HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಪ್ರಶ್ನೆಗಳು ಉದ್ಭವಿಸಿದಾಗ ಸಾಂಸ್ಕೃತಿಕ ಲೋಕ ಕ್ರಿಯಾಶೀಲವಾಗುತ್ತದೆ : ಹೆಚ್.ಜಿ.ದತ್ತಾತ್ರೇಯ ಕಾಸರಗೋಡು: ಸಾಹಿತ್ಯವಾಗಲೀ, ಸಾಂಸ್ಕೃತಿಕ ಲೋಕವಾಗಲೀ ಕ್ರಿಯಾಶೀಲತೆ ಪಡೆಯಬೇಕಾದರೆ ಪ್ರಶ್ನೆಗಳು ಉದ್ಭವಿಸಬೇಕು. ಇದರಿಂದ ಸಾಹಿತ್ಯದ ಜೊತೆಗೆ ಸಂಸ್ಕೃತಿ ಬೆಳವಣಿಗೆ ಕಾಣಲು ಸಾಧ್ಯವಾಗುತ್ತದೆ. ಸಾಹಿತ್ಯ ಸೂಕ್ಷ್ಮತೆಯನ್ನು ಬೆಳೆಸುತ್ತಾ ಪರೋಕ್ಷವಾಗಿ ಸಮಾಜವನ್ನು ಉದ್ಧರಿಸುತ್ತದೆ ಎಂದು `ದತ್ತಣ್ಣ' ಎಂದೇ ಖ್ಯಾತರಾಗಿರುವ ರಾಷ್ಟ್ರ ಪ್ರಶಸ್ತಿ ವಿಜೇತ ಚಲನಚಿತ್ರ ನಟ ಹೆಚ್.ಜಿ.ದತ್ತಾತ್ರೇಯ ಅವರು ಹೇಳಿದರು. ಸಾಮಾಜಿಕ - ಸಾಂಸ್ಕೃತಿಕ ಸಂಸ್ಥೆಯಾದ ರಂಗಚಿನ್ನಾರಿ ಕಾಸರಗೋಡು ಇದರ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಕಾರದೊಂದಿಗೆ ಕರಂಡೆಕ್ಕಾಡಿನ ಪದ್ಮಗಿರಿ ಕಲಾಕುಟೀರದಲ್ಲಿ ಶನಿವಾರ ಆಯೋಜಿಸಿರುವ ರಾಷ್ಟ್ರ ಪ್ರಶಸ್ತಿ ವಿಜೇತ ಚಲನಚಿತ್ರ ನಿದರ್ೇಶಕ ಪಿ.ಶೇಷಾದ್ರಿ ಅವರ `ಕನ್ನಡ ಚಲನ ಚಿತ್ರೋತ್ಸವ' ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು. ಗಡಿನಾಡು, ಹೊರನಾಡುಗಳಲ್ಲಿ ಕನ್ನಡ ಚಟುವಟಿಕೆಗಳನ್ನು ಮಾಡುವುದು, ಸಂಸ್ಕೃತಿ ಪರಿಚಯಿಸುವುದು ಕಷ್ಟದ ಕೆಲಸ. ಅಂತಹ ಸಂದರ್ಭದಲ್ಲೇ ಗಡಿನಾಡು ಪ್ರದೇಶವಾದ ಕಾಸರಗೋಡಿನಲ್ಲಿ ಕನ್ನಡ ಚಟುವಟಿಕೆಯ ನಿರಂತರತೆಯನ್ನು ಕಾಪಾಡಿಕೊಂಡು ಬಂದಿರುವ ಕಾಸರಗೋಡು ಚಿನ್ನಾ ಮತ್ತು ಬಳಗದ ರಂಗಚಿನ್ನಾರಿ ಸಂಸ್ಥೆ ಮಾದರಿಯಾಗಿ ಬೆಳೆಯುತ್ತಿದೆ. ಕಾಸರಗೋಡು ಮಲಯಾಳ ಪ್ರದೇಶ ಎಂದುಕೊಂಡಿಲ್ಲ. ಇದು ಕನರ್ಾಟಕದ ಭಾಗವೇ ಆಗಿದೆ. ಆಡಳಿತಾತ್ಮಕವಾಗಿ ಕೇರಳವಾಗಿದ್ದರೂ, ಸಾಂಸ್ಕೃತಿಕವಾಗಿ ಕನ್ನಡದ ನೆಲ ಎಂದ ಅವರು ಈ ಪ್ರದೇಶದಲ್ಲಿ ನಿರಂತರವಾಗಿ ಕನ್ನಡ ಚಟುವಟಿಕೆ ಮಾಡುತ್ತಿರುವುದು ಸಾಹದ ಕೆಲಸ. ಕನ್ನಡ ಭಾಷೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಡೆಯುತ್ತಿರುವ ಹೋರಾಟದ ಫಲವಾಗಿಯೇ ಇಂದು ಕಾಸರಗೋಡಿನಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಜೀವಂತವಾಗಿದೆ ಎಂದರು. ಶುಭಹಾರೈಸಿ ಮಾತನಾಡಿದ ಚಿತ್ರ ನಟ, ನಿಮರ್ಾಪಕ ಜಗದೀಶ್ ಮಲ್ನಾಡ್ ನಮ್ಮ ಕುಟುಂಬದ ಬಹುತೇಕ ಮಂದಿ ಅಧ್ಯಾಪಕರು. ಇಲ್ಲಿ ನೆರೆದಿರುವ ಅಧ್ಯಾಪಕ ವಿದ್ಯಾಥರ್ಿಗಳು ಮುಂದಿನ ದಿನಗಳಲ್ಲಿ ಉತ್ತಮ ಅಧ್ಯಾಪಕರಾಗಿ ಗುರುತಿಸಿಕೊಂಡು ಯುವ ಜನಾಂಗವನ್ನು ಸತ್ಪ್ರಜೆಯನ್ನಾಗಿ ಬೆಳೆಸುವ ಜತೆಗೆ ಅವರಲ್ಲಿ ಒಳ್ಳೆಯ ಮನಸ್ಸನ್ನು ಬೆಳೆಸಬೇಕೆಂದರು. ರಾಷ್ಟ್ರಪತಿಯಾಗಿದ್ದ ಅಬ್ದುಲ್ ಕಲಾಂ ಅವರಂತೆ ಈ ಯುವ ಜನಾಂಗವು ಈ ಹುದ್ದೆಯತ್ತ ತಲುಪಲಿ ಎಂದು ಹಾರೈಸಿದರು. ಡಯಟ್ ಮಾಯಿಪ್ಪಾಡಿಯ ಅಧ್ಯಾಪಕ ಸತ್ಯಪ್ರಕಾಶ್ ಅವರು ಮಾತನಾಡಿ ಡಯಟ್ ಮಾಯಿಪ್ಪಾಡಿಯಲ್ಲಿ ಕನ್ನಡ ಚಿತ್ರೋತ್ಸವವನ್ನು ಆಯೋಜಿಸುವ ಬಗ್ಗೆ ಚಿಂತಿಸಲಾಗಿತ್ತು. ಈ ಚಿತ್ರೋತ್ಸವ ನಮ್ಮ ವಿದ್ಯಾಥರ್ಿಗಳಿಗೆ ಇಲ್ಲಿ ವೀಕ್ಷಿಸಲು ಅವಕಾಶ ಲಭಿಸಿದ್ದು ಸುಯೋಗ ಎಂದ ಅವರು ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ ಎಂದು ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ರಾಷ್ಟ್ರ ಪ್ರಶಸ್ತಿ ವಿಜೇತ ಚಲನಚಿತ್ರ ನಿದರ್ೇಶಕ ಪಿ.ಶೇಷಾದ್ರಿ ಅವರು ಮಾತನಾಡಿ ಕರಾವಳಿ ಪ್ರದೇಶದ ಖ್ಯಾತನಾಮರಾದ ಮಂಜೇಶ್ವರ ಗೋವಿಂದ ಪೈ, ಡಾ.ಕಯ್ಯಾರ ಕಿಞ್ಞಣ್ಣ ರೈ ಅವರ ಹೆಸರು ಸದಾ ನೆನಪಿಗೆ ಬರುತ್ತದೆ. ಇದರ ಜೊತೆಯಲ್ಲಿ ನೆನಪಿಗೆ ಬರುವ ಇನ್ನೊಂದು ಹೆಸರು ಕಾಸರಗೋಡು ಚಿನ್ನಾ. ಸಂಘಟನೆಯ ಪ್ರತಿರೂಪವಾಗಿ ಈ ವೇದಿಕೆ ಇಲ್ಲಿ ಸೃಷ್ಟಿಯಾಗಿದೆ. ಸಾಹಿತಿಗೆ ಓದುಗ ಬೇಕು, ಸಿನಿಮಾಕ್ಕೆ ಪ್ರೇಕ್ಷಕ ಬೇಕು, ಸಂಗೀತಕ್ಕೆ ಕೇಳುಗ ಬೇಕು. ಹೀಗಿದ್ದಲ್ಲಿ ಮಾತ್ರವೇ ಎಲ್ಲಾ ಕ್ಷೇತ್ರಗಳ ಬೆಳವಣಿಗೆ ಕಾಣಲು ಸಾಧ್ಯ. ಇಂತಹ ಸದಬಿರುಚಿಯನ್ನು ಬೆಳೆಸುವ ಕೆಲಸವಾಗಬೇಕು. ಈ ದೃಷ್ಟಿಯಲ್ಲಿ ರಂಗ ಚಿನ್ನಾರಿ ಸಾರ್ಥಕ ಸಾಧನೆ ಮಾಡುತ್ತಿದೆ ಎಂದ ಅವರು ಒಳ್ಳೆಯ ಪ್ರೇಕ್ಷಕನಿದ್ದಲ್ಲಿ ಉತ್ತಮ ಚಿತ್ರಗಳ ಹುಟ್ಟಿಗೆ ಕಾರಣವಾಗುತ್ತದೆ. ಈ ನಿಟ್ಟಿನಲ್ಲಿ ಹೆಚ್ಚೆಚ್ಚು ಚಲನ ಚಿತ್ರೋತ್ಸವಗಳು ನಡೆಯಲಿದೆ. ಚಚರ್ೆಗಳು, ಸಂವಾದಗಳು ನಡೆದು ಪ್ರೇಕ್ಷಕ ಮತ್ತು ನಿದರ್ೇಶಕರು ಬೆಳೆಯುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ರಂಗ ಸಂಸ್ಕೃತಿ ಶಿಬಿರ : ರಂಗಚಿನ್ನಾರಿ ಸಂಸ್ಥೆಯ ಪ್ರಧಾನ ಸಂಚಾಲಕ ಕಾಸರಗೋಡು ಚಿನ್ನಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಮುಂದಿನ ದಿನಗಳಲ್ಲಿ ಡಯಟ್ ಮಾಯಿಪ್ಪಾಡಿಯಲ್ಲಿ ಚಿತ್ರೋತ್ಸವವನ್ನು ನಡೆಸುವ ಜೊತೆಗೆ ಎರಡು ದಿನಗಳ ರಂಗ ಸಂಸ್ಕೃತಿ ಶಿಬಿರವನ್ನು ಆಯೋಜಿಸಲಾಗುವುದು. ಶಿಬಿರದಲ್ಲಿ ರಂಗಭೂಮಿಗೆ ಸಂಬಂಧಿಸಿದ ಪ್ರಸಾದನ, ಅಭಿನಯ, ಮುಖವಾಡಗಳ ತಯಾರಿ, ನಿದರ್ೇಶನ, ಸಂಗೀತ ಹೀಗೆ ವಿವಿಧ ಮಜಲುಗಳನ್ನು ಕಲಿಸಿಕೊಡಲಾಗುವುದು. ನಾಡಗೀತೆ, ಭಾವಗೀತೆ ಕಾಯರ್ಾಗಾರವನ್ನೂ ಆಯೋಜಿಸಲಾಗುವುದು ಎಂದು ಅವರು ಭರವಸೆ ನೀಡಿದರು. ರಂಗಚಿನ್ನಾರಿ ಸಂಸ್ಥೆ ಈ ವರೆಗೆ ಆಯೋಜಿಸಿದ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದ ಅವರು ಪ್ರತಿ ತಿಂಗಳು ಸದಭಿರುಚಿಯ ಮತ್ತು ಕಲಾತ್ಮಕ ಚಿತ್ರಗಳನ್ನು ಪ್ರದಶರ್ಿಸಲಾಗುವುದು ಮತ್ತು ಈ ಚಿತ್ರಗಳ ನಿದರ್ೇಶಕರ ಜೊತೆ ಮಾತುಕತೆ, ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು. ರಾಷ್ಟ್ರ ಪ್ರಶಸ್ತಿ ವಿಜೇತ ಚಲನಚಿತ್ರ ನಿದರ್ೇಶಕ ಪಿ.ಶೇಷಾದ್ರಿ ಅವರ `ಕನ್ನಡ ಚಲನ ಚಿತ್ರೋತ್ಸವ' ಕಾರ್ಯಕ್ರಮದಲ್ಲಿ ಡಿಸೆಂಬರ್-1 ಮತ್ತು ಬೆಟ್ಟದ ಜೀವ ಎಂಬೆರಡು ಚಲನಚಿತ್ರಗಳು ಪ್ರದಶರ್ಿಸಲಾಯಿತು. ಆ ಬಳಿಕ ವಿದ್ಯಾಥರ್ಿಗಳೊಂದಿಗೆ ಮತ್ತು ಸಾರ್ವಜನಿಕರೊಂದಿಗೆ ಸಂವಾದ ನಡೆಯಿತು. ಕಾರ್ಯಕ್ರಮದಲ್ಲಿ ರಂಗಚಿನ್ನಾರಿಯ ನಿದರ್ೇಶಕರಾದ ಕೋಳಾರು ಸತೀಶ್ಚಂದ್ರ ಭಂಡಾರಿ, ಸತ್ಯನಾರಾಯಣ ಕೆ, ಮನೋಹರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಕುತೂಹಲ ಮೂಡಿಸಿದ ಸಂವಾದ=ಯುವ ಭರವಸೆ ಚಲನಚಿತ್ರ ವೀಕ್ಷಿಸಿದ ಬಳಿಕ ಚಿತ್ರ ನಿದರ್ೇಶಕ, ನಟರ ತಂಡ ಚಿತ್ರ ವೀಕ್ಷಿಸಿದ ಅಧ್ಯಾಪಕ ತರಬೇತಿ(ಡಯಟ್) ವಿದ್ಯಾಥರ್ಿಗಳೊಂದಿಗೆ ಸಂವಾದ ನಡೆಸಿ ಕುತೂಹಲದ ಪ್ರಶ್ನೆಗಳಿಗೆ ಉತ್ತರಿಸಿದರು. ಈವರೆಗೆ ಕಮಶರ್ಿಯಲ್ ಚಿತ್ರಗಳನ್ನಷ್ಟೆ ಬಹುತೇಕ ಕಂಡಿದ್ದ ವಿದ್ಯಾಥರ್ಿಗಳಿಗೆ ಕಲಾತ್ಮಕ ಚಿತ್ರದ ಅಂತಃಕರಣ ಅರಿವಾಗಿ ನೂರಾರು ಪ್ರಶ್ನೆಗಳು, ಹೊಸತನ್ನು ನೋಡಿದ ತುಡಿತ ವ್ಯಕ್ತವಾಯಿತು. ಈ ಸಂದರ್ಭ ಮಾತನಾಡಿದ ನಿದರ್ೇಶಕ ಪಿ.ಶೇಷಾದ್ರಿಯವರು ಕಮಶರ್ಿಯಲ್ ಚಿತ್ರಕ್ಕೂ ವಿಭಿನ್ನವಾಗಿರುವ ಇಂತಹ ಚಿತ್ರಗಳು ಇಂದಿನ ಗ್ರಾಮೀಣ ಜನರ ಮನಸ್ಸು, ಆಧುನಿಕತೆಯ ಗೊಂದಲಗಳ ಜನಸಾಮಾನ್ಯರ ಭಾವವನ್ನು ತೆರೆದಿಡುವ ಜೊತೆಗೆ ಸರಕಾರ, ಸಚಿವರುಗಳ ದಕ್ಷತೆ, ಅವರ ಜವಾಬ್ದಾರಿ, ತಪ್ಪುವ ದಾರಿಗಳ ಬಗ್ಗೆ ಬೆಳಕು ಚೆಲ್ಲಿ ಇಂದಿನ ವ್ಯವಸ್ಥೆಯ ಬಗ್ಗೆ ಬೆಳಕು ಚೆಲ್ಲುತ್ತದೆ. ಯುವ ಜನಾಂಗ ಈ ಬಗೆಯ ಸ್ಪಷ್ಟತೆಯೊಂದಿಗೆ ರಾಷ್ಟ್ರ ನಿಮರ್ಾಣದಂತಹ ಕಾರ್ಯಕ್ಕೆ ಹೊಸ ನಾಂದಿಹಾಡಬೇಕೆಂದು ತಿಳಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries