ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 15, 2017
ಬಂಜರು ಭೂಮಿಯಲ್ಲಿ ಕೃಷಿ ವಿಸ್ತರಿಸಬೇಕು-ಸಚಿವೆ ಮಸರ್ಿಕುಟ್ಟಿಯಮ್ಮ
ಬದಿಯಡ್ಕ: ಜಿಲ್ಲೆಯ ಉಪಯೋಗ ಶೂನ್ಯವಾಗಿರುವ ಬಂಜರು ಭೂಪ್ರದೇಶಗಳಲ್ಲಿ ಕೃಷಿ ಚಟುವಟಿಕೆಗಳನ್ನು ವಿಸ್ತರಿಸಬೇಕು ಎಂದು ರಾಜ್ಯ ಮೀನುಗಾರಿಕೆ, ಕರಾವಳಿ ಮತ್ತು ಗೇರುಕೃಷಿ ಅಭಿವೃದ್ದಿ ಸಚಿವೆ ಜೆ.ಮೆಸರ್ಿಕುಟ್ಟಿಯಮ್ಮ ಕರೆ ನೀಡಿದರು.
ಅವರು ನೆಲ್ಲಿಕಟ್ಟೆಯಲ್ಲಿ ನೂತನವಾಗಿ ಸ್ಥಾಪಿಸಲಾಗಿರುವ ಕಾಸರಗೋಡು ಪಾರ್ಮಸರ್್ ವೆಲ್ಪೇರ್ ಸಹಕಾರಿ ಬ್ಯಾಂಕ್ ಉದ್ಘಾಟಿಸಿ ಅವರು ಮಾತನಾಡಿದರು.
ಒಂದು ಹೆಕ್ಟೇರ್ ಭೂಭಾಗದಲ್ಲಿ 400 ಸಸಿಗಳನ್ನು ನೆಟ್ಟು ಬೆಳೆಸಲು ಸಾಧ್ಯವಿರುವ ರೀತಿಯಲ್ಲಿ ಗೇರು ಸಸಿಗಳನ್ನು ನೆಟ್ಟು ಬೆಳೆಸುವ ರೀತಿಯ ತಳಿಗಳನ್ನು ಸಂಶೋಧನಾ ಕೇಂದ್ರಗಳು ಈಗಾಗಲೇ ಉತ್ಪಾದಿಸಿವೆ. ಮೂರು ವರ್ಷಗಳಲ್ಲಿ ಇಂತಹ ಸಸಿಗಳು ಫಲ ನೀಡತೊಡಗುತ್ತವೆ. ಸರಕಾರ ಗೇರುಗಳನ್ನು ರೈತರಿಂದ ಉತ್ತಮ ಬೆಲೆಗೆ ಕೊಂಡುಕೊಳ್ಳಲು ಕಾರ್ಯಯೋಜನೆ ಸಿದ್ದಪಡಿಸಿದೆ ಎಮದು ಸಚಿವರು ತಿಳಿಸಿದರು.
ರಾಜ್ಯದ ಒಟ್ಟು ಆಥರ್ಿಕತೆಯಲ್ಲಿ ಸಹಕಾರಿ ಕ್ಷೇತ್ರದ ಕೊಡುಗೆ ಮಹತ್ತರವಾಗಿದೆ ಎಂದು ಅವರು ತಿಳಿಸಿದರು.
ಶಾಸಕ ಎನ್.ಎ.ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದ್ದರು. ಚೆಂಗಳ ಗ್ರಾಮ ಪಂಚಾಯತು ಅಧ್ಯಕ್ಷೆ ಶಾಹಿನಾ ಸಲೀಂ, ಮಾಜಿ ಶಾಸಕ ನ್ಯಾಯವಾದಿ ಸಿ.ಎಚ್ ಕುಂಞಿಂಬು, ಜಿಲ್ಲಾ ಸಹಾಯಕ ನೋಂದಣಾಧಿಕಾರಿ ವಿ.ಬಿ.ಕೃಷ್ಣಕುಮಾರ್, ಕೆ.ಜಯಚಂದ್ರನ್, ಸಹಕಾರಿ ಬ್ಯಾಂಕ್ ಜಿಲ್ಲಾ ಮಹಾಪ್ರಬಂಧಕ ಎ.ಅನಿಲ್ ಕುಮಾರ್, ಸಹಕಾರಿ ಬ್ಯಾಂಕ್ ಪರಿವೀಕ್ಷಕ ಕೆ.ನಾಗೇಶ್, ಚೆಂಗಳ ಗ್ರಾ.ಪಂ. ಉಪಾಧ್ಯಕ್ಷೆ ಇ.ಶಾಂತಕುಮಾರಿ, ಜಿಲ್ಲಾ ಪಂಚಾಯತು ಸದಸ್ಯ ನ್ಯಾಯವಾದಿ ಕೆ.ಶ್ರೀಕಾಂತ್, ಚೆಂಗಳ ಗ್ರಾಮ ಪಂಚಾಯತು ಸದಸ್ಯರುಗಳಾದ ನಾಸರ್ ಕಾಟುಕೊಚ್ಚಿ, ಶಶಿಕಲಾ, ಅಬ್ದುಲ್ಲ, ಸಿ.ಸಿಂಧು, ನೆಕ್ರಾಜೆ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷೆ ಸಿ.ಎಚ್.ವಿಜಯನ್, ನೆಕ್ರಾಜೆ ವನಿತಾ ಸೇವಾ ಸಹಕಾರಿ ಸಂಘದ ಅಧ್ಯಕ್ಷೆ ಎ.ಬೇಬಿ, ಮುಟ್ಟತ್ತೋಡಿ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷೆ ಇ.ಅಬೂಬಕರ್ ಹಾಜಿ ಬೇವಿಂಜೆ, ವೈಕ್ಕಂ ಭಾಸ್ಕರ್, ಕಾಸರಗೋಡು ನಗರ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಮಾಧವ ಹೇರಳ,ಕೆ.ಎ.ಮೊಹಮ್ಮದ್ ಹನೀಫ್, ಪುರುಷೋತ್ತಮನ್ ನಾಯರ್, ಎಂ.ಕೆ.ರವೀಂದ್ರನ್, ಅಬ್ದುಲ್ ಸಮದ್,ಬಿ.ಆರ್ ಗೋಪಾಲನ್, ಕೆ.ವಿ.ಗೋವಿಂದನ್ ಮಾಸ್ತರ್ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು.