ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 19, 2017
ಅನಂತಪುರ ಕ್ಷೇತ್ರದಲ್ಲಿ ನವಾನ್ನ ಸಮರ್ಪಣೆ
ಕುಂಬಳೆ: ಸರೋವರ ಕ್ಷೇತ್ರವೆಂದೇ ಪ್ರಸಿದ್ಧಿ ಪಡೆದಿರುವ ಅನಂತಪುರ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಾಲಯದಲ್ಲಿ ನವಾನ್ನ ಸಮರ್ಪಣೆ ಮತ್ತು ಬಲಿವಾಡು ಕೂಟ ಕಾರ್ಯಕ್ರಮ ಬುಧವಾರ ಜರಗಿತು. ಕಾರ್ಯಕ್ರಮದಂಗವಾಗಿ ಗಣಪತಿ ಹೋಮ, ನವಕ ಹಾಗೂ ಶುದ್ಧಿಕಲಶ, ಸಂಗೀತ ಕಚೇರಿ ನಡೆಯಿತು. ಮಧ್ಯಾಹ್ನ ಮಹಾಪೂಜೆ ಬಳಿಕ ಅನ್ನ ಸಂತರ್ಪಣೆ, ಅಪರಾಹ್ನ ನಾರಾಯಣಮಂಗಲ ಶ್ರೀ ವಿಘ್ನೇಶ್ವರ ಯಕ್ಷಗಾನ ಕಲಾಸಂಘದವರಿಂದ `ದ್ರುಪದ ಗರ್ವಭಂಗ' ಎಂಬ ಪ್ರಸಂಗದ ಯಕ್ಷಗಾನ ಕೂಟ, ಸಂಜೆ ದೀಪಾರಾಧನೆ, ವಿಶೇಷ ಕಾತರ್ಿಕಪೂಜೆ ನೆರವೇರಿತು.