ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 31, 2017
ಆಧಾರ್ ಕಡ್ಡಾಯ ರಾಷ್ಟ್ರೀಯ ಭದ್ರತೆಗೆ ಅಪಾಯ, ಪ್ರಧಾನಿಯನ್ನು ಸಂಪಕರ್ಿಸುತ್ತೇನೆ: ಸುಬ್ರಹ್ಮಣಿಯನ್ ಸ್ವಾಮಿ
ನವದೆಹಲಿ: ಸಕರ್ಾರದ ಯೋಜನೆಗಳ ಫಲವನ್ನು ಪಡೆಯಲು ಆಧಾರ್ ಕಡ್ಡಾಯ ಮಾಡುವುದರ ಬಗ್ಗೆ ಚಚರ್ೆ ನಡೆಯುತ್ತಿದ್ದು, ಬಿಜೆಪಿ ರಾಜ್ಯಸಭಾ ಸಂಸದ ಸುಬ್ರಹ್ಮಣಿಯನ್ ಸ್ವಾಮಿ ಆಧಾರ್ ಕಡ್ಡಾಯಗೊಳಿಸುವುದು ರಾಷ್ಟ್ರೀಯ ಭದ್ರತೆಗೆ ಅಪಾಯ ಎಂದು ಅಭಿಪ್ರಾಯಪಟ್ಟಿದ್ದಾರೆ.
ಆಧಾರ್ ಕಡ್ಡಾಯಗೊಳಿಸುವುದರಿಂದ ರಾಷ್ಟ್ರೀಯ ಭದ್ರತೆಗೆ ಅಪಾಯವಿರುವುದರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡುತ್ತೇನೆ ಎಂದು ಸುಬ್ರಹ್ಮಣಿಯನ್ ಸ್ವಾಮಿ ತಿಳಿಸಿದ್ದಾರೆ. ಟ್ವಿಟರ್ ನಲ್ಲಿ ಆಧಾರ್ ಕಡ್ದಾಯದ ಬಗ್ಗೆ ಮಾತನಾಡಿರುವ ಸುಬ್ರಹ್ಮಣಿಯನ್ ಸ್ವಾಮಿ, ಆಧಾರ್ ಕಡ್ಡಾಯ ರಾಷ್ಟ್ರೀಯ ಭದ್ರತೆಗೆ ಹೇಗೆ ಮಾರಕ ಎಂಬುದರ ಬಗ್ಗೆ ಪ್ರಧಾನಿಗೆ ಸುದೀರ್ಘವಾದ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.
ಸಕರ್ಾರದ ಯೋಜನೆಗಳ ಫಲವನ್ನು ಪಡೆಯಬೇಕಾದರೆ ಆಧಾರ್ ಕಡ್ಡಾಯಗೊಳಿಸುವುದನ್ನು ಹಾಗೂ ಆಧಾರ್ ನಿಂದ ಗೌಪ್ಯತೆಯ ಉಲ್ಲಂಘನೆಯಾಗುತ್ತಿರುವುದನ್ನು ಪ್ರಶ್ನಿಸಿದ್ದ ಅಜರ್ಿ ವಿಚಾರಣೆಯನ್ನು ನಡೆಸಿದ್ದ ಸುಪ್ರೀಂ ಕೋಟರ್್ ನ ನ್ಯಾ.ದೀಪಕ್ ಮಿಶ್ರಾ, ನ್ಯಾ.ಎಎಂ ಖಾನ್ವಿಲ್ಕರ್ ಹಾಗೂ ಡಿವೈ ಚಂದ್ರಚೂಡ್ ಅವರಿದ್ದ ಪೀಠ ಆಧಾರ್ ಕುರಿತ ಅಜರ್ಿಗಳನ್ನು ಸಾಂವಿಧಾನಿಕ ಪೀಠಕ್ಕೆ ವಗರ್ಾವಣೆ ಮಾಡಿದೆ. ಸಾಂವಿಧಾನಿಕ ಪೀಠದಲ್ಲಿ ಆಧಾರ್ ಕಡ್ಡಾಯಕ್ಕೆ ಕೋಟರ್್ ಕಡಿವಾಣ ಹಾಕಲಿದೆ ಎಂದು ಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.