶಸ್ತಿ ವಿಜೇತ ಚಲನಚಿತ್ರ ನಿದರ್ೇಶಕ ಪಿ.ಶೇಷಾದ್ರಿ, ರಾಷ್ಟ್ರಪ್ರಶಸ್ತಿ ವಿಜೇತ ಚಲನಚಿತ್ರ ನಟ ಹೆಚ್.ಜಿ.ದತ್ತಾತ್ರೇಯ ಹಾಗು ಚಿತ್ರನಟ-ನಿಮರ್ಾಪಕ ಜಗದೀಶ್ ಮಲ್ನಾಡ್ ಅವರು ಅ. 14 ರಂದು ಶನಿವಾರ ಕಾಸರಗೋಡಿಗೆ ಆಗಮಿಸಲಿದ್ದಾರೆ. ಸಾಮಾಜಿಕ - ಸಾಂಸ್ಕೃತಿಕ ಸಂಸ್ಥೆಯಾದ ರಂಗಚಿನ್ನಾರಿ ಕಾಸರಗೋಡು ಇದರ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಕಾರದೊಂದಿಗೆ ಕರಂದಕ್ಕಾಡಿನ ಪದ್ಮಗಿರಿ ಕಲಾಕುಟೀರದಲ್ಲಿ ಆಯೋಜಿಸಿರುವ ರಾಷ್ಟ್ರ ಪ್ರಶಸ್ತಿ ವಿಜೇತ ಚಲನಚಿತ್ರ ನಿದರ್ೇಶಕ ಪಿ.ಶೇಷಾದ್ರಿ ಅವರ `ಕನ್ನಡ ಚಲನ ಚಿತ್ರೋತ್ಸವ' ಕಾರ್ಯಕ್ರಮದ ಹಿನ್ನೆಲೆಯಲ್ಲಿ ಅವರು ಬರಲಿದ್ದಾರೆ. ಪಿ.ಶೇಷಾದ್ರಿ : ಕನ್ನಡ ಚಲನಚಿತ್ರ ರಂಗದಲ್ಲಿ ಸಾಕಷ್ಟು ಸಾ`ನೆಯ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಖ್ಯಾತ ನಿದರ್ೇಶಕ ಪಿ.ಶೇಷಾದ್ರಿ ಅವರ ಎಲ್ಲಾ ಕನ್ನಡ ಚಲನಚಿತ್ರಗಳು ರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಅವರು ನಿದರ್ೇಶಿಸಿದ ಮುನ್ನುಡಿ, ಅತಿಥಿ, ಬೇರು, ತುತ್ತೂರಿ, ವಿಮುಕ್ತಿ, ಬೆಟ್ಟದ ಜೀವ, ಭಾರತ್ ಸ್ಟೋರ್ಸ್ ಮತ್ತು ಡಿಸೆಂಬರ್-1 ಈ ಎಲ್ಲಾ ಚಿತ್ರಗಳು ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿದೆ. 2006 ರಲ್ಲಿ 9 ನೇ ಢಾಕಾ ಇಂಟರ್ನ್ಯಾಶನಲ್ ಫಿಲ್ಮ್ ಫೆಸ್ಟಿವಲ್ನಲ್ಲಿ ತುತ್ತೂರಿ ಚಿತ್ರ ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದಿದೆ. 2011 ರಲ್ಲಿ ರೂಪಕಲಾ ಉತ್ಸವದಲ್ಲಿ ನಾದಶ್ರೇಷ್ಠ ಕಲಾವಿದ ಮತ್ತು ರೂಪಕಲಾ ಬೆಳ್ಳಿ ಕಣ್ಮಣಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಚಲನಚಿತ್ರದಂತೆ ಟಿ.ವಿ. ಮಾಧ್ಯಮದಲ್ಲೂ ಖ್ಯಾತರಾಗಿರುವ ಅವರು ಇಂಚರ, ಕಾಮಧೇನು, ಕಥೆಗಾರ, ಮಾಯಾಮೃಗ, ನಿಕ್ಷೇಪ, ಕಣ್ಣುಮುಚ್ಚಾಲೆ, ಉಯ್ಯಾಲೆ, ಸುಬ್ಬಣ್ಣ, ಮೌನರಾಗ, ಸುಪ್ರಭಾತ, ಚಕ್ರತೀರ್ಥ, ಸಾಕ್ಷಿ ಮೊದಲಾದ ಧಾರಾವಾಹಿಗಳನ್ನು ನಿದರ್ೇಶಿಸಿದ್ದಾರೆ. 1963 ನವಂಬರ್ 23 ರಂದು ಜನಿಸಿದ ಪಿ.ಶೇಷಾದ್ರಿ ಅವರು ರಾಷ್ಟ್ರಮಟ್ಟದಲ್ಲಿ ಖ್ಯಾತಿಯನ್ನು ಪಡೆದ ಕನ್ನಡ ಚಿತ್ರರಂಗದಲ್ಲಿ ಹೊಸ ಸಂಚಲನವನ್ನುಂಟು ಮಾಡಿದ್ದಾರೆ. ಪದ್ಮಗಿರಿ ಕಲಾಕುಟೀರದಲ್ಲಿ ಆಯೋಜಿಸಿರುವ ಕನ್ನಡ ಚಲನ ಚಿತ್ರೋತ್ಸವದಲ್ಲಿ ಪಿ.ಶೇಷಾದ್ರಿ ಅವರ ರಾಷ್ಟ್ರೀಯ ಪ್ರಶಸ್ತಿ ಪಡೆದ ಡಿಸೆಂಬರ್-1 ಮತ್ತು ಬೆಟ್ಟದ ಜೀವ ಪ್ರದರ್ಶನಗೊಳ್ಳಲಿದೆ. ಇದೇ ಸಂದರ್ಭದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ಚಲನಚಿತ್ರ ನಟ ಹೆಚ್.ಜಿ.ದತ್ತಾತ್ರೇಯ ಹಾಗು ಚಿತ್ರ ನಟ, ನಿಮರ್ಾಪಕ ಜಗದೀಶ್ ಮಲ್ನಾಡ್ ಭಾಗವಹಿಸುವರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries