HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಸಾಹಿತ್ಯ ವರ್ತಮಾನದ ವಿದ್ಯಮಾನಗಳನ್ನು ಚಚರ್ಿಸುತ್ತವೆ=ವಿನೋದ್ ಪೆರುಂಬಳ ಮುಳ್ಳೇರಿಯ: ಅನುಭವಗಳು ವ್ಯಕ್ತಿಯನ್ನು ಬರಹಗಾರನಾಗಿಸಲು ಪ್ರೇರೇಪಿಸುತ್ತದೆ. ಪ್ರತಿಯೊಬ್ಬರೂ ಅನುಭವಗಳನ್ನು ಆಸ್ವಾದಿಸಲು ಶಕ್ತನಾಗಬೇಕು. ಇದು ಸಾಹಿತ್ಯ, ಚಿತ್ರಕಲೆಗಳಂತಹ ಕ್ರಿಯಾತ್ಮಕತೆಗೆ ಪ್ರೇರಣೆ ನೀಡುತ್ತದೆ ಎಮದು ಹಿರಿಯ ಮಲೆಯಾಳಂ ಸಾಹಿತಿ ವಿನೋದ್ ಪೆರುಂಬಳ ಅಭಿಪ್ರಾಯ ವ್ಯಕ್ತಪಡಿಸಿದರು. ಬೆಳ್ಳೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ವಿದ್ಯಾಥರ್ಿಗಳಿಗಾಗಿ ಸೋಮವಾರ ಆಯೋಜಿಸಲಾದ ಸಾಹಿತ್ಯ ಕಮ್ಮಟ ಉದ್ಘಾಟಿಸಿ ಅವರು ಮಾತನಾಡಿದರು. ಸಾಹಿತ್ಯ ಭಾಷೆಯನ್ನು ಸುಂದರಗೊಳಿಸುವ ಜೊತೆಗೆ ಕೃತಿಗಳು ವರ್ತಮಾನದ ವಿದ್ಯಮಾನಗಳನ್ನು ಚಚರ್ಿಸುತ್ತವೆ. ಇದು ನಾಗರಿಕ ಪ್ರಪಂಚದ ಸುಗಮ ವ್ಯವಸ್ಥೆಗೆ ಮಾರ್ಗದಶರ್ಿಯಾಗಿ ಬೆಳೆಸುತ್ತದೆ ಎಂದು ಅವರು ತಿಳಿಸಿದರು. ವಿದ್ಯಾಥರ್ಿಗಳು ಕಲಿಕೆಯ ಹಂತದಲ್ಲೇ ಪುಸ್ತಕಗಳ ಓದು ಮತ್ತು ಮನಸ್ಸಿಗೆ ಬಂದ ಭಾವಗಳನ್ನು ಅಕ್ಷರ ರೂಪಕ್ಕಿಳಿಸುವ ಯತ್ನ ಮಾಡಿದಾಗ ಮುಂದಿನ ಬರವಣಿಗೆಯ ಹಂತಗಳಿಗೆ ಪ್ರೇರಣೆಯಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮುಖ್ಯೋಪಾಧ್ಯಾಯಿನಿ ವಾರಿಜಾ ನೇರೋಳು ಮಾತನಾಡಿ, ವ್ಯಕ್ತಿತ್ವದ ರೂಪು ನೀಡುವಿಕೆಯಲ್ಲಿ ಸಾಹಿತ್ಯದ ಪಾತ್ರ ಮಹತ್ತರವಾಗಿದ್ದು, ಸಾಹಿತ್ಯದಿಂದ ಬದುಕು ಪೂರ್ಣತ್ವ ಪಡೆಯುತ್ತದೆ ಎಂದು ತಿಳಿಸಿದರು. ಶಿಕ್ಷಕರಾದ ಮೋಹನನ್ ಒದೆಯೋತ್, ಮೇರಿ ವಿರೋನಿ, ನೀತು ಟೀಚರ್, ಕುಂಞಿಂಬು ಉಪಸ್ಥಿತರಿದ್ದು ಮಾತನಾಡಿದರು. ಶಿಕ್ಷಕ ಪದ್ಮನಾಭನ್ ಸ್ವಾಗತಿಸಿ, ವಂದಿಸಿದರು. ಬಳಿಕ ವಿನೋದ್ ಪೆರುಂಬಳ ವಿದ್ಯಾಥರ್ಿಗಳಿಗೆ ಸಾಹಿತ್ಯ ಕ್ಷೇತ್ರದ ವಿವಿಧ ವಿಭಾಗಗಳಲ್ಲಿ ವಿಸ್ಕೃತ ಮಾಹಿತಿ ನೀಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries