ಹೋರಾಟ ಸಮಿತಿಯಿಂದ ಪ್ರತಿಭಟನೆ ಇಂದು
ಬದಿಯಡ್ಕ: ಕನರ್ಾಟಕ ರಾಜ್ಯೋತ್ಸವದ ಅಂಗವಾಗಿ ಗಡಿನಾಡು ಕಾಸರಗೋಡು ಅನ್ಯಾಯವಾಗಿ ಕೇರಳ ಪಾಲಾಗಿ ಬಳಿಕ ಅನುಭವಿಸುತ್ತಿರುವ ವಿವಿಧ ಕನ್ನಡ ಭಾಷಿಗರ ಮೇಲಿನ ಸವಾರಿಯನ್ನು ಖಂಡಿಸಿ ವಿವಿಧ ಕನ್ನಡ ಹೋರಾಟ ಸಮಿತಿಗಳ ಒಕ್ಕೂಟದ ನೇತೃತ್ವದಲ್ಲಿ ನ.1 ರಂದು ಸಂಜೆ 4.30ಕ್ಕೆ ಬದಿಯಡ್ಕ ಪೇಟೆಯಲ್ಲಿ ಪ್ರತಿಭಟನಾ ಸಭೆ ಆಯೋಜಿಸಲಾಗಿದೆ ಎಮದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕನ್ನಡ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಮದು ಸಂಘಟಕರು ವಿನಂತಿಸಿದ್ದಾರೆ.