ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 12, 2017
ಕುಂಬ್ಡಾಜೆ ಗ್ರಾಮ ಪಂಚಾಯತು ಕೇರಳೋತ್ಸವ
ಬದಿಯಡ್ಕ: ಕೇರಳ ರಾಜ್ಯ ಯುವಜನ ಕ್ಷೇಮ ಬೋಡರ್ಿನ ಹಾಗೂ ಸ್ಥಳೀಯ ಆಡಳಿತ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಕುಂಬ್ಡಾಜೆ ಗ್ರಾಮಪಂಚಾಯತು ಕೇರಳೋತ್ಸವ ಅ.15 ವರೆಗೆ ನಡೆಯಲಿರುವುದು.
ಗ್ರಾಮ ಪಂಚಾಯತು ಅಧ್ಯಕ್ಷೆ ಫಾತಿಮತ್ ಝಹರ ಉದ್ಘಾಟಿಸಿ ಕೇರಳೋತ್ಸವವು ಜನರ ಒಗ್ಗೂಡಿಸುವ ಉತ್ಸವವಾಗಿದೆ. ಎಲೆಮರೆಯ ಪ್ರತಿಭೆಗಳಿಗೆ ಉತ್ತಮ ವೇದಿಕೆಯು ಅಗಿದೆ. ವಿವಿಧ ಹಂತಗಳಲ್ಲಿ ನಡೆಯುವ ಸ್ಪಧರ್ೆಗಳು ಜನರಲ್ಲಿ ಸ್ಪಧರ್ಾತ್ಮಕ ಮನೋಭಾವವನ್ನು ಬೀರುತ್ತದೆ ಎಂದು ಹೇಳಿದರು. ಪಂಚಾಯತು ಉಪಾಧ್ಯಕ್ಷ ಅನಂದ.ಕೆ ಮವ್ವಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಪಂಚಾಯತು ಸ್ಥಾಯೀ ಸಮಿತಿ ಅಧ್ಯಕ್ಷ ನ್ಯಾಯವಾದಿ ಮೊಹಮ್ಮದ್ ಕಾಸಿಂ, ಪಂಚಾಯತು ಸದಸ್ಯ ರವೀಂದ್ರ ರೈ ಗೋಸಾಡ, ಎಸ್.ಮೊಹಮ್ಮದ್, ಅಬ್ದುಲ್ ಕುಂಞಿ ಜಿ.ಟಿ, ಶಶಿಧರ ಟಿ, ಎಲಿಜಬೆತ್ ಕ್ರಾಸ್ತ, ಶಾಂತ ಎಸ್. ಭಟ್, ನಳಿನಿ, ಪಂಚಾಯತು ಕಾರ್ಯದಶರ್ಿ ನಾರಾಯಣನ್ ಕುಟ್ಟಿ, ಸಿಡಿಎಸ್ ಅಧ್ಯಕ್ಷೆ ಬೇಬಿ ಸಿ.ವಿ,ನಿವೃತ್ತ ಅಧ್ಯಾಪಕ ಸೂರ್ಯನಾರಾಯಣ ಮಾಸ್ತರ್, ಮೋಹನ್ ಮುಂತಾದವರು ಉಪಸ್ಥಿತರಿದ್ದರು.