ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 12, 2017
ಬಿಲ್ಲವ ಸೇವಾಸಂಘ ಎಣ್ಮಕಜೆ ಪಂಚಾಯತು ಸಮಿತಿ ಸಭೆ
ಪೆರ್ಲ: ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ ಎಣ್ಮಕಜೆ ಪಂಚಾಯತು ಸಮಿತಿ ವಿಶೇಷ ಸಭೆ ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲಾ ವಠಾರದಲ್ಲಿ ಇತ್ತೀಚೆಗೆ ಜರಗಿತು. ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಬಿಲ್ಲವ ಸಮಾಜದ ಹಿರಿಯ ಮುಖಂಡ ಚನಿಯಪ್ಪ ಪೂಜಾರಿ ಅಲಾರು ಅಧ್ಯಕ್ಷತೆ ವಹಿಸಿದ್ದರು. ಸಂಘಟನೆ ಜಿಲ್ಲಾ ಸಮಿತಿ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ ದೇರಂಬಳ, ಜಿಲ್ಲಾ ಸಮಿತಿ ಕಾರ್ಯದಶರ್ಿ ಚಂದ್ರಹಾಸ ಕಡಂಬಾರ್, ಜಿಲ್ಲಾ ಸಂಚಾಲಕ ಸಂಕಪ್ಪ ಸುವರ್ಣ ಬಾಡೂರು, ದಿನೇಶ್ ಮಂಗಲ್ಪಾಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸೀತಾರಾಮ ಮಾಸ್ಟರ್, ಬಿ.ಪಿ. ಶೇಣಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಮಿತಿಯ ಮಾಸಿಕ ಸಭೆ ನಡೆಸುವುದು, ಯುವ ಹಾಗೂ ಮಹಿಳಾ ಘಟಕವನ್ನು ರಚಿಸುವುದು ಹಾಗೂ ಸಂಘಟನೆಗೆ ಸ್ವಂತ ಜಾಗ ಕಂಡುಕೊಳ್ಳುವ ಮೂಲಕ ಸುಸಜ್ಜಿತ ಕಟ್ಟಡ ನಿಮರ್ಾಣದ ಬಗ್ಗೆ ತೀಮರ್ಾನ ಕೈಗೊಳ್ಳಲಾಯಿತು. ಪಂಚಾಯತು ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಗೌರವಾಧ್ಯಕ್ಷರಾಗಿ ಚನಿಯಪ್ಪ ಪೂಜಾರಿ ಅಲಾರು, ಅಧ್ಯಕ್ಷರಾಗಿ ಶಿವಪ್ಪ ಪೂಜಾರಿ ಎಣ್ಮಕಜೆ, ಉಪಾಧ್ಯಕ್ಷರಾಗಿ ಸದಾನಂದ ಬೈರಡ್ಕ, ಸುಬ್ಬಣ್ಣ ಪೂಜಾರಿ ಬೆದ್ರಂಪಳ್ಳ, ಪ್ರಧಾನ ಕಾರ್ಯದಶರ್ಿಯಾಗಿ ಪದ್ಮನಾಭ ಸುವರ್ಣ ಬಜಕೂಡ್ಲು, ಕೋಶಾಧಿಕಾರಿಯಾಗಿ ಸುನಿತ್ ಕುಮಾರ್ ಡಿ.ಕಾಟುಕುಕ್ಕೆ, ಜೊತೆಕಾರ್ಯದಶರ್ಿಗಳಾಗಿ ರಾಜಪ್ಪ ಕಾಟುಕುಕ್ಕೆ, ರಾಮಣ್ಣ ಬಾಂಕಾನ, ಸರೋಜಾ ಕಾನ, ಲೆಕ್ಕಪರಿಶೋಧಕರಾಗಿ ನಾರಾಯಣ ಪೂಜಾರಿ ಕುದ್ವ ಹಾಗೂ 19ಮಂದಿ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ನಾರಾಯಣ ಪೂಜಾರಿ ಕುದ್ವ ಸ್ವಾಗತಿಸಿ, ಪದ್ಮನಾಭ ಸುವರ್ಣ ವಂದಿಸಿದರು.