ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 20, 2017
ಮಂಜೇಶ್ವರ: ಬಂಗ್ರ ಮಂಜೇಶ್ವರ ಶ್ರೀ ಕಾಳಿಕಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರ ಪದಗ್ರಹಣ ಕಾರ್ಯಕ್ರಮ ಕ್ಷೇತ್ರದಲ್ಲಿ ಶುಕ್ರವಾರ ಬೆಳಗ್ಗೆ ನಡೆಯಿತು.
ನವರಾತ್ರಿ ಮಹೋತ್ಸವದಂದು ನಡೆದ ವಾಷರ್ಿಕ ಮಹಾಸಭೆಯಲ್ಲಿ ಅಯ್ಕೆಗೊಂಡ ವೆಂಕಟ್ರಮಣ ಆಚಾರ್ಯ ಮುಳಿಗದ್ದೆ, ಬತ್ತೇರಿ ಪದ್ಮನಾಭ ಆಚಾರ್ಯ ಪ್ರತಾಪನಗರ, ಬಿ. ಎಂ. ಅಶೋಕ ಆಚಾರ್ಯ ಉದ್ಯಾವರ ಎಂಬವರು ಶುಕ್ರವಾರ ಕ್ಷೇತ್ರದಲ್ಲಿ ತಮ್ಮ ಅಧಿಕಾರದ ಹಸ್ತಾಂತರವನ್ನು ಪಡೆದು, 5 ವರ್ಷದ ಆಡಳಿತಕ್ಕೆ ಮೊಕ್ತೇಸರರಾಗಿ ಕ್ಷೇತ್ರದ ಉಸ್ತುವಾರಿಯನ್ನು ವಹಿಸಿಕೊಂಡರು. ಕ್ಷೇತ್ರದಲ್ಲಿ ಬೆಳಗ್ಗೆ ದೇವರಿಗೆ ವಿಶೇಷ ಪೂಜೆ ಸಲಿಸಲಾಯಿತು. ಬಳಿಕ ಕ್ಷೇತ್ರದ ತಂತ್ರಿವರೇಣ್ಯ ಬ್ರಹ್ಮಶ್ರೀ ಉಮೇಶ್ ತಂತ್ರಿ ಮಂಗಳೂರು ವಿಶೇಷ ಪ್ರಾರ್ಥನೆ ನಡೆಸಿ ಅಧಿಕಾರದ ಹಸ್ತಾಂತರವನ್ನು ನೂತನವಾಗಿ ಆಯ್ಕೆಯಾದ ಆಡಳಿತ ಮೊಕ್ತೇಸರರಿಗೆ ನೀಡಿದರು. ಈ ವೇಳೆ ಕ್ಷೇತ್ರದ ಆಡಳಿತ ಸಮಿತಿ ಪದಾಧಿಕಾರಿಗಳು, ಸದಸ್ಯರು, ಪ್ರಾಂತ್ಯ ಮೊಕ್ತೇಸರರು, ಓಜ ಸಾಹಿತ್ಯ ಕೂಟ, ಮಹಿಳಾ ಸಂಘದ ಸದಸ್ಯರು, ಅರ್ಚಕ ವೃಂದದವರು ಭಕ್ತಜನರು ಪಾಲ್ಗೊ0ಡರು.