ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 16, 2017
ಪೆರಡಾಲ ಶಾಲಾ ಕಲೋತ್ಸವ
ಬದಿಯಡ್ಕ: ಕಲೋತ್ಸವವು ಮಕ್ಕಳ ಸುಪ್ತ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ವೇದಿಕೆಯಾಗಲಿ ಎಂದು ಬದಿಯಡ್ಕ ಗ್ರಾಮ ಪಂಚಾಯಿತಿ ಸದಸ್ಯೆ ಶಾಂತಾ ಹೇಳಿದರು.
ಅವರು ಇತ್ತೀಚೆಗೆ ಪೆರಡಾಲ ಶಾಲಾ ಕಲೋತ್ಸವ ಉದ್ಘಾಟಿಸಿ ಮಾತನಾಡಿದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ ರಹಮಾನ್ ಅನ್ನಡ್ಕ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ರಾಮ, ಮಾತೃ ಸಂಘದ ಅಧ್ಯಕ್ಷೆ ಅನ್ನತ್ತ್ ಬೀವಿ, ಶಿಕ್ಷಕಿಯರಾದ ದಿವ್ಯ ಗಂಗಾ ಉಪಸ್ಥಿತರಿದ್ದರು.
ಕಲೋತ್ಸವ ಸಂಚಾಲಕ ಶ್ರೀಜಿತ್ ಸ್ವಾಗತಿಸಿ, ಶಿಕ್ಷಕಿ ಮನೋಜಾ ವಂದಿಸಿದರು. ಶಿಕ್ಷಕ ಬಿನು ಕಾರ್ಯಕ್ರಮ ನಿರೂಪಿಸಿದರು. ಕಲೋತ್ಸವವು ಎರಡು ದಿನ, ಮೂರು ವೇದಿಕೆಗಳಲ್ಲಿ ನಡೆಯಿತು.