ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 06, 2017
ಬದಿಯಡ್ಕ : ಮುಳ್ಳೇರಿಯ ಹವ್ಯಕ ಮಂಡಲದ ಪಳ್ಳತ್ತಡ್ಕ ಗೋಕೃಷಿ ವಿಭಾಗದ ನೇತೃತ್ವದಲ್ಲಿ ದೇಶೀಯ ಗೋವಿನ ಗೋಮಯದ ಸಾವಯವ ಗೊಬ್ಬರ ತಯಾರಿಕಾ ಘಟಕವು ಶುಕ್ರವಾರ ಬದಿಯಡ್ಕ ಸಮೀಪದ ದಂಬೆಮೂಲೆ `ಗೋಕುಲ'ದಲ್ಲಿ ಆರಂಭವಾಗುವುದರೊಂದಿಗೆ ಗೋರಕ್ಷಣಾ ಆಂದೋಲಕ್ಕೆ ಮತ್ತೊಂದು ಮಹತ್ತರ ಹೆಜ್ಜೆಯನ್ನಿಟ್ಟಂತಾಯಿತು.
ಬೆಳಗ್ಗೆ ವೇದಮೂತರ್ಿ ಪಳ್ಳತ್ತಡ್ಕ ಪರಮೇಶ್ವರ ಭಟ್ಟರು ಗಣಪತಿ ಹೋಮವನ್ನು ನಡೆಸಿಕೊಟ್ಟರು. ಸಾಮೂಹಿಕ ಗೋಪೂಜೆಯನ್ನು ಈ ಸಂದರ್ಭದಲ್ಲಿ ಮಾಡಲಾಯಿತು.
ನಂತರ ನಡೆದ ಸಭಾಕಾರ್ಯಕ್ರಮದಲ್ಲಿ ಬದಿಯಡ್ಕ ಗ್ರಾಮಪಂಚಾಯತು ಸದಸ್ಯ ಲಕ್ಷ್ಮೀನಾರಾಯಣ ಪೈ ಅಧ್ಯಕ್ಷತೆ ವಹಿಸಿದ್ದರು. ಪಳ್ಳತ್ತಡ್ಕ ವಲಯ ಗೋಕೃಷಿ ವಿಭಾಗ ಪ್ರಧಾನ ನಾರಾಯಣ ಭಟ್ ದಂಬೆಮೂಲೆ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಗೋವಿನ ಸಗಣಿಯಿಂದ ಗೋವನ್ನು, ನಮ್ಮ ಕೃಷಿಯನ್ನು, ನಮ್ಮ ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಕಾಪಾಡಿಕೊಳ್ಳಬಹುದು, ಶ್ರೀ ಗುರುಗಳ ಭಾರತೀಯ ಗೋಗ್ರಾಮ ಯೋಜನೆಯ ಮೂಲ ಉದ್ದೇಶವನ್ನಿಟ್ಟುಕೊಂಡು ಇಲ್ಲಿ ಗೊಬ್ಬರ ತಯಾರಿಕಾ ಘಟಕವನ್ನು ಪ್ರಾರಂಭಿಸಲಾಗಿದೆ ಎಂದರು.
ಪಳ್ಳತ್ತಡ್ಕ ವಲಯ ಅಧ್ಯಕ್ಷ ಗುಣಾಜೆ ರಾಮಕೃಷ್ಣ ಭಟ್ ಯಂತ್ರಕ್ಕೆ ಚಾಲನೆಯನ್ನು ನೀಡಿ ಮಾತನಾಡಿದರು.
ನೆಕ್ಕರೆಕಳೆಯ ಭಾರತೀಯ ಗೋವಿಜ್ಞಾನ ಅಧ್ಯಯನ ಕೇಂದ್ರದ ಸುಬ್ರಹ್ಮಣ್ಯ ಪ್ರಸಾದ ಮುಖ್ಯ ಭಾಷಣ ಮಾಡಿ, ಭಾರತದ 68% ಶೇಕಡಾ ಕೃಷಿಭೂಮಿಯಲ್ಲಿ ಅನಾದಿ ಕಾಲದಿಂದ ಗೋ ಆಧಾರಿತ ಕೃಷಿಯೇ ನಡೆದುಬರುತ್ತಿತ್ತು. ಕ್ಷೀರಕ್ರಾಂತಿ ಹಾಗೂ ಹಸಿರುಕ್ರಾಂತಿಯಿಂದಾಗಿ ಪೂಜನೀಯ ಗೋಮಾತೆ ಇಂದು ಕಟುಕರ ಪಾಲಾಗುತ್ತಿದೆ. ವಿಜ್ಞಾನಿಗಳು ಸರಿಯಾದ ಅಧ್ಯಯನವನ್ನು ಮಾಡದೆ ರಾಸಾಯನಿಕ ಗೊಬ್ಬರಗಳನ್ನು ಕೃಷಿಕರ ಮೇಲೆ ಪ್ರಾಯೋಗಿಕವಾಗಿ ಬಳಸಿದರು. ಇದರ ಫಲವಾಗಿ ರೈತರ ಕೃಷಿಭೂಮಿಯೆಲ್ಲ ಹಾಳಾಗಿದೆ. ಒಂದು ಬಿಂದು ದೇಶೀಯ ಗೋವಿನ ಸಗಣಿಯಲ್ಲಿ ಒಂದು ಆನೆ ಮಲಗುವಷ್ಟು ಸ್ಥಳ ಶುದ್ಧಿಯಾಗುತ್ತದೆ. ದೇಶೀಯ ತಳಿಯ ದನದ 1 ಗ್ರಾಂ ಸಗಣಿಯಲ್ಲಿ 700 ಕೋಟಿ ಸೂಕ್ಷ್ಮಾಣುಗಳು ಇವೆ. ಈ ಸಾವಯವ ಗೊಬ್ಬರವನ್ನು ತಮ್ಮ ಕೃಷಿಭೂಮಿಯಲ್ಲಿ ಉಪಯೋಗಿಸುವ ಮೂಲಕ ಹಿರಿಯರ ಕಾಲದ ಆರೋಗ್ಯವಂತ ಜೀವನ ನಮ್ಮದಾಗಲಿ ಎಂದರು.
ಗೋಕರ್ಣಮಂಡಲಾಧ್ಯಕ್ಷೆ ಈಶ್ವರಿ ಬೇರ್ಕಡವು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಶ್ರೀಮಠದ ಗೋಶಾಲೆ ವಿಭಾಗ ಪ್ರಧಾನ ಮೀನಗದ್ದೆ ಶ್ರೀಕೃಷ್ಣ ಭಟ್ ಶುಭಹಾರೈಸಿದರು. ಮುಳ್ಳೇರಿಯ ಹವ್ಯಕ ಮಂಡಲ ಕಾರ್ಯದಶರ್ಿ ಬಾಲಸುಬ್ರಹ್ಮಣ್ಯ ಸರ್ಪಮಲೆ, ಬಜಕೂಡ್ಲು ಅಮೃತಧಾರಾ ಗೋಶಾಲೆಯ ಅಧ್ಯಕ್ಷ ಜಗದೀಶ್ ಗೋಳಿತ್ತಡ್ಕ, ವಿವಿಧ ವಲಯಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸತ್ಯನಾರಾಯಣ ಭಟ್ ದಂಬೆಮೂಲೆ ಅತಿಥಿಗಳನ್ನು ಪರಿಚಯಿಸಿದರು.