ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 21, 2017
ಸಾರ್ವಜನಿಕ ಸ್ಥಳದ ಪುಕ್ಕಟೆ ವೈಫೈ ಬಳಸದಂತೆ ಎಚ್ಚರಿಕೆ
ಬೆಂಗಳೂರು: ಕಂಪ್ಯೂಟರ್ ಸುರಕ್ಷತೆ ವಿಚಾರದಲ್ಲಿ ಪದೇ ಪದೇ ಎದುರಾಗುತ್ತಿರುವ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಭಾರತದ ಸೈಬರ್ ರಕ್ಷಣಾ ವಿಭಾಗವು, "ಸಾ ರ್ವಜನಿಕವಾಗಿ ಪುಕ್ಕಟೆ ದೊರೆಯುವ ವೈಫೈ ಬಳಸಬೇಡಿ" ಎಂದು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.
ಹ್ಯಾಕರ್ ಗಳು ವೈಫೈ ಪುಕ್ಕಟೆ ಸಿಗುವ ಪ್ರದೇಶಗಳಲ್ಲಿದ್ದು, ಪಾಸ್ ವಡರ್್ ಗಳನ್ನು ಕದಿಯಬಹುದು ಮತ್ತು ಕ್ರೆಡಿಟ್ ಕಾಡರ್್ ಮಾಹಿತಿಗಳಿಗೆ ಕನ್ನ ಹಾಕಬಹುದು. ಅದರಲ್ಲೂ ವಿಮಾನ ನಿಲ್ದಾಣ ಹಾಗೂ ರೈಲು ನಿಲ್ದಾಣಗಳಲ್ಲಿ ಸಾರ್ವಜನಿಕರ ಮಾಹಿತಿಗೆ ಕನ್ನ ಹಾಕುವ ಸಾಧ್ಯತೆಗಳು ಹೆಚ್ಚು ಎಂಬ ಎಚ್ಚರಿಕೆ ನೀಡಲಾಗಿದೆ.
ತಾಂತ್ರಿಕ ವಿಧಾನಗಳನ್ನು ಬಳಸುವ ಹ್ಯಾಕರ್ ಗಳು ಬಹಳ ಸಲೀಸಾಗಿ ಮಾಹಿತಿಗಳನ್ನು ಕದಿಯುತ್ತಾರೆ. ಆದ್ದರಿಂದ ವೈರ್ ಬಳಸಿದ ಅಂತಜರ್ಾಲ ಬಳಕೆ ಬಹಳ ಸುರಕ್ಷಿತ. ಏಕೆಂದರೆ ಅದರಿಂದ ಇಂಟರ್ ನೆಟ್ ಬಳಕೆಯ ದಟ್ಟಣೆಯನ್ನು ಗಮನಿಸಬಹುದು. ಯಾವುದೇ ಕಾರಣಕ್ಕೂ ಸಾರ್ವಜನಿಕರು ಪುಕ್ಕಟೆ ಸಿಗುವ ಸಾರ್ವಜನಿಕ ಸ್ಥಳದಲ್ಲಿನ ವೈಫೈ ಬಳಸಬಾರದು ಎಂಬ ಸಲಹೆ ನೀಡಲಾಗಿದೆ