ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 07, 2017
ಮಕ್ಕಳಿಂದ ಮಾವಿನ ಗಿಡಗಳ ನಾಟಿ
ಮುಳ್ಳೇರಿಯ: ಇಲ್ಲಿನ ಎಯುಪಿ ಶಾಲೆಯ ಸೀಡ್ ಕ್ಲಬ್ಬಿನ ಮಕ್ಕಳು ಅಳಿದು ಹೋಗುತ್ತಿರುವ ಗ್ರಾಮೀಣ ಪ್ರದೇಶದ ನೈಜತೆಯನ್ನು ಉಳಿಸಿಕೊಳ್ಳುವ ಸಲುವಾಗಿ ಊರ ಮಾವಿನ ಗಿಡಗಳನ್ನು ನಾಟಿ ಮಾಡಿ ಗಮನ ಸೆಳೆದರು.
ಮುಳ್ಳೇರಿಯ ಅಂಚೆ ಕಚೇರಿಯ ಅಧೀನತೆಯಲ್ಲಿರುವ ನಿವೇಶನದಲ್ಲಿ ಮಾವಿನ ತೋಪು ನಿಮರ್ಾಣ ಮಾಡಲಾಗುತ್ತಿದೆ. ವಿವಿಧ ತರದ ಊರ ಮಾವಿನ ಗಿಡಗಳನ್ನು ಇಲ್ಲಿ ನಾಟಿ ಮಾಡಲಾಗಿದೆ. ಮುಳ್ಳೇರಿಯ ಸಬ್ ಪೋಸ್ಟ್ ಮಾಸ್ಟರ್ ಟಿ.ಕೃಷ್ಣನ್ ಸೀಡ್ ರಿಪೋರ್ಟರ್ ಅಂಜಲಿಬಾಬು ಅವರಿಗೆ ಗಿಡ ನೀಡುವ ಮೂಲಕ ಉದ್ಘಾಟಿಸಿದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಕೇಶವ ಮಣಿಯಾಣಿ, ಸೀಡ್ ಸಂಚಾಲಕಿ ಸಾವಿತ್ರಿ ಟೀಚರ್, ಯು.ಮನೋಹರ, ವೈಷ್ಣವ್, ಅಭಿನಂದನ್, ವೈಶಾಖ್, ಶ್ರೀಕಾಂತ್, ಅಖಿಲಾ, ಪ್ರಜ್ಞ, ಪ್ರಜಿತಾ, ಸುನಿತಾ, ಸೌರವ್, ಧನುಷ್, ರಿಜೇಶ್, ಧನುಶ್ ಕುಮಾರ್, ಅರ್ಚನಾ, ಸುಮಿತಾ, ಉಣ್ಣಿಕೃಷ್ಣನ್, ಸುಜೇಶ್ ಕುಮಾರ್ ನೇತೃತ್ವ ನೀಡಿದರು.