ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 02, 2017
ಸೇವ್ ಉಪ್ಪಳ ರೈಲು ನಿಲ್ದಾಣ ಸಮಿತಿಯಿಂದ ಹೆಲ್ಪ್ ಡೆಸ್ಕ್ ಆರಂಭ
ಉಪ್ಪಳ: ವಿವಿಧ ಕಾರಣಗಳನ್ನೊಡ್ಡಿ ಹೆಚ್ಚು ರೈಲುಗಾಡಿಗಳಿಗೆ ನಿಲುಗಡೆ ನೀಡದೆ ಉಪ್ಪಳ ರೈಲು ನಿಲ್ದಾಣವನ್ನು ಅಧಿಕೃತರು ನಿರ್ಲಕ್ಷ್ಯಿಸುತ್ತಿರುವುದರಿಂದ ಪ್ರಾಥಮಿಕ ಸೌಕರ್ಯಗಳಿಲ್ಲದೆ ನಲುಗುತ್ತಿರುವ ರೈಲು ನಿಲ್ದಾಣವನ್ನು ಉನ್ನತಿಗೇರಿಸುವ ನಿಟ್ಟಿನಲ್ಲಿ ರೈಲು ಪ್ರಯಾಣಿಕರು, ನಾಗರಿಕರು ರಚಿಸಿರುವ ಸೇವ್ ಉಪ್ಪಳ ರೈಲು ನಿಲ್ದಾಣ ಕ್ರಿಯಾ ಸಮಿತಿಯ ನೇತೃತ್ವದಲ್ಲಿ ಸೋಮವಾರ ಉಪ್ಪಳ ರೈಲು ನಿಲ್ದಾಣದಲ್ಲಿ ಹೆಲ್ಪ್ ಡೆಸ್ಕ್ ಗೆ ಚಾಲನೆ ನೀಡಲಾಯಿತು.
ಸೋಮವಾರ ಬೆಳಿಗ್ಗೆ 8 ಗಂಟೆಗೆ ಕ್ರಿಯಾ ಸಮಿತಿ ಅಧ್ಯಕ್ಷ ನ್ಯಾಯವಾದಿ ಬಾಲಕೃಷ್ಣ ಶೆಟ್ಟಿ ಉದ್ಘಾಟಿಸಿ ಚಾಲನೆ ನೀಡಿದರು. ಕ್ರಿಯಾ ಸಮಿತಿಯ ಮುಖಂಡರಾದ ಅಝೀಂ ಮಣಿಮುಂಡ, ಆರ್.ರಮಣನ್ ಮಾಸ್ತರ್, ಮೊಹಮ್ಮದ್ ರಫೀಕ್ ಕೆ.ಐ, ಶುಕೂರ್ ಹಾಜಿ, ಎಂ.ಕೆ ಅಲಿ ಮಾಸ್ತರ್, ಕಮಲಾಕ್ಷ, ಹನೀಫ್ ರೈನ್ಬೋ, ಯು.ಎಂ.ಭಾಸ್ಕರ್, ಮೊಹಮ್ಮದ್ ನಾಫಿ ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭ ಗಾಂಧಿ ಜಯಂತಿಯ ಅಂಗವಾಗಿ ರೈಲ್ವೇ ನಿಲ್ದಾಣ ಶುಚೀಕರಣಕ್ಕೆ ಚಾಲನೆ ನೀಡಲಾಯಿತು. ಪ್ರತಿತಿಂಗಳ 2ರಿಂದ 5ನೇ ತಾರೀಖಿನ ವರೆಗೆ ಬೆಳಿಗ್ಗೆ 7 ರಿಂದ ಸಂಜೆ 5ರ ವರೆಗೆ ಈ ಹೆಲ್ಪ್ ಡೆಸ್ಕ್ ಕಾಯರ್ಾಚರಿಸಲಿದೆ.