ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 04, 2017
ನೂತನ ಕಟ್ಟಡದ ಉದ್ಘಾಟನೆ ಮತ್ತು ವಾಷರ್ಿಕೋತ್ಸವ
ಉಪ್ಪಳ: ಬಾಯಾರು ಸಮೀಪದ ಮುಳಿಗದ್ದೆ ಹೆದ್ದಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡದ ಉದ್ಘಾಟನೆ ಮತ್ತು ಶಾಲಾ ವಾಷರ್ಿಕೋತ್ಸವ ಅ. 7 ರಂದು ಶನಿವಾರ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಶನಿವಾರ ಬೆಳಿಗ್ಗೆ 9.30ಕ್ಕೆ ಶಾಲಾ ಪ್ರಬಂಧಕ ಎನ್.ರಾಮಕೃಷ್ಣ ಭಟ್ ಧ್ವಜಾರೋಹಣಗೈದು ಚಾಲನೆ ನೀಡುವರು. 11 ಗಂಟೆಗೆ ನಡೆಯಲಿರುವ ನೂತನ ಕಟ್ಟಡದ ಉದ್ಘಾಟನೆ ಮತ್ತು ವಾಷರ್ಿಕೋತ್ಸವವನ್ನು ಮಂಜೇಶ್ವರ ಶಾಸಕ ಪಿ.ಬಿ.ಅಬ್ದುಲ್ ರಸಾಕ್ ನಿರ್ವಹಿಸುವರು. ಪೈವಳಿಕೆ ಗ್ರಾಮ ಪಂಚಾಯತು ಅಧ್ಯಕ್ಷೆ ಭಾರತಿ ಜೆ.ಶೆಟ್ಟಿ ಅಧ್ಯಕ್ಷತೆ ವಹಿಸುವರು.ಕನರ್ಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಡಾ.ಟಿ.ಶ್ಯಾಮ್ ಭಟ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.ಉದ್ಯಮಿ ಆನಂದಕುಮಾರ್ ಎಸ್.ಕೆ ಉಪಸ್ಥಿತರಿರುವರು. ಬ್ಲಾಕ್ ಪಂಚಾಯತು ಅಧ್ಯಕ್ಷ ಎ.ಕೆ.ಎಂ.ಅಶ್ರಫ್, ಜಿಲ್ಲಾ ಪಂಚಾಯತು ಸದಸ್ಯ ನ್ಯಾಯವಾದಿ ಕೆ.ಶ್ರೀಕಾಂತ್, ಬ್ಲಾಕ್ ಪಂಚಾಯತು ಸದಸ್ಯ ಕೆ.ಆರ್.ಜಯಾನಂದ, ಗಣ್ಯರಾದ ಸೋಮಶೇಖರ ಜೆ.ಎಸ್, ಬಿ.ವಿ.ರಾಜನ್, ಫಾತಿಮತ್ ಝೌರಾ, ಭವ್ಯಾ ಬಿ, ಉಪಜಿಲ್ಲಾ ವಿದ್ಯಾಧಿಕಾರಿ ನಂದಿಕೇಶನ್, ಮಂಜೇಶ್ವರ ಬ್ಲಾಕ್ ವಿದ್ಯಾಭ್ಯಾಸ ಕಾರ್ಯಕ್ರಮ ಅಧಿಕಾರಿ ವಿಜಯಕುಮಾರ್ ಪಿ, ಹಿರಿಯ ವೈದ್ಯ ಡಾ.ಬಿ.ಎಸ್.ರಾವ್ ಮೊದಲಾದವರು ಉಪಸ್ಥಿತರಿದ್ದು ಶುಭಹಾರೈಸುವರು. ಶಾಲಾ ಪ್ರಬಂಧಕ ಎನ್.ರಾಮಕೃಷ್ಣ ಭಟ್, ಮಾತೃಸಂಘದ ಅಧ್ಯಕ್ಷೆ ಭಾಗೀರಥಿ, ಹಳೆ ವಿದ್ಯಾಥರ್ಿ ಸಂಘದ ಅಧ್ಯಕ್ಷ ಮೋನಪ್ಪ ಶೆಟ್ಟಿ ಕೆ ಉಪಸ್ಥಿತರಿರುವರು. ಎಲ್ಕೆ.ಜಿ, ಯುಕೆಜಿ ಮತ್ತು ಶಾಲಾ ಮಕ್ಕಳಿಂದವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಜೆ 6 ರಿಂದ ಶಾಲಾ ಹಳೆ ವಿದ್ಯಾಥರ್ಿಗಳು ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ಬಯಲಾಟ ನಡೆಯಲಿದೆ.