ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 16, 2017
ಬಜಕೂಡ್ಲು ಅಮೃತಧಾರಾ ಗೋಶಾಲೆಯಲ್ಲಿ ಅ.20-ಅ.29
ಶ್ರೀಮದ್ವಾಲ್ಮೀಕಿ ರಾಮಾಯಣ ಪಾರಾಯಣ ನವಾಹ, ಗೋಮಾತಾ ಸಪಯರ್ಾ-ಗೋಪಾಷ್ಟಮೀ, ಶ್ರೀರಾಮ ಪಟ್ಟಾಭಿಷೇಕ ಮಹೋತ್ಸವ
ಪೆರ್ಲ : ಬಜಕೂಡ್ಲು ಅಮೃತಧಾರಾ ಗೋಶಾಲೆಯ ಧರ್ಮಮಂದಿರದಲ್ಲಿ ಅ.20 ರಿಂದ ಅ.29ರ ತನಕ ಶ್ರೀಮದ್ವಾಲ್ಮೀಕಿ ರಾಮಾಯಣ ಪಾರಾಯಣ ನವಾಹ ಹಾಗೂ ಗೋಮಾತಾ ಸಪಯರ್ಾ-ಗೋಪಾಷ್ಟಮೀ ಮಹೋತ್ಸವವು ನಡೆಯಲಿರುವುದು. ಭಗವಾನ್ ಶ್ರೀರಾಮಚಂದ್ರನ ಪಾವನ ಚರಿತ್ರೆಯ ಶ್ರವಣ, ಶ್ರೀರಾಮನಾಮ ಸ್ಮರಣೆ, ಭಗವಾನ್ನಾಮ ಸಂಕೀರ್ತನೆ, ಗೋಮಾತೆಗೆ ದಿವ್ಯ ನೀರಾಜನ, ಭಗವಾನ್ ಗೋಪಾಲಕೃಷ್ಣನ ಅರ್ಚನೆ, ದೇಶೀ ಹಸುವಿನ ಗೋಮಯನಿಮರ್ಿತ ಗೋವರ್ಧನ ಪೂಜನ ಮುಂತಾದ ವೈಶಿಷ್ಟ್ಯಗಳಿಂದ ಕೂಡಿದ ಮಂಗಲ ಮಹೋತ್ಸವವು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಅ.20ರಂದು ಬೆಳಗ್ಗೆ 7 ಘಂಟೆಗೆ ಗುರುವಂದನೆ, ಸಾಮೂಹಿಕ ಪ್ರಾರ್ಥನೆ, ಕಲಶ ಪ್ರತಿಷ್ಠೆ, ಶ್ರೀರಾಮಕಲ್ಪೋಕ್ತ ಪೂಜೆ, ಶ್ರೀಮದ್ವಾಲ್ಮೀಕಿರಾಮಾಯಣ ಪಾರಾಯಣ ಪ್ರಾರಂಭ, ಶ್ರೀ ಮಹಾಗಣಪತಿ ಹವನ, ಮಧ್ಯಾಹ್ನ ಪ್ರಸಾದ ಭೋಜನ, 2.30ರಿಂದ ಶ್ರೀಮದ್ವಾಲ್ಮೀಕೀ ರಾಮಾಯಣ ಪಾರಾಯಣ, ಸಂಜೆ 5ರಿಂದ ಶ್ರೀರಾಮದೇವರಿಗೆ ಪ್ರದೋಷಪೂಜೆ, ಗೋಪಾಲಕೃಷ್ಣ ಪೂಜೆ, ವಿಷ್ಣುಸಹಸ್ರನಾಮ ಪಾರಾಯಣ, ಗೋಪೂಜೆ, ತುಲಸೀಪೂಜೆ, ದೀಪೋತ್ಸವ, ಮಂಗಳಾರತಿ.
ಅ.21ರಿಂದ 27ರ ತನಕ ಪ್ರತೀದಿನ ಬೆಳಗ್ಗೆ ಕಲಶಪೂಜೆ, ಶ್ರೀರಾಮ ಕಲ್ಪೋಕ್ತ ಪೂಜೆ, ಶ್ರೀಮದ್ವಾಲ್ಮೀಕೀ ರಾಮಾಯಣ ಪಾರಾಯಣ, ಮಧ್ಯಾಹ್ನ ಪ್ರಸಾದ ಭೋಜನ, ಅಪರಾಹ್ನ 2.30ರಿಂದ ರಾಮಾಯಣ ಪಾರಾಯಣ, ಸಂಜೆ 5ರಿಂದ ಶ್ರೀರಾಮದೇವರಿಗೆ ಪ್ರದೋಷಪೂಜೆ, ಗೋಪಾಲಕೃಷ್ಣ ಪೂಜೆ, ವಿಷ್ಣುಸಹಸ್ರನಾಮ ಪಾರಾಯಣ, ಗೋಪೂಜೆ, ತುಲಸೀಪೂಜೆ ನಡೆಯಲಿದೆ.
