HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಅಮೃತಧಾರಾ ಗೋಶಾಲೆಯಲ್ಲಿ ಶ್ರೀ ಮದ್ವಾಲ್ಮೀಕಿ ರಾಮಾಯಣ ಪಾರಾಯಣ ನವಾಹ ಕಾರ್ಯಕ್ರಮ ಪ್ರಾರಂಭ ಪೆರ್ಲ: ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಅಧೀನ ಅಂಗಸಂಸ್ಥೆಯಾದ ಬಜಕೂಡ್ಲು ಅಮೃತಧಾರಾ ಗೋಶಾಲೆ ಗೋಲೋಕ ದಲ್ಲಿ ಗೋಕರ್ಣ ಮಾಹಾಮಂಡಲದ ಮುಳ್ಳೇರಿಯಾ ಹವ್ಯಕ ಮಂಡಲದ ವತಿಯಿಂದ " ಶ್ರೀ ಮದ್ವಾಲ್ಮೀಕಿ ರಾಮಾಯಣ ಪಾರಾಯಣ ನವಾಹ " ಕಾರ್ಯಕ್ರಮವು ಶುಕ್ರವಾರವಿದ್ಯುಕ್ತವಾಗಿ ಶುಭಾರಂಭಗೊಂಡಿತು. ಧಾಮರ್ಿಕ ವಿಧಿವಿಧಾನಗಳ ಅಂಗವಾಗಿ ದೀಪ ಜ್ವಲನ, ಸಾಮೂಹಿಕ ಪ್ರಾರ್ಥನೆ, ಧ್ವಜಾರೋಹಣ, ಗುರುವಂದನೆ, ನಾಂದೀ-ಪುಣ್ಯಾಹ, ಪ್ರಧಾನ ಸಂಕಲ್ಪ, ಋತ್ವಿಗ್ವರಣ, ಕಲಶ ಪೂಜೆ, ಗಣಪತಿ ಹವನಗಳೊಂದಿಗೆ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಸಂಕಲ್ಪಿತ ಶ್ರೀ ಮದ್ವಾಲ್ಮೀಕಿ ರಾಮಾಯಣ ಪಾರಾಯಣ ನವಾಹ ಕಾರ್ಯಕ್ರಮವು ಮಹಾ ಮಂಡಲ ಧರ್ಮಕರ್ಮ ವಿಭಾಗ ಪ್ರಧಾನ ವೇ. ಮೂ. ಕೇಶವಪ್ರಸಾದ ಕೂಟೇಲು ಅವರ ನೇತೃತ್ವದಲ್ಲಿ ಹನ್ನೆರಡು ಮಂದಿ ವೈದಿಕ ವಿಧ್ವಾಂಸರಿಂದ ಆರಂಭವಾಯಿತು. ಮೊದಲನೆಯ ದಿವಸ ಪೂರ್ಣ ಬಾಲಕಾಂಡವನ್ನು ಪಾರಾಯಣ ನಡೆಸಲಾಯಿತು. ಪಾರಾಯಣದ 73 ನೇ ಸರ್ಗದಲ್ಲಿ ಸೀತಾಸ್ವಯಂವರದ ಪ್ರಸಂಗದ ಸಂದರ್ಭದಲ್ಲಿ ಸೀತಾರಾಮಚಂದ್ರರಿಗೆ ಷೋಡಶೋಪಚಾರ ಪೂಜೆ ಮಾಡಿ ಮಂಗಲಘೋಷದೊಂದಿಗೆ ಸೀತಾವಿವಾಹಮಂಗಲೋತ್ಸವ, ಸೀತಾರಾಮಚಂದ್ರರಿಗೆ ಉಡುಗೊರೆಯ ರೂಪದಲ್ಲಿ ಧನ-ಕನಕ-ವಸ್ತ್ರಾದಿಗಳನ್ನು ಸಮಪರ್ಿಸಲಾಯಿತು. ಮುಂದಿನ ಸತತ ಒಂಬತ್ತು ದಿವಸಗಳ ಕಾಲ ಹನ್ನೆರಡು ಮಂದಿ ವಿದ್ವಾಂಸರಿಂದ ನವಾಹ ವಿಧಿಯಲ್ಲಿ ಪಾರಾಯಣ ಜರಗಿ ಅ. 29 ರಂದು ಶ್ರೀ ರಾಮ ಪಟ್ಟಾಭಿಷೇಕ, ಗೋಮಾತಾ ಸಪಯರ್ಾ- ಗೋಪಾಷ್ಟಮಿ ಮಹೋತ್ಸವದೊಂದಿಗೆ ವೈಭವದಿಂದ ಸಂಪೂರ್ಣಗೊಳ್ಳಲಿದೆ. ಎಲ್ಲಾ ಹೋಮ ಹವನಗಳನ್ನು ದೇಶೀ ಗೋವಿನ ತುಪ್ಪ, ಸೆಗಣಿಯಿಂದ ತಯಾರಿಸಿದ ಬೆರಣಿಯಂದ ನಡೆಸುತ್ತಿರುವುದು ಕಾರ್ಯಕ್ರಮದ ವೈಶಿಷ್ಟ್ಯವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries