ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 15, 2017
ಜೀಣೋದ್ದಾರ ಸ್ಥಳ ವೀಕ್ಷಣೆ
ಬದಿಯಡ್ಕ : ಬಡಗು ಶಬರಿಮಲೆ ಎಂದೇ ಪ್ರಸಿದ್ಧಿಯನ್ನು ಹೊಂದಿದ ಉಬ್ರಂಗಳ ಶ್ರೀ ಮಹಾದೇವ ಪಾರ್ವತಿ ಶ್ರೀ ಶಾಸ್ತಾರ ದೇವಸ್ಥಾನದ ಜೀಣರ್ೋದ್ಧಾರದ ಪ್ರಯುಕ್ತ ವಿವಿಧ ಕಾಮಗಾರಿಗಳು ಆರಂಭವಾಗಿರುತ್ತದೆ. ಧೂಮಾವತೀ ಗುಳಿಗ ದೈವದ ಸಾನ್ನಿಧ್ಯ ಸ್ಥಳವನ್ನು ಕ್ಷೇತ್ರದ ತಂತ್ರಿವರ್ಯ ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ಶಿಲ್ಪಿ ಉಣ್ಣಿಕೃಷ್ಣನ್ ನಂಬೂದಿರಿ ಇತ್ತೀಚೆಗೆ ವೀಕ್ಷಿಸಿ ಕಾಮಗಾರಿಯ ಕುರಿತು ಸಲಹೆ ಸೂಚನೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ಜೀಣರ್ೋದ್ಧಾರ ಸಮಿತಿ ಪದಾಧಿಕಾರಿಗಳಾದ ಕಿರಣ್ ಕುಣಿಕುಳ್ಳಾಯ, ಜಯರಾಜ ಕುಣಿಕುಳ್ಳಾಯ, ಬಾಬು ಮಾಸ್ಟರ್ ಅಗಲ್ಪಾಡಿ, ಚಂದ್ರಶೇಖರ ಕುರುಪ್ಪ್, ರಾಜಶೇಖರ ಮಾಸ್ತರ್, ಅಚ್ಚುತ ಮಾಸ್ತರ್ ಅಗಲ್ಪಾಡಿ, ಗೋಪಾಲ ಉಬ್ರಂಗಳ, ಗಣರಾಜ ಭಟ್ ಹಾಗೂ ಮಹಿಳಾ ವಿಭಾಗ ಹಾಗೂ ಯುವ ವಿಭಾಗಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.