ಅ.28ರಂದು ಗೋಪಾಷ್ಟಮೀ ಮಹೋತ್ಸವ. ಬೆಳಗ್ಗೆ 7 ಘಂಟೆಗೆ ಕಲಶಪೂಜೆ, ಶ್ರೀರಾಮಕಲ್ಪೋಕ್ತ ಪೂಜೆ, ಶ್ರೀಮದ್ವಾಲ್ಮೀಕೀ ಪಾರಾಯಣ ಪಾರಾಯಣ ಮಂಗಲ, ಗೋವರ್ಧನ ಯಜ್ಞ ಪೂಣರ್ಾಹುತಿ. ಅಪರಾಹ್ನ ಕುಂಕುಮಾರ್ಚನೆ, ಭಜನೆ, ಸಂಜೆ 4ಕ್ಕೆ ಗೋಮಯ ಗೋವರ್ಧನ ಪರ್ವತದಲ್ಲಿ ಗೋವರ್ಧನ ಗೋಪಾಲಕೃಷ್ಣ ಪೂಜೆ, 5ಕ್ಕೆ ಶ್ರೀರಾಮದೇವರಿಗೆ ಪ್ರದೋಷ ಪೂಜೆ, ವಿಷ್ಣುಸಹಸ್ರನಾಮ ಪಾರಾಯಣ, ಭಜನೆ, ಗೋಪೂಜೆ, ತುಲಸೀಪೂಜೆ, ದೀಪೋತ್ಸವ, ಮಹಾಮಂಗಳಾರತಿ. ಭೋಜನ. ಅ.29ರಂದು ಶ್ರೀರಾಮ ಪಟ್ಟಾಭಿಷೇಕ ಮಹೋತ್ಸವದ ಅಂಗವಾಗಿ ಬೆಳಗ್ಗೆ 7ಕ್ಕೆ ಕಲಶ ಪೂಜೆ, ಶ್ರೀರಾಮ ಕಲ್ಪೋಕ್ತ ಪೂಜೆ, ಶ್ರೀರಾಮಪಟ್ಟಾಭಿಷೇಕ ಮಹೋತ್ಸವ ಪ್ರಾರಂಭ, 8ರಿಂದ 9.30 ರುದ್ರಪಾರಾಯಣ, ಕುಂಕುಮಾರ್ಚನೆ, 9.20ಕ್ಕೆ ಪಟ್ಟಾಭಿಷೇಕ ಯಜ್ಞ ಪೂಣರ್ಾಹುತಿ. 9.30ರಿಂದ 11 ಧರ್ಮಸಭೆ `ಶ್ರೀಮದ್ವಾಲ್ಮೀಕಿ ರಾಮಾಯಣ' ಉಪನ್ಯಾಸ, ಮುಳ್ಳೇರಿಯ ಹವ್ಯಕ ಮಂಡಲದ ರಾಮಾಯಣ ಪಾರಾಯಣಕರ್ತರಿಗೆ ಮಂಡಲದ ವತಿಯಿಂದ ಶ್ರೀರಾಮಾನುಗ್ರಹ ಪ್ರಧಾನ. 11ರಿಂದ ಶ್ರೀರಾಮಚಂದ್ರ ದೇವರ ಪಟ್ಟಾಭಿಷೇಕ ಮಹೋತ್ಸವ, ಶ್ರೀ ದೇವರಿಗೆ ಭಕ್ತ ಜನರಿಂದ ಕಪ್ಪಕಾಣಿಕೆ ಸಮರ್ಪಣೆ, ಮಹಾಮಂಗಳಾರತಿ, ರಾಜೋಪಚಾರ (ಅಷ್ಟಾವಧಾನ) ಸೇವೆ, ವೈದಿಕ ಮಂತ್ರಾಕ್ಷತೆ, ಮಧ್ಯಾಹ್ನ 12.30 ಪ್ರಸಾದ ವಿತರಣೆ, ಅನ್ನ ಸಂತರ್ಪಣೆಯೊಂದಿಗೆ ಸಮಾರಂಭ ಸಮಾಪ್ತಿಗೊಳ್ಳುವುದು.