ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 12, 2017
ಬದಿಯಡ್ಕ : ಭವಿಷ್ಯದ ಉತ್ತಮ ಕ್ರೀಡಾಪಟುಗಳನ್ನು ರೂಪಿಸಲು ಕ್ರೀಡಾಕೂಟಗಳಿಂದ ಸಾಧ್ಯವಿದೆ. ಶಾಲಾ ಮಟ್ದಲ್ಲಿ ಉತ್ತಮ ಪ್ರದರ್ಶನ ನೀಡುವ ಮಗುವೇ ಮುಂದೇ ದೇಶದ ಹೆಮ್ಮೆಯ ಕ್ರೀಡಾಪಟುವಾಗಿ ಮೂಡಿಬರಲು ಸಾಧ್ಯವಿದೆ ಎಂದು ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ಹೇಳಿದರು.
ಅವರು ಬುಧವಾರ ಬದಿಯಡ್ಕ ಬೋಳುಕಟ್ಟೆ ಮಿನಿ ಸ್ಟೇಡಿಯಂನಲ್ಲಿ ಜರಗಿದ ಕುಂಬಳೆ ಉಪಜಿಲ್ಲಾ ಮಟ್ಟದ ಶಾಲಾ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಬದಿಯಡ್ಕ ಗ್ರಾಮಪಂಚಾಯತು ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮೀಣ ಪ್ರದೇಶದ ಕ್ರೀಡಾಪಟುಗಳನ್ನು ರಾಜ್ಯ, ರಾಷ್ಟ್ರೀಯ ಮಟ್ಟದ ಮೇಲಸ್ತರ ತಲುಪಲು ಇಂತಹ ಕ್ರೀಡಾಕೂಟಗಳು ಪ್ರೋತ್ಸಾಹದಾಯಕವಾಗಿದೆ ಎಂದರು. ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕ ಶಂಕರ್ ಸಾರಡ್ಕ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು. ಬ್ಲಾಕ್ ಪಂಚಾಯತು ಸದಸ್ಯ ಎಸ್.ಅಹಮ್ಮದ್, ಗ್ರಾಮಪಂಚಾಯತು ಉಪಾಧ್ಯಕ್ಷೆ ಸೈಬುನ್ನೀಸ, ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಅಧ್ಯಕ್ಷ ಶ್ಯಾಮಪ್ರಸಾದ ಮಾನ್ಯ, ಸದಸ್ಯೆ ಶಾಂತಾ, ಪ್ರಶಾಂತ್, ವಿಷ್ಣುಪಾಲ್ ಶುಭಾಶಂಸನೆಗೈದರು. ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ಪ್ರತಿಭೆಗಳಾದ ಅಗಲ್ಪಾಡಿ ಶಾಲೆಯ ಯಶ್ಮಿತಾ, ದೀಪಿಕಾ, ಹಾಗೂ ರಾಷ್ಟ್ರ ಮಟ್ಟದ ಚೆಸ್ ಸ್ಪಧರ್ೆಗೆ ಆಯ್ಕೆಯಾದ ಕು. ಗಾನಸಮೃದ್ಧಿ, ಕ್ರೀಡಾ ಶಿಕ್ಷಕ ಶಶಿಕಾಂತ ಬಲ್ಲಾಳ್ ಹಾಗೂ ಈ ವರ್ಷ ಸೇವೆಯಿಂದ ನಿವೃತ್ತರಾಗುತ್ತಿರುವ ಮುಳ್ಳೇರಿಯ ಶಾಲೆಯ ಕ್ರೀಡಾ ಶಿಕ್ಷಕ ವಿಶ್ವನಾಥ ಅವರನ್ನು ಗೌರವಿಸಲಾಯಿತು.
ಪ್ರಕಾಶ್ ಕಾರ್ಯಕ್ರಮ ನಿರೂಪಣೆಗೈದರು. ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ವಿದ್ಯಾಥರ್ಿಗಳು ಪ್ರಾರ್ಥನೆಗೈದರು. ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಕೈಲಾಸಮೂತರ್ಿ ಸ್ವಾಗತಿಸಿ, ಕ್ರೀಡಾಕೂಟದ ಕಾರ್ಯದಶರ್ಿ ಅಶೋಕನ್ ವಂದಿಸಿದರು. 117 ಶಾಲೆಗಳಿಂದ ಆರಿಸಲ್ಪಟ್ಟ ವಿದ್ಯಾಥರ್ಿಗಳು 3 ದಿನಗಳಲ್ಲಾಗಿ ನಡೆಯುತ್ತಿರುವ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.