ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 30, 2017
ಮಾಹಿತಿ ಕಾಯರ್ಾಗಾರ ಕಾರ್ಯಕ್ರಮ
ಪೆರ್ಲ: ಕುಂಟಾಕುಮೂಲೆಯ ಚಿರಂಜೀವಿ ಮಿತ್ರವೃಂದ ಮತ್ತು ಚೈಲ್ಡ್ಲೈನ್ ಕಾಸರಗೋಡು ಇದರ ಜಂಟಿ ಆಶ್ರಯದಲ್ಲಿ ಕುಂಟಾಲುಮೂಲೆ ಶ್ರೀ ಆದಿಶಕ್ತಿ ಅಯ್ಯಪ್ಪ ಸ್ವಾಮಿ ಭಜನಾ ಮಂದಿರ ಪರಿಸರದಲ್ಲಿ `ಮಕ್ಕಳ ಸಂರಕ್ಷಣೆಯಲ್ಲಿ ಹೆತ್ತವರ ಜವಬ್ದಾರಿಗಳು' ಎಂಬ ವಿಷಯವನ್ನಾಧರಿಸಿ ಭಾನುವಾರ ಮಾಹಿತಿ ಕಾಯರ್ಾಗಾರ ಕಾರ್ಯಕ್ರಮ ನಡೆಯಿತು.
ಚಿರಂಜೀವಿ ಮಿತ್ರವೃಂದದ ಅಧ್ಯಕ್ಷ ಗೋಪಾಲಕೃಷ್ಣ ಕಾರೇಕ್ಕಾಡ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಬದಿಯಡ್ಕ ಪೊಲೀಸ್ ಠಾಣೆ ಅಧಿಕಾರಿ ವಿನೋದ್ ಕುಮಾರ್ ಉದ್ಘಾಟಿಸಿದರು. ಮದ್ಯ ವ್ಯಸನ ಮತ್ತು ಮಾದಕ ದ್ರವ್ಯಗಳ ಸೇವನೆ ಕುರಿತಾಗಿ ಅಬಕಾರಿ ಇಲಾಖೆಯ ಅಧಿಕಾರಿ ವಿಜಯ ಕುಮಾರ್ ಥೋಮಸ್ ಹೆತ್ತವರಲ್ಲಿ ಜಾಗೃತಿ ಮೂಡಿಸಿದರು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಲಜಾಕ್ಷಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು. ಚೈಲ್ಡ್ಲೈನ್ ಸಂಯೋಜಕ ಉದಯ ಕುಮಾರ್ ಎಂ. ಹೆತ್ತವರಿಗೆ ತರಗತಿ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ಸೀತಕ್ಕ ಕುಂಟಾಲುಮೂಲೆ ಅವರಿಗೆ ಚಿರಂಜೀವಿ ಮಿತ್ರವೃಂದ ಕುಂಟಾಕುಮೂಲೆ ಇದರ ವತಿಯಿಂದ ಧನಸಹಾಯ ನೀಡಲಾಯಿತು. ಚಿರಂಜೀವಿ ಮಿತ್ರವೃಂದದ ಸಂಚಾಲಕ ಬಾಲಕೃಷ್ಣ ಮಾಸ್ತರ್ ಅಚ್ಚಾಯಿ ಸ್ವಾಗತಿಸಿ, ರಾಜೇಂದ್ರ ನೆಲ್ಲಿಕಳಯ ವಂದಿಸಿದರು. ರಶ್ಮಿ ಮತ್ತು ವಿಜಯಲಕ್ಷ್ಮಿ ಪ್ರಾರ್ಥನೆ ಹಾಡಿದರು. ಸಂಘಟನೆಯ ಸದಸ್ಯ ಕೃಷ್ಣ ಎನ್. ನೆಲ್ಲಿಕಳಯ ಕಾರ್ಯಕ್ರಮ ನಿರೂಪಿಸಿದರು.