ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 13, 2017
ಜಿಎಸ್ಟಿ ವ್ಯಾಪ್ತಿಗೆ ರಿಯಲ್ ಎಸ್ಟೇಟ್
ವಾಷಿಂಗ್ಟನ್: `ರಿಯಲ್ ಎಸ್ಟೇಟ್ ವಹಿವಾಟನ್ನು ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವ್ಯಾಪ್ತಿಗೆ ತರುವ ಬಗ್ಗೆ ಮುಂದಿನ ತಿಂಗಳು ನಡೆಯಲಿರುವ ಜಿಎಸ್ಟಿ ಮಂಡಳಿ ಸಭೆಯಲ್ಲಿ ಚಚರ್ಿಸಲಾಗುವುದು' ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
`ಗುವಾಹಟಿಯಲ್ಲಿ ನವೆಂಬರ್ 9ರಂದು ನಡೆಯಲಿರುವ ಜಿಎಸ್ಟಿ ಮಂಡಳಿ ಸಭೆಯಲ್ಲಿ ಈ ವಿಷಯವನ್ನು ವಿಸ್ತೃತವಾಗಿ ಚಚರ್ಿಸಲಾಗುವುದು. ಗರಿಷ್ಠ ಪ್ರಮಾಣದಲ್ಲಿ ತೆರಿಗೆ ತಪ್ಪಿಸುವ ಮತ್ತು ಅಪಾರ ಪ್ರಮಾಣದಲ್ಲಿ ನಗದು ವಹಿವಾಟು ನಡೆಯುವ ರಿಯಲ್ ಎಸ್ಟೇಟ್ ವಲಯವು ಈಗಲೂ ಜಿಎಸ್ಟಿ ವ್ಯಾಪ್ತಿಯಿಂದ ಹೊರಗೆ ಇದೆ.
`ಕೆಲ ರಾಜ್ಯ ಸಕರ್ಾರಗಳು ಈ ವಹಿವಾಟನ್ನು ಜಿಎಸ್ಟಿ ವ್ಯಾಪ್ತಿಗೆ ತರಲು ಒಲವು ತೋರಿಸಿವೆ. ಇನ್ನೂ ಕೆಲ ರಾಜ್ಯಗಳು ವಿರೋಧಿಸಿವೆ. ಈ ಬಗೆಯ ಭಿನ್ನಾಭಿಪ್ರಾಯವನ್ನು ಚಚರ್ೆ ಮೂಲಕ ಬಗೆಹರಿಸಿ ಒಂದು ಅಂತಿಮ ನಿಧರ್ಾರಕ್ಕೆ ಬರಲು ಪ್ರಯತ್ನಿಸಲಾಗುವುದು. ಈ ವಹಿವಾಟನ್ನು ಜಿಎಸ್ಟಿ ವ್ಯಾಪ್ತಿಗೆ ತರಲು ಸಮರ್ಥನೀಯ ಕಾರಣಗಳಿವೆ ಎಂದು ನಾನು ಬಲವಾಗಿ ನಂಬಿರುವೆ.
`ಸದ್ಯಕ್ಕೆ ಕಟ್ಟಡ, ಸಂಕೀರ್ಣ ನಿಮರ್ಾಣ, ಕಟ್ಟಡಗಳ ಪೂರ್ಣ ಅಥವಾ ಭಾಗಶಃ ಮಾರಾಟದ ಮೇಲೆ ಶೇ 12ರಷ್ಟು ಜಿಎಸ್ಟಿ ವಿಧಿಸಲಾಗುತ್ತಿದೆ. ಆದರೆ, ಭೂಮಿ ಮತ್ತು ಇತರ ಸ್ಥಿರಾಸ್ತಿಗಳನ್ನು ಜಿಎಸ್ಟಿ ವ್ಯಾಪ್ತಿಯಿಂದ ಹೊರಗೆ ಇಡಲಾಗಿದೆ' ಎಂದರು.
ಹಾರ್ವಡರ್್ ವಿಶ್ವವಿದ್ಯಾನಿಲಯದಲ್ಲಿ ನಡೆದ ವಾಷರ್ಿಕ ಮಹೀಂದ್ರಾ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಭಾರತದಲ್ಲಿನ ತೆರಿಗೆ ಸುಧಾರಣೆ ವಿಷಯದ ಬಗ್ಗೆ ಮಾತನಾಡುತ್ತಿದ್ದರು.
ಒಂದು ವಾರದ ಅಮೆರಿಕ ಭೇಟಿಯಲ್ಲಿ ಇರುವ ಜೇಟ್ಲಿ ಅವರು, ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಮತ್ತು ವಿಶ್ವಬ್ಯಾಂಕ್ನ ವಾಷರ್ಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ.