ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 20, 2017
ಇ.ವಿಜ್ಞಾನ ಕೇಂದ್ರ ಉದ್ಘಾಟನೆ
ಮಂಜೇಶ್ವರ: ಚಿನಾಲದ ನವಯುವ ಕ್ರಂಥಾಲಯದಲ್ಲಿ ನೂತನವಾಗಿ ಆರಂಭಗೊಳ್ಳಲಿರುವ ಇ.ವಿಜ್ಞಾನ ಕೇಂದ್ರವನ್ನು ಅ.22 ರಂದು ಬೆಳಿಗ್ಗೆ 10 ಕ್ಕೆ ಮೀಂಜ ಗ್ರಾಮ ಪಂಚಾಯತು ಅಧ್ಯಕ್ಷೆ ಸಂಶಾದ್ ಶುಕೂರ್ ಉದ್ಘಾಟಿಸುವರು. ತಾಲೂಕು ಲೈಬ್ರರಿ ಕೌನ್ಸಿಲ್ ಅಧ್ಯಕ್ಷ ಎಸ್.ನಾರಾಯಣ ಭಟ್ ಅಧ್ಯಕ್ಷತೆ ವಹಿಸುವರು. ಮೀಂಜ ಗ್ರಾಮ ಪಂಚಾಯತು ಸ್ಥಾಯಿ ಸಮಿತಿ ಅಧ್ಯಕ್ಷ ಕೃಷ್ಣ ಕೆ. ಸಹಿತ ವಿವಿಧ ವಲಯಗಳ ಗಣ್ಯರು ಉಪಸ್ಥಿತರಿರುವರೆಂದು ಸಂಭಂಧಪಟ್ಟವರು ತಿಳಿಸಿದ್ದಾರೆ.