ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 10, 2017
ವಿಜ್ಞಾನೋತ್ಸವಕ್ಕೆ ಸಿದ್ಧತೆ
ಮುಳ್ಳೇರಿಯ: ಅ.25 ಮತ್ತು 26ರಂದು ಆದೂರು ಸರಕಾರಿ ಹೈಯರ್ ಸೆಕೆಂಡರೀ ಶಾಲೆಯಲ್ಲಿ ನಡೆಯಲಿರುವ 2017-18ನೇ ಸಾಲಿನ ಕುಂಬಳೆ ಉಪಜಿಲ್ಲಾ ವಿಜ್ಞಾನ, ಗಣಿತ ಶಾಸ್ತ್ರ, ಸಮಾಜ ವಿಜ್ಞಾನ, ಗಣಿತ, ಐಟಿ ಮತ್ತು ವೃತ್ತಿ ಪರಿಚಯ ಮೇಳದ ಸಿದ್ಧತೆಯ ಅವಲೋಕನಾ ಸಭೆ ಸೋಮವಾರ ಶಾಲೆಯ ಸಭಾಂಗಣದಲ್ಲಿ ನಡೆಯಿತು.
ಅ.25ರಂದು ವಿಜ್ಞಾನ, ಗಣಿತ ಶಾಸ್ತ್ರ ಮತ್ತು ಐಟಿ ಮೇಳ ನಡೆಯಲಿದ್ದು, ಅ.26ರಂದು ಸಮಾಜ ವಿಜ್ಞಾನ ಮತ್ತು ವೃತ್ತಿ ಪರಿಚಯ ಮೇಳವನ್ನು ನಡೆಯಲಿದೆ. ಈ ಬಗ್ಗೆ ನಡೆದ ಸಭೆಯಲ್ಲಿ ಕಾರಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸ್ವಪ್ನ.ಜಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಗೋಪಾಲಕೃಷ್ಣ, ಸ್ಥಾಯಿ ಸಮಿತಿ ಅಧ್ಯಕ್ಷರಾದ ರೇಣುಕಾದೇವಿ, ಜನನಿ, ಸದಸ್ಯರಾದ ತಸ್ನಿ ಹಮೀದ್, ಅನಸೂಯ ರೈ, ಕುಂಬಳೆ ಉಪಜಿಲ್ಲಾ ಸಹ ಶಿಕ್ಷಣಾಧಿಕಾರಿ ಕೈಲಾಸಮೂತರ್ಿ, ಆದೂರು ಪೊಲೀಸ್ ಠಾಣೆಯ ಎಸ್ಐ ಪ್ರಶೋಭ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಇಬ್ರಾಹಿಂ ಉಪಸ್ಥಿತರಿದ್ದರು. ಭಾಗವಹಿಸುವ ವಿದ್ಯಾಥರ್ಿಗಳ ಓನ್ ಲೈನ್ ನೋಂದಾವಣೆ ಅ.16ರ ಮುಂಚಿತವಾಗಿ ನಡೆಯಲಿದೆ.
ಮುಖ್ಯ ಶಿಕ್ಷಕ ಬಾಲಕೃಷ್ಣ.ಜಿ ಸ್ವಾಗತಿಸಿ, ಪ್ರಾಂಶುಪಾಲ ಶ್ರೀಕೃಷ್ಣ ಭಟ್ ವಂದಿಸಿದರು.