ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 20, 2017
'ವೈಯಕ್ತಿಕ ಕಾರಣ'ಗಳಿಗಾಗಿ ಸಾಲಿಸಿಟರ್ ಜನರಲ್ ರಂಜಿತ್ ಕುಮಾರ್ ರಾಜೀನಾಮೆ
ನವದೆಹಲಿ: ಸಾಲಿಸಿಟರ್ ಜನರಲ್ ರಂಜಿತ್ ಕುಮಾರ್ ರಾಜೀನಾಮೆ ನೀಡಿದ್ದಾರೆ, ವೈಯಕ್ತಿಕ ಕಾರಣಗಳಿಗೆ ರಾಜೀನಾಮೆ ನೀಡುತ್ತಿರುವುದಾಗಿ ರಂಜಿತ್ ಕುಮಾರ್ ಹೇಳಿದ್ದಾರೆ. 2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ರಂಜಿತ್ ಕುಮಾರ್ ರನ್ನು ಸಾಲಿಸಿಟರ್ ಜನರಲ್ ಆಗಿ ನೇಮಿಸಲಾಗಿತ್ತು. ಹಲವು ಪ್ರಮುಖ ಪ್ರಕರಣಗಳಲ್ಲಿ ರಂಜಿತ್ ಕುಮಾರ್ ಕೇಂದ್ರ ಸರಕಾರವನ್ನು ಸುಪ್ರಿಂ ಕೋಟರ್್ ನಲ್ಲಿ ಪ್ರತಿನಿಧಿಸಿದ್ದರು. ಕಳೆದ ಜೂನ್ ನಲ್ಲಿ ರಂಜಿತ್ ಕುಮಾರ್ ಸೇವಾ ಅವಧಿಯನ್ನು ವಿಸ್ತರಣೆ ಮಾಡಲಾಗಿತ್ತು. ಹೀಗಿದ್ದೂ ತಮ್ಮ ವೈಯಕ್ತಿಕ ವಕೀಲಿ ಅಭ್ಯಾಸ ಮುಂದುವರೆಸಲು ರಂಜಿತ್ ಕುಮಾರ್ ರಾಜೀನಾಮೆ ನೀಡಿದ್ದಾರೆ.