ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 29, 2017
ಕನ್ನಡ ಶಿಕ್ಷಕ ಹುದ್ದೆ ರದ್ದು ಆದೇಶಕ್ಕೆ ತಡೆ
ಕಾಸರಗೋಡು: ಕೀಕಾನ ಆರ್ ಆರ್ ಎಂ ಜಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿದ್ದ ಎರಡು ಕನ್ನಡ ಅಧ್ಯಾಪಕ ಹುದ್ದೆ ರದ್ದುಗೊಳಿಸಿದ ಬೇಕಲ ಉಪಜಿಲ್ಲಾ ಶಿಕ್ಷಣಾಧಿಕಾರಿಗಳ ಆದೇಶಕ್ಕೆ ವಿದ್ಯಾಭ್ಯಾಸ ಉಪನಿದರ್ೇಶಕರು (ಡಿಡಿಇ)ತಡೆಯೊಡ್ಡಿದ್ದಾರೆ.
ಅಧ್ಯಾಪಕ ಹುದ್ದೆ ರದ್ದುಪಡಿಸಿದ ಸಂಬಂಧ ಶಾಲಾ ಮುಖ್ಯೋಪಾಧ್ಯಾಯ ಹಾಗು ರಕ್ಷಕ ಶಿಕ್ಷಕ ಸಂಘ ಜಿಲ್ಲಾ ಶಿಕ್ಷಣ ಉಪನಿದರ್ೇಶಕರಿಗೆ ಸಲ್ಲಿಸಿದ್ದ ಮೇಲ್ಮನವಿಯ ಮೇರೆಗೆ ಈ ಮಹತ್ವದ ತೀಮರ್ಾನ ಕೈಗೊಳ್ಳಲಾಗಿದೆ.
ಕನ್ನಡಿಗರು ಬಹುಸಂಖ್ಯೆಯಲ್ಲಿರುವ ಕೀಕಾನ ಶಾಲೆಯ ಇರುವ ಇಬ್ಬರು ಕನ್ನಡ ಶಿಕ್ಷಕರ ಹುದ್ದೆ ರದ್ದುಗೊಳಿಸಲು ನೀಡೆದ ಆದೇಶ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಶಾಲಾ ರಕ್ಷಕ ಶಿಕ್ಷಕ ಸಂಘ ಈ ಬಗ್ಗೆ ನಡೆಸಿದ ಪ್ರತಿಭಟನೆಗೆ ಭಾರೀ ಬೆಂಬಲವೂ ವ್ಯಕ್ತವಾಗಿತ್ತು. ಜೊತೆಗೆ ಸಚಿವರಾದ ರವೀಂದ್ರನಾಥ್, ಇ.ಚಂದ್ರಶೇಖರನ್, ಶಾಸಕ ಕೆ.ಕುಂಞಿರಾಮನ್ ರವರಿಗೆ ಮನವಿ ಸಲ್ಲಿಸಿ ಕನ್ನಡ ಅಧ್ಯಾಪಕ ಹುದ್ದೆ ಉಳಿಸಿಕೊಳ್ಳುವಂತೆ ವಿನಂತಿಸಲಾಗಿತ್ತು. ಇದೀಗ ಉಪಜಿಲ್ಲಾ ಶಿಕ್ಷಣಾಧಿಕಾರಿಯ ಆದೇಶಕ್ಕೆ ಜಿಲ್ಲಾ ಶಿಕ್ಷಣ ಉಪನಿದರ್ೇಶಕರು ತಡೆತಂದಿರುವುದು ಕನ್ನಡಿಗರ ಶ್ಲಾಘನೆ ಮತ್ತು ಅಲ್ಪಸಂಖ್ಯಾತ ಕನ್ನಡಿಗರ ಮೇಲಿನ ಸವಾರಿಗೆ ನ್ಯಾಯೋಚಿತ ಕ್ರಮವೆಂದು ಅಭಿಪ್ರಾಯಪಡಲಾಗಿದೆ.