ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 19, 2017
ಮಿಲಿಟರಿ ಸಮವಸ್ತ್ರ ತೊಟ್ಟು ಸೈನಿಕರ ಜತೆ ದೀಪಾವಳಿ ಆಚರಿಸಿದ ಮೋದಿ
ಜಮ್ಮು ಮತ್ತು ಕಾಶ್ಮೀರ: ಪ್ರಧಾನಿ ನರೇಂದ್ರ ಮೋದಿ ಸೈನಿಕರ ಜತೆ ದೀಪಾವಳಿ ಸಂಭ್ರಮದಲ್ಲಿ ಪಾಲ್ಗೊಂಡಿದ್ದಾರೆ. ಜಮ್ಮು ಮತ್ತು ಕಾಶ್ಮೀರ ರಾಜ್ಯದ ಗಡಿ ನಿಯಂತ್ರಣ ರೇಖೆ ಬಳಿಯಲ್ಲಿರುವ ಗೂರೆಜ್ ಕಣಿವೆಯಲ್ಲಿ ಭಾರತೀಯ ಸೇನೆ ಮತ್ತು ಗಡಿ ಭದ್ರತಾ ಪಡೆ ಯೋಧರ ಜತೆ ಪ್ರಧಾನಿಗಳು ದೀಪಾವಳಿ ಆಚರಿಸಿದರು.
ಸೈನಿಕರು ಜತೆ ಸುಮಾರು ಎರಡು ಗಂಟೆಗಳ ದೀರ್ಘ ಅವಧಿಯನ್ನು ಕಳೆದ ಪ್ರಧಾನಿ ಮೋದಿ ಸೈನಿಕರಿಗೆ ಸಿಹಿ ಹಂಚಿ ಪರಸ್ಪರ ಶುಭಾಷಯ ವಿನಿಮಯ ಮಾಡಿಕೊಂಡರು.
ನಂತರ ಸೈನಿಕರನ್ನುದ್ದೇಶಿ ಮಾತನಾಡಿದ ಪ್ರಧಾನಿ, "ನಾನು ನನ್ನ ಕುಟುಂಬದ ಜತೆ ದೀಪಾವಳಿ ಆಚರಿಸಿಕೊಳ್ಳಬೇಕು ಎಂದುಕೊಂಡಿದ್ದೆ. ಅದಕ್ಕಾಗಿಯೇ ಯೋಧರ ಜತೆ ದೀಪಾವಳಿ ಆಚರಿಸಿಕೊಳ್ಳಲು ಬಂದಿದ್ದೇನೆ. ನನಗೆ ಯೋಧರೆಂದರೆ ಕುಟುಂಬದವರಿದ್ದ ಹಾಗೆ," ಎಂದು ಹೇಳಿದರು