ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 11, 2017
ಕುಂಬಳೆಯಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಕ್ಷೇತ್ರ ನೂತನ ಸಮಿತಿ ರಚನೆ
ಕುಂಬಳೆ: ಕುಂಬಳೆಯಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನವು ಅಜೀಣರ್ಾವಸ್ಥೆಯಲ್ಲಿರುವುದರಿಂದ ಊರಿನ ಎಲ್ಲಾ ವಿಭಾಗಗಳ ಭಕ್ತರು ಸೇರಿಕೊಂಡು ಕುಂಬಳೆ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಾಲಯದ ವಠಾರದಲ್ಲಿ ಸಾರ್ವಜನಿಕ ಸಭೆಯನ್ನು ಇತ್ತೀಚೆಗೆ ನಡೆಸಿದರು.
ಸಭೆಯಲ್ಲಿ ನೂತನ ಶ್ರೀ ಅಯ್ಯಪ್ಪ ಕ್ಷೇತ್ರಕ್ಕೆ ಬೇಕಾಗಿರುವ ಸ್ಥಳ ಕಂಡುಕೊಳ್ಳುವಿಕೆ, ಶಬರಿಮಲೆಯ ಸನ್ನಿದಾನದ ವಾಸ್ತು ಪ್ರಕಾರದ ದೇವಸ್ಥಾನ ನಿಮರ್ಾಣ ಹಾಗೂ ಕಳೆದ 40 ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಶ್ರೀ ಅಯ್ಯಪ್ಪ ದೀಪೋತ್ಸವದ ಕುರಿತು ಚಚರ್ಿಸಲಾಯಿತು.
ಇದೇ ಸಂದರ್ಭದಲ್ಲಿ ನೂತನ ದೇವಸ್ಥಾನ ಸಮಿತಿಯನ್ನು ರೂಪಿಸಲಾಯಿತು. ಗೌರವಾಧ್ಯಕ್ಷರಾಗಿ ವಿಶ್ವನಾಥ ನಾಯಕ್ ಕಂಚಿಕಟ್ಟೆ , ಅಧ್ಯಕ್ಷರಾಗಿ ಎಂ.ರಾಮಚಂದ್ರ ಗಟ್ಟಿ ಮಳಿ, ಉಪಾಧ್ಯಕ್ಷರಾಗಿ ಕರುಣಾಕರ ಅಲಿಯಾಸ್ ಕರಿಯಪ್ಪ ಬೆಟ್ರಂಪಾಡಿ, ಕಾಯದಶರ್ಿಯಾಗಿ ಅಮರನಾಥ್ ಆಚಾರ್ಯ ಶಾಂತಿಪಳ್ಳ, ಸಹ ಕಾರ್ಯದಶರ್ಿಯಾಗಿ ನಾರಾಯಣ ರೈ ಬಂಬ್ರಾಣ, ಕೋಶಾಧಿಕಾರಿಯಾಗಿ ಗೋಕುಲ್ದಾಸ್ ಕೆ. ಕೃಷ್ಣನಗರ, ಲೆಕ್ಕಪರಿಶೋಧಕರಾಗಿ ನ್ಯಾಯವಾದಿ ಕೆ.ರಾಮ ಪಾಟಾಳಿ ಕುಂಬಳೆ ಹಾಗೂ ಇತರ 20 ಮಂದಿಯನ್ನೊಳಗೊಂಡ ದೇವಾಲಯ ಸಮಿತಿಯನ್ನು ರಚಿಸಲಾಯಿತು. ಈ ಸಮಿತಿಯನ್ನು ರಿಜಿಸ್ಟ್ರೇಷನ್ ಮಾಡಲು ನಿರ್ಧರಿಸಲಾಯಿತು.
ಸಮಿತಿ ರಿಜಿಸ್ಟ್ರೇಷನ್ ಆದ ಬಳಿಕ ನವೆಂಬರ್ ತಿಂಗಳಲ್ಲಿ 41ನೇ ವರ್ಷದ ಕುಂಬಳೆ ಶ್ರೀ ಅಯ್ಯಪ್ಪ ದೀಪೋತ್ಸವಕ್ಕೆ ಸಂಬಂಧಪಟ್ಟು ವಿವಿಧ ವೈದಿಕ, ಧಾಮರ್ಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಹಾಗೂ ಎಲ್ಲಾ ವಿಭಾಗದ ಪ್ರತ್ಯೇಕ ದೀಪೋತ್ಸವ ಸಮಿತಿಗಳನ್ನು ರೂಪಿಸಲು ನಿರ್ಧರಿಸಲಾಯಿತು.
41ನೇ ವರ್ಷದ ಶ್ರೀ ಅಯ್ಯಪ್ಪ ದೀಪೋತ್ಸವ ಸಮಿತಿಗಳನ್ನು ರಚಿಸುವ ಸಂದರ್ಭದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಯ ಎಲ್ಲಾ ಭಕ್ತಾದಿಗಳು ಸಕ್ರಿಯವಾಗಿ ಭಾಗವಹಿಸಬೇಕೆಂದು ನೂತನ ದೇವಸ್ಥಾನ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ವಿನಂತಿಸಿದ್ದಾರೆ.