ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 31, 2017
ಸಚಿವರಿಗೆ ಕರೆಮಾಡಿ, ಸಮಸ್ಯೆ ಹೇಳಿ
ಬದಿಯಡ್ಕ: ರೈತರು ತಮ್ಮ ಸಂಕಷ್ಟಗಳನ್ನು ಇನ್ನು ಮುಂದೆ ನೇರವಾಗಿ ರಾಜ್ಯದ ಕೃಷಿ ಸಚಿವರಿಗೆ ಕರೆ ಮಾಡಿ ಮಾಹಿತಿ ನೀಡಬಹುದು. ಈ ನಿಟ್ಟಿನಲ್ಲಿ ಕೃಷಿ ಸಚಿವರ ಸನಿಹ (ಅರಿಗೆ) ಎಂಬ ವಿನೂತನ ಕಾರ್ಯಕ್ರಮಕ್ಕೆ ನವೆಂಬರ್ 1ರಂದು ಚಾಲನೆ ನೀಡಲಾಗುವುದು ಎಂದು ಕೃಷಿ ಸಚಿವ ವಿ.ಎಸ್.ಸುನಿಲ್ಕುಮಾರ್ ತಿಳಿಸಿದ್ದಾರೆ.
ಅದರಂತೆ ಪ್ರತಿ ತಿಂಗಳ ಮೊದಲ ಬುಧವಾರ ಸಂಜೆ 5.30ರಿಂದ 6.30ರ ವರೆಗೆ ಕೃಷಿಕರು ಸಚಿವರನ್ನು ಫೋನ್ನಲ್ಲಿ ನೇರವಾಗಿ ಸಂಪಕರ್ಿಸಿ ತಮ್ಮ ಸಮಸ್ಯೆಗಳನ್ನು ಅವರ ಗಮನಕ್ಕೆ ತರಬಹುದು. ಅದಕ್ಕೆ ಸಚಿವರು ಪರಿಹಾರ ಕ್ರಮಗಳನ್ನೂ ಕೈಗೊಳ್ಳುವರು.
18004251661 ಎಂಬ ಟೋಲ್ ಫ್ರೀ ನಂಬರ್ಗೆ ಕರೆ ಮಾಡಿ ದೂರು ಅಥವಾ ಸಮಸ್ಯೆಗಳನ್ನು ಹೇಳಬಹುದು. ಮಾತ್ರವಲ್ಲದೆ ಇತರ ದಿನಗಳಲ್ಲಿ ಇದೇ ನಂಬರ್ಗೆ ಕರೆ ಮಾಡಿ ರೈತರು ರಾಜ್ಯ ಕೃಷಿ ಇಲಾಖೆಯ ಅಧಿಕಾರಿಗಳಲ್ಲಿ ತಮ್ಮ ಸಮಸ್ಯೆಗಳನ್ನು ತಿಳಿಸಬಹುದು ಎಂದು ಸಚಿವರು ಹೇಳಿದ್ದಾರೆ.