HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಪ್ರಣತಿಯ ಬೆಳಕಿನಲ್ಲಿ ಬೆಳಗಿದ ಪರಂಪರೆ, ವಿಶೇಷೋಪನ್ಯಾಸದ ಜತೆಗೆ ಸಾಂಸ್ಕೃತಿಕ ಸಂಜೆ ಬದಿಯಡ್ಕದಲ್ಲಿ ರಂಜಿಸಿದ ಸಾರ್ವಜನಿಕ ತುಳುನಾಡ ಬಲಿಯೇಂದ್ರ ಹಬ್ಬ ಬದಿಯಡ್ಕ: ಪರಂಪರಾಗತ ರೀತಿಯಲ್ಲಿ ಬಲಿಯೇಂದ್ರ ಸ್ಥಾಪನೆ, ಬಲಿಯೇಂದ್ರ ಕರೆಯುವ ತೌಳವ ಪದ್ಧತಿಯೊಂದಿಗೆ ಬಲಿಯೇಂದ್ರಾರಾಧನೆ, ಹಣತೆಯ ಬೆಳಕಿನಲ್ಲಿ ಹಬ್ಬದ ಮಹತ್ವದ ಬಗ್ಗೆ ವಿಶೇಷೋಪನ್ಯಾಸ, ನುರಿತ ಕಲಾವಿದರಿಂದ ತುಳು ಪಾಡ್ದನ, ವಿದ್ಯಾಥರ್ಿಗಳಿಂದ ಸಾಂಸ್ಕೃತಿಕ ಸಂಜೆ, ಸಿಹಿ ಅವಲಕ್ಕಿ ಪಾನಕ ಪಟಾಕಿ ವೈಭವ ಮೊದಲಾದ ಕಾರ್ಯಕ್ರಮಗಳೊಂದಿಗೆ ಬದಿಯಡ್ಕದಲ್ಲಿ ಸಾರ್ವಜನಿಕ ತುಳುನಾಡ ಬಲಿಯೇಂದ್ರ ಹಬ್ಬ ರಂಜಿಸಿತು. ಬದಿಯಡ್ಕ ಗ್ರಾಮ ಪಂಚಾಯತು ಅಧ್ಯಕ್ಷ ಕೆ. ಎನ್, ಕೃಷ್ಣ ಭಟ್ ಅವರು ಬಲಿಯೇಂದ್ರ ಪ್ರತಿಮೆಯೆದುರು ಹಣತೆಯನ್ನು ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಹಬ್ಬಗಳ ಆಚರಣೆಯ ಮೂಲಕ ಪರಂಪರೆಯನ್ನು ಉಳಿಸಬೇಕು ಎಂದು ಕರೆನೀಡಿದರು. ಬಲಿಯೇಂದ್ರ ಹಬ್ಬದ ಬಗ್ಗೆ ವಿಶೇಷ ಉಪನ್ಯಾಸ ನೀಡಿದ ಜಾನಪದ ತಜ್ಞ, ಸಾಂಸ್ಕೃತಿಕ ಚಿಂತಕ ಗೋಪಾಲಕೃಷ್ಣ ವಾಂತಿಚ್ಚಾಲು ಅವರು ತುಳುನಾಡಿಗೆ ಮಹಾಬಲಿ ಆಗಮಿಸುವ ಸಮಯ ದೀಪಾವಳಿಯಾಗಿದ್ದು ಬಲಿಯೇಂದ್ರ ಪರ್ಬವನ್ನು ಆಚರಿಸುವ ಮೂಲಕ ತುಳುಪರಂಪರೆಯನ್ನು ಉಳಿಸಬೇಕು ಎಂದು ಹೇಳಿದರು. ಹಬ್ಬದ ಆಚರಣೆಯ ಹಿನ್ನೆಲೆಯ ತಾತ್ವಿಕ ನೆಲೆಗಟ್ಟನ್ನು ಹಾಗೂ ಮಹತ್ವವನ್ನು ಅವರು ವಿವರಿಸಿದರು. ಕನರ್ಾಟಕ ಗಮಕ ಕಲಾಪರಿಷತ್ ಕೇರಳ ಘಟಕದ ಅಧ್ಯಕ್ಷ ಟಿ. ಶಂಕರನಾರಾಯಣ ಭಟ್, ಸಾಂಸ್ಕೃತಿಕ ಧುರೀಣ ಯಕ್ಷಗಾನ ಅರ್ಥಧಾರಿ ಕರಿಂಬಿಲ ಲಕ್ಷ್ಮಣ ಪ್ರಭು, ಸಾಹಿತಿಗಳಾದ ಡಾ. ಬೇ ಸೀ ಗೋಪಾಲಕೃಷ್ಣ ಭಟ್, ವೈ ಸತ್ಯನಾರಾಯಣ, ಡಾ.ನರೇಶ್ ಮುಳ್ಳೇರಿಯಾ ಮೊದಲಾದವರು ಉಪಸ್ಥಿತರಿದ್ದರು. ಶಂಕರ ಸ್ವಾಮಿಕೃಪಾ ಹಾಗೂ ತಂಡದವರಿಂದ ಪಾಡ್ದನ, ಜಾನಪದ ವೈಭವ ನಡೆಯಿತು. ಶಿಕ್ಷಕಿಯರಾದ ಪ್ರಭಾವತಿ ಕೆದಿಲಾಯ ಪುಂಡೂರು ಹಾಗೂ ಜ್ಯೋತ್ಸ್ನಾ ಕಡಂದೇಲು ಅವರಿಂದ ಸುಗಮಸಂಗೀತ, ಸರಕಾರಿ ಪ್ರೌಢಶಾಲೆ ಪೆರಡಾಲ, ನವಜೀವನ ಹಿರಿಯ ಪ್ರೌಢಶಾಲೆ, ಭಾರತೀ ವಿದ್ಯಾಪೀಠ ಹಾಗೂ ರಂಗಸಿರಿ ಸಾಂಸ್ಕೃತಿಕ ವೇದಿಕೆ ಬದಿಯಡ್ಕದ ವಿದ್ಯಾಥರ್ಿಗಳಿಂದ ನೃತ್ಯ, ಗಾನ, ಏಕಪಾತ್ರಾಭಿನಯ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ತಮ್ಮ ಪ್ರತಿಭೆಯನ್ನು ಪ್ರದಶರ್ಿಸಿದ ಮರಿಯಂ, ಶಂಸೀರ, ಐಶ್ವರ್ಯ, ರಮ್ಯಶ್ರೀ, ನವ್ಯಶ್ರೀ, ಕಾವ್ಯಶ್ರೀ, ಸೌಪಣರ್ಿಕ, ಸಜಿತ, ಶ್ರೀನಿಧಿ, ಚಿತ್ತರಂಜನ್,ಅಭಿಜ್ಞಾ ಭಟ್, ಶ್ರೀಜಾ ಉದನೇಶ್, ಶ್ರುತಿಶೀಲ, ಪ್ರಣಮ್ಯ ಮೊದಲಾದ ವಿದ್ಯಾಥರ್ಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸಿಹಿ ಅವಲಕ್ಕಿ ಪಾನಕವನ್ನು ವಿತರಿಸಲಾಯಿತು. ಪಟಾಕಿಗಳ ವರ್ಣವೈಭವ ಗಮನಸೆಳೆಯಿತು. ಶ್ರೀಶ ಪಂಜಿತಡ್ಕ ಸ್ವಾಗತಿಸಿ,ಕಾರ್ಯಕ್ರಮವನ್ನು ನಿರೂಪಿಸಿದರು. ಸುಂದರ ಬಾರಡ್ಕ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries