ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 31, 2017
ನೌಕಾದಳದ ನೂತನ ವೈಸ್ ಅಡ್ಮಿರಲ್ ಆಗಿ ಅಜಿತ್ ಕುಮಾರ್ ಅಧಿಕಾರ ಸ್ವೀಕಾರ!
ಈ ಹಿಂದಿನ ವೈಸ್ ಅಡ್ಮಿರಲ್ ಕರಂಬೀರ್ ಸಿಂಗ್ ಪೂರ್ವ ನೌಕಾ ದಳ ಪಡೆಗೆ ಮುಖ್ಯಸ್ಥರಾದ ಹಿನ್ನಲೆ
ಸಂಗ್ರಹ ಚಿತ್ರ
ನವದೆಹಲಿ: ನೌಕಾದಳದ ನೂತನ ವೈಸ್ ಅಡ್ಮಿರಲ್ ಆಗಿ ಅಜಿತ್ ಕುಮಾರ್ ಅವರು ಮಂಗಳವಾರ ಅಧಿಕಾರ ಸ್ವೀಕರಿಸಿದ್ದಾರೆ.
ಈ ಹಿಂದಿನ ವೈಸ್ ಅಡ್ಮಿರಲ್ ಆಗಿದ್ದ ಕರಂಬೀರ್ ಸಿಂಗ್ ಅವರು ಪೂರ್ವ ನೌಕಾ ದಳ ಪಡೆಗೆ ಮುಖ್ಯಸ್ಥರಾಗಿ ನೇಮಕರಾದ ಹಿನ್ನಲೆಯಲ್ಲಿ ಈ ಸ್ಥಾನ ತೆರವಾಗಿತ್ತು. ಇದೀಗ ಆ ಸ್ಥಾನಕ್ಕೆ ಅಜಿತ್ ಕುಮಾರ್ ಕುಮಾರ್ ಅವರು ನೇಮಕವಾಗಿದ್ದು, ಇಂದು ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಲ್ಲಿ ಪಳಗಿರುವ ಅಜಿತ್ ಕುಮಾರ್ ಅವರು, ಯುದ್ಧ ನೌಕೆಗಳಲ್ಲಿ ಪ್ರಮುಖ ಹೆದ್ದೆಗಳನ್ನು ನಿಭಾಯಿಸಿದ್ದಾರೆ. ಆರಕ್ಕೂ ಹೆಚ್ಚು ನೌಕೆಗಳಲ್ಲಿ ಕಮಾಂಡಿಂಗ್ ಆಫೀಸರ್ ಸೇವೆ ಸಲ್ಲಿಸಿರುವ ಅಜಿತ್ ಕುಮಾರ್ ಅವರು, ಮಿಸೈಲ್ ತಂತ್ರಜ್ಞಾನದ ಕುಲಿಶ್, ತಲ್ವಾರ್, ಕ್ಷಿಪಣಿ ನಿರೋಧ ನೌಕೆಗಳಾದ ಐಎನ್ ಎಸ್ ಮುಂಬೈ ಮತ್ತು ಐಎನ್ ಎಸ್ ಮೈಸೂರುನಲ್ಲಿಯೂ ಕಮಾಂಡಿಂಗ್ ಆಫೀಸರ್ ಆಗಿದ್ದರು. 1981ರಲ್ಲಿ ನೌಕಾಪಡೆಗೆ ಸೇರಿದ ಅಜಿತ್ ಕುಮಾರ್ ಕ್ಷಿಪಣಿಗಳು ಮತ್ತು ಬಂದೂಕುಗಳ ತಜ್ಞರಾಗಿ ಕಾರ್ಯ ನಿರ್ವಹಿಸಿದ್ದರು